ಅಂಕಿತಾ ಲೋಖಂಡೆ ಬೆಡ್‌ ರೂಮ್‌ ಫೋಟೋ ಶೂಟ್‌ ಮೇಲೆ ನೆಟ್ಟಿಗರ ಕೆಂಗಣ್ಣು

First Published Jan 18, 2023, 3:19 PM IST

ಟಿವಿ ಮತ್ತು ಚಲನಚಿತ್ರ ನಟಿ ಅಂಕಿತಾ ಲೋಖಂಡೆ (Ankita Lokhande) ಅವರ ಕೆಲವು ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ, ಇದರಲ್ಲಿ ಅವರು ತಮ್ಮ ಪತಿ ವಿಕ್ಕಿ ಜೈನ್ ಅವರೊಂದಿಗೆ ಬೆಡ್‌ ರೂಮ್‌ನಲ್ಲಿ ಪೋಸ್ ನೀಡುತ್ತಿದ್ದಾರೆ. ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ನಟಿ ಸ್ವತಃ ಈ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ಅಂಕಿತಾ ಕಪ್ಪು ಪೈಟಿನಿ ಸೀರೆಯಲ್ಲಿ ಪರಿಪೂರ್ಣ ಮರಾಠಿ ವಧುವಿನಂತೆ ಕಾಣುತ್ತಿದ್ದಾರೆ. ಅದೇ ಸಮಯದಲ್ಲಿ, ಅವರ ಪತಿ ವಿಕ್ಕಿ ಜೈನ್ ಕೂಡ ಕಪ್ಪು ಕುರ್ತಾದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಆದರೆ, ಬೆಡ್‌ರೂಮ್‌ನಲ್ಲಿರುವ ಆಕೆಯ ರೋಮ್ಯಾಂಟಿಕ್ ಫೋಟೋಗಳಿಂದಾಗಿ ಜನರು ಅವರನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ.

ನಿಮ್ಮೆಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು ಎಂದು ಅಂಕಿತಾ ಚಿತ್ರಗಳ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಇದರೊಂದಿಗೆ ಅವರು ಸೆಲೆಬ್ರೇಟಿಂಗ್ ಲವ್ ಮತ್ತು ಅನ್ವಿಕಿ ಸ್ಟೋರಿ ಹ್ಯಾಶ್‌ಟ್ಯಾಗ್ ಮಾಡಿದ್ದಾರೆ. ಅನ್ವಿಕಿ ಎಂಬುದು ಅಂಕಿತಾ ಮತ್ತು ವಿಕ್ಕಿಯ ಹೆಸರುಗಳನ್ನು ಸೇರಿಸಿ ರಚಿಸಲಾದ ಸಂಯೋಜಿತ ಹೆಸರು.

ಅಂಕಿತಾ ಮತ್ತು ವಿಕ್ಕಿ ಅವರ ಚಿತ್ರಗಳ ಕುರಿತು ಪ್ರತಿಕ್ರಿಯಿಸಿದ್ದಾರೆ. 'ಫೋಟೋಶೂಟ್ ಇಲ್ಲದೆಯು ಹಬ್ಬ ಆಚರಿಸಿ. ಯಾವಗಾಲೂ ಇವರದ್ದು ಶೋ ಆಫ್ ನಡೆಯುತ್ತಲೇ ಇರುತ್ತದೆ. ಸಾಮಾನ್ಯ ರೀತಿಯಲ್ಲಿ ಹಬ್ಬ ಆಗುವುದಿಲ್ವಾ?' ಎಂದು ಒಬ್ಬರು ಬರೆದಿದ್ದಾರೆ.  'ಜೀವನದಲ್ಲಿ ಇಷ್ಟು  ಶೋ ಆಫ್ ಏಕೆ ನೀವು ಸಂತೋಷವಾಗಿದ್ದರೆ, ನಿಮ್ಮ ಅಂತರಂಗವನ್ನು ಆಚರಿಸಿ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. 

'ಅವರು ಬಾಲಾಜಿ ಟೆಲಿಫಿಲ್ಮ್‌ ಮತ್ತು ಏಕ್ತಾ ಕಪೂರ್ ಅವರನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಅವರ ಜೀವನದಲ್ಲಿ ಎಲ್ಲವೂ ಚಲನಚಿತ್ರವಾಗಿದೆ. ಮಕರ ಸಂಕ್ರಾಂತಿಯ ಶುಭಾಶಯಗಳು'  ಎಂದು ಇನ್ನೊಂದು ಕಾಮೆಂಟ್‌ನಲ್ಲಿ ಬರೆಯಲಾಗಿದೆ.'ಅವರ ಮಧುಚಂದ್ರದ ಅವಧಿ ಯಾವಾಗ ಕೊನೆಗೊಳ್ಳುತ್ತದೆ' ಎಂದು ಮತ್ತುಬ್ಬರು ಕಾಲೆಳೆದು ಬರೆದಿದ್ದಾರೆ.

