ಸುನೀಲ್ ಶೆಟ್ಟಿ (Suniel Shetty) ಪುತ್ರಿ ಅಥಿಯಾ ಶೆಟ್ಟಿ (Athiya Shetty) ಕ್ರಿಕೆಟಿಗ ಕೆಎಲ್ ರಾಹುಲ್ (KL Rahul) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಸಾಕಷ್ಟು ದಿನಗಳಿಂದ ಮುಂಚೂಣಿಯಲ್ಲಿದೆ. ವಿಶೇಷವೆಂದರೆ ರಾಹುಲ್ ಹಾಗೂ ಅಥಿಯಾ ನಟ ಸುನೀಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿಯೇ ಸಪ್ತಪದಿ ತುಳಿಯಲ್ಲಿದ್ದಾರೆ. ಈ ನಡುವೆ ಸುನೀಲ್ ಶೆಟ್ಟಿ ಅವರ ಖಂಡಾಲಾ ಫಾರ್ಮ್‌ಹೌಸ್‌ನ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ, ಹೇಗಿದೆ ನೋಡಿ ಸುನೀಲ್ ಶೆಟ್ಟಿ ಅವರ 17 ವರ್ಷ ಹಳೆಯ ಐಷಾರಾಮಿ ಫಾರ್ಮ್‌ಹೌಸ್.
ಸುನೀಲ್ ಶೆಟ್ಟಿಯವರು ಮಗಳು ಅಥಿಯಾರ ಮದುವೆಯನ್ನು ತಮ್ಮ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ನಡೆಸಲಿದ್ದಾರೆ. ಈ ಫಾರ್ಮ್‌ಹೌಸ್ ಸುಮಾರು 6200 ಚದರ ಅಡಿಗಳಷ್ಟು ಹರಡಿದೆ ಮತ್ತು ಒಳಗಿನಿಂದ ಸಾಕಷ್ಟು ಐಷಾರಾಮಿಯಾಗಿ ಕಾಣುತ್ತದೆ.
211
ಈ ಫಾರ್ಮ್‌ಹೌಸ್‌ನಲ್ಲಿ ಖಾಸಗಿ ಉದ್ಯಾನ, ಈಜುಕೊಳ, 5 ಬೆಡ್‌ರೂಮ್ ಡಬಲ್, ಡಬಲ್ ಹೈಟ್ ಲಿವಿಂಗ್ ರೂಮ್ ಇದೆ. ಪ್ರತಿ ಬೆಡ್ ರೂಮ್ ಒಳಭಾಗವು ಸಕತ್ ಲಕ್ಷುರಿಯಸ್ ಆಗಿದೆ
311
ಈ ಸುನೀಲ್ ಶೆಟ್ಟಿ ಫಾರ್ಮ್‌ಹೌಸ್‌ನ ವಿಶೇಷವೆಂದರೆ ಅದರ ಡೈನಿಂಗ್ ಹಾಲ್ ಈಜು ಕೊಳಕ್ಕೆ ಹೊಂದಿಕೊಂಡಿದೆ. ಊಟ ಮಾಡುವಾಗ ಹೊರಗಿನ ನೋಟವನ್ನು ಸಹ ಎಂಜಾಯ್ ಮಾಡಬಹುದು.
411
ವರದಿಗಳ ಪ್ರಕಾರ, ನೈಸರ್ಗಿಕ ಸೌಂದರ್ಯವನ್ನು ಗಮನದಲ್ಲಿಟ್ಟುಕೊಂಡು ಈ ಫಾರ್ಮ್‌ಹೌಸ್ ನಿರ್ಮಾಣ ಮಾಡಲಾಗಿದೆ ಮತ್ತು ವಿನ್ಯಾಸ ಮಾಡುವಾಗ ಒಳಾಂಗಣವನ್ನು ವಿಶೇಷವಾಗಿ ಕಾಳಜಿ ವಹಿಸಲಾಗಿದೆ.
