Ankita Wedding Photos: ಸುಶಾಂತ್ ಮಾಜಿ ಪ್ರೇಯಸಿಯ ಅದ್ಧೂರಿ ವಿವಾಹ

Published : Dec 15, 2021, 12:55 PM ISTUpdated : Dec 15, 2021, 02:21 PM IST

Ankita Lokhande: ಬಾಲಿವುಡ್ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್‌ ಮಾಜಿ ಪ್ರೇಯಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಿರುತೆರೆ ನಟಿ ಅಂಕಿತಾ ಲೋಖಂಡೆ ವಿಕ್ಕಿ ಜೈನ್ ಅವರ ಪತ್ನಿಯಾಗಿದ್ದಾರೆ.  

PREV
16
Ankita Wedding Photos: ಸುಶಾಂತ್ ಮಾಜಿ ಪ್ರೇಯಸಿಯ ಅದ್ಧೂರಿ ವಿವಾಹ

ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಮಂಗಳವಾರ ವಿವಾಹವಾಗಿದ್ದಾರೆ. ಅದ್ದೂರಿ ವಿವಾಹ ಸಮಾರಂಭದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಮದುವೆಯ ನಂತರ ಆರತಕ್ಷತೆ ನಡೆಯಿತು. ಮದುವೆಯ ಹಲವಾರು ಚಂದದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಂಕಿತಾ ತನ್ನ ಮದುವೆಯನ್ನು Instagram ನಲ್ಲಿ ಎನೌನ್ಸ್ ಮಾಡಿದ್ದಾರೆ. ಪ್ರೀತಿ ತಾಳ್ಮೆಯಿಂದ ಕೂಡಿದೆ. ಆದರೆ ನಾವು ಅಲ್ಲ. ಆಶ್ಚರ್ಯ! ನಾವು ಈಗ ಅಧಿಕೃತವಾಗಿ ಶ್ರೀ ಮತ್ತು ಶ್ರೀಮತಿ ಜೈನ್ ಆಗಿದ್ದೇವೆ ಎಂದು ಬರೆದಿದ್ದಾರೆ.

26

ಅಂಕಿತಾ ಗೋಲ್ಡನ್ ಮನೀಷ್ ಮಲ್ಹೋತ್ರಾ ಲೆಹೆಂಗಾವನ್ನು ಧರಿಸಿದ್ದರೆ ಉದ್ದನೆಯ ಮುಸುಕಿನೊಂದಿಗೆ ವೇದಿಕೆಯಲ್ಲಿ ನಡೆದರು. ವಿಕ್ಕಿ ಬಿಳಿ ಮತ್ತು ಗೋಲ್ಡನ್ ಶೆರ್ವಾನಿಯಲ್ಲಿ ಮಿಂಚಿದರು. ದೇವಾಲಯದಂತಹ ಮಂಟಪದಲ್ಲಿ ಏಳು ಹೆಜ್ಜೆ ಇಟ್ಟಾಗ ಕಪಲ್ ಕ್ಲೋಸ್ ಫೋಟೋಸ್ ಚೆನ್ನಾಗಿ ಮೂಡಿಬಂದಿದೆ.

36

ಮದುವೆಯ ನಂತರದ ಆರತಕ್ಷತೆಗಾಗಿ, ಅಂಕಿತಾ ಕೆಂಪು