ಬಾಲಿವುಡ್‌ನಲ್ಲಿ ಫ್ಲಾಪ್, ದಕ್ಷಿಣದತ್ತ ಮುಖ ಮಾಡಿದ ಐಶ್ವರ್ಯಾ ರೈ!
First Published | Jan 18, 2023, 3:14 PM IST2022 ರಲ್ಲಿ, ಬಾಕ್ಸ್ ಆಫೀಸ್‌ನಲ್ಲಿ ಬಾಲಿವುಡ್‌ನ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಬೆರಳಿಕೆಯಷ್ಟು ಚಿತ್ರಗಳನ್ನು ಹೊರತುಪಡಿಸಿ, ಎಲ್ಲವೂ ಫ್ಲಾಪ್ ಮತ್ತು ದುರಂತ ಎಂದು ಸಾಬೀತಾಯಿತು. ಅದೇ ಸಮಯದಲ್ಲಿ, 2023 ರ ಆರಂಭದಲ್ಲಿಯೂ, ಬಾಲಿವುಡ್ ಚಿತ್ರಗಳ ಸ್ಥಿತಿಯುಲ್ಲಿ ಯಾವುದೇ ಚೇತರಿಕೆ ಕಾಣುತ್ತಿಲ್ಲ. ಇತ್ತೀಚೆಗಷ್ಟೇ ತೆರೆಕಂಡ ಕುಟ್ಟೆ ( (Kuttey) ಚಿತ್ರ ಸೂಪರ್ ಫ್ಲಾಪ್ ಎಂದು ಸಾಬೀತಾಗಿದೆ. ಇನ್ನೊಂದೆಡೆ ಸೌತ್ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿವೆ..ಈ ನಡುವೆ ಹೊರಬರುತ್ತಿರುವ ಸುದ್ದಿ ಪ್ರಕಾರ, ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಕೂಡ ಬಾಲಿವುಡ್‌ಗಿಂತ ಸೌತ್ ಫಿಲ್ಮ್ ಇಂಡಸ್ಟ್ರಿಯ ಮೇಲೆ ಹೆಚ್ಚು ನಂಬಿಕೆ ಹೊಂದಿದ್ದಾರೆಂದು ತೋರುತ್ತದೆ. ಸೌತ್ ಸೂಪರ್ ಸ್ಟಾರ್ ಅಜಿತ್ ಕುಮಾರ್ (Ajith Kumar) ಅವರ ಮುಂಬರುವ ಚಿತ್ರದಲ್ಲಿ ಐಶ್ವರ್ಯಾ ರೈ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ನಿರ್ದೇಶಕ ವಿಘ್ನೇಶ್ ಶಿವನ್ ಅವರ ಚಿತ್ರ ಕಾಮಿಡಿ ಥ್ರಿಲ್ಲರ್ ಆಗಿದೆ. ಈ ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.