511
ಪ್ರದೇಶವನ್ನು ವಿನ್ಯಾಸಗೊಳಿಸುವಾಗ, ಅದು ಗರಿಷ್ಠ ಓಪನ್ ಸ್ಪೇಸ್ ಹೊಂದಿರಬೇಕು ಎಂಬ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಲಾಗಿದೆ. ಇದರಲ್ಲಿ ಪೂಲ್ ಜಾಗವನ್ನು ಬಹಳ ದೊಡ್ಡದಾಗಿ ಇರಿಸಲಾಗಿದೆ.
611
ಸುನೀಲ್ ಶೆಟ್ಟಿ ಅವರ 17 ವರ್ಷ ಹಳೆಯ ಐಷಾರಾಮಿ ಫಾರ್ಮ್‌ಹೌಸ್ ಅನ್ನು ಜಾನ್ ಅಬ್ರಹಾಂ ಅವರ ಸಹೋದರ ವಾಸ್ತುಶಿಲ್ಪಿ ಅಲನ್ ಅಬ್ರಹಾಂ ಡಿಸೈನ್ ಮಾಡಿದ್ದಾರೆ.
711
ಅಷ್ಟೇ ಅಲ್ಲ ಇದರ ಇಂಟೀರಿಯರ್ ಹಾಗೂ ಫರ್ನಿಚರ್‌ಗಳನ್ನು ಸ್ವತಃ ಸುನೀಲ್ ಅವರ ಪತ್ನಿ ಮನ ಶೆಟ್ಟಿ ಅವರು ಸಿದ್ಧಪಡಿಸಿದ್ದಾರೆ.
811
ಸುನಿಲ್ ಶೆಟ್ಟಿ ಅವರು ನಾಯಿಗಳೆಡೆ ವಿಶೇಷ ಪ್ರಿತಿ ಹೊಂದಿದ್ದಾರೆ. ಅವರು ತಮ್ಮ ತೋಟದ ಮನೆಯಲ್ಲಿ ಅನೇಕ ನಾಯಿಗಳನ್ನು ಸಾಕಿದ್ದಾರೆ. ಇಲ್ಲಿಗೆ ಬಂದಾಗಲೆಲ್ಲ ಸಾಕುಪ್ರಾಣಿಗಳೊಂದಿಗೆ ಕಾಲ ಕಳೆಯುವುದು ಅವರ ನಚ್ಚಿನ ಹವ್ಯಾಸ.
911
ಬಹಳ ಸಮಯದಿಂದ ಪರಸ್ಪರ ಡೇಟಿಂಗ್ ಮಾಡುತ್ತಿರುವ ಆಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಇಬ್ಬರೂ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದಾರೆ. ಮದುವೆಯ ನಂತರ ಅವರು ಮುಂಬೈನ ಹೊಸ ಮನೆಯಲ್ಲಿ ವಾಸಿಸಲಿದ್ದಾರೆ.
1011
ವರದಿಗಳ ಪ್ರಕಾರ ವಿವಾಹ ಕಾರ್ಯಕ್ರಮಗಳು ಜನವರಿ 21 ಮತ್ತು 23 ರ ನಡುವೆ ನಡೆಯಲಿದೆ. ಹಲ್ದಿ, ಸಂಗೀತ್, ಮೆಹಂದಿ ಹೀಗೆ ಸುನೀಲ್ ಶೆಟ್ಟಿ ಮಗಳ ಮದುವೆಯ ಜೊತೆ ಎಲ್ಲಾ ಕಾರ್ಯಕ್ರಮಗಳು ಇಲ್ಲೇ ನಡೆಯಲಿವೆ.
1111
ಅಥಿಯಾ-ರಾಹುಲ್ ಅವರ ವಿವಾಹದಲ್ಲಿ ತುಂಬಾ ಆತ್ಮೀಯರು ಮಾತ್ರ ಪಾಲ್ಗೊಳಲಿದ್ದಾರೆ. ಕುಟುಂಬದ ವಿಶೇಷ ಮತ್ತು ಅತ್ಯಂತ ನಿಕಟ ಜನರು ಭಾಗಿಯಾಗಲಿದ್ದಾರೆ ಎಂದು ಇತ್ತೀಚಿನ ಮಾಹಿತಿಯಾಗಿದೆ. ಈ ಮದುವೆಗೆ ಯಾವುದೇ ಬಾಲಿವುಡ್ ತಾರೆಯರನ್ನು ಆಹ್ವಾನಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.