ಈ ಫೋಟೋಗಳನ್ನು ನೋಡಿ ಅನೇಕ ಇಂಟರ್ನೆಟ್ ಬಳಕೆದಾರರು ಅಂಕಿತಾ ಅವರ ಮಾಜಿ ಗೆಳೆಯ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರನ್ನು ನೆನಪಿಸುತ್ತಿದ್ದಾರೆ. ಅವಳು ಸುಶಾಂತ್ ಜೊತೆಗೆ ಚೆನ್ನಾಗಿ ಕಾಣುತ್ತಿದ್ದಳು. ಇಂದು ಅವರು ಒಟ್ಟಿಗೆ ಇದ್ದಿದ್ದರೆ ಎಂದು ಅನಿಸುತ್ತಿದೆ' ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ ಸುಶಾಂತ್ ನೋಡುತ್ತಿದ್ದೀರಾ? ಎಂದು ಕಾಮೆಂಟ್‌ ಮಾಡಿದ್ದಾರೆ.

ವಿಕ್ಕಿ ಜೈನ್‌ಗೂ ಮುನ್ನ, ಅಂಕಿತಾ ಲೋಖಂಡೆ ಸುಶಾಂತ್ ಸಿಂಗ್ ರಜಪೂತ್ ಜೊತೆ ಸಂಬಂಧ ಹೊಂದಿದ್ದರು. ‘ಪವಿತ್ರ ರಿಶ್ತಾ’ ಧಾರಾವಾಹಿಯ ಸೆಟ್‌ನಲ್ಲಿ ಇಬ್ಬರ ಸಂಬಂಧ ಶುರುವಾಯಿತು. 2010ರಲ್ಲಿ ಆರಂಭವಾದ ಈ ಬಾಂಧವ್ಯ 2016ರವರೆಗೆ ನಡೆಯಿತು ಮತ್ತು  2016 ರಲ್ಲಿ ಸಂದರ್ಶನದಲ್ಲಿ, ದಂಪತಿ ಮದುವೆಯ ಬಗ್ಗೆಯೂ ಮಾತನಾಡಿದರು. ಆದರೆ ಆ ವರ್ಷವೇ ಅವರಿಬ್ಬರೂ ದೂರಾದರು.

'2019 ರಲ್ಲಿ, ಅಂಕಿತಾ ಅವರು ಉದ್ಯಮಿ ವಿಕ್ಕಿ ಜೈನ್ ಅವರೊಂದಿಗೆ ಸಂಬಂಧ ಹೊಂದಿರುವುದಾಗಿ ಘೋಷಿಸಿದರು. ಇಬ್ಬರೂ ಡಿಸೆಂಬರ್ 14, 2021 ರಂದು ಮುಂಬೈನಲ್ಲಿ ವಿವಾಹವಾದರು. ಇದರ ನಂತರ, ಫೆಬ್ರವರಿ 2022 ರಲ್ಲಿ, ಅವರು ಸ್ಟಾರ್ ಪ್ಲಸ್‌ನ ಜನಪ್ರಿಯ ರಿಯಾಲಿಟಿ ಶೋ 'ಸ್ಮಾರ್ಟ್ ಜೋಡಿ' ಗೆದ್ದರು.

ಅಂಕಿತಾ 2019 ರಲ್ಲಿ ಕಂಗನಾ ರಣಾವತ್ ಅಭಿನಯದ 'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರು 2020 ರಲ್ಲಿ ಟೈಗರ್ ಶ್ರಾಫ್ ಮತ್ತು ಶ್ರದ್ಧಾ ಕಪೂರ್ ಅಭಿನಯದ 'ಬಾಘಿ 3' ನಲ್ಲಿ ಕಾಣಿಸಿಕೊಂಡರು. ಅವರ ಮುಂಬರುವ ಚಿತ್ರ 'ಸ್ವಾತಂತ್ರ್ಯವೀರ್ ಸಾವರ್ಕರ್', ಈ ವರ್ಷ ಬಿಡುಗಡೆಯಾಗಬಹುದು

ಟಿವಿ ಮುಂಭಾಗದಲ್ಲಿ, ಅಂಕಿತಾ ಕೊನೆಯದಾಗಿ 'ಸ್ಮಾರ್ಟ್ ಜೋಡಿ'ಯಲ್ಲಿ ಭಾಗವಹಿಸಿದ್ದರು. 'ಪವಿತ್ರ ರಿಶ್ತಾ 2.0' (2021-22) ವೆಬ್ ಸರಣಿಯಲ್ಲಿ ಅರ್ಚನಾ ಪಾತ್ರದಲ್ಲಿ  ಅವರು ಕಾಣಿಸಿಕೊಂಡಿದ್ದಾರೆ, ಅವರು ಅದರ ಮೊದಲ ಭಾಗವಾದ 'ಪವಿತ್ರ ರಿಶ್ತಾ ' (2009-14) ನಲ್ಲಿ ನಟಿಸಿದ್ದಾರೆ.

click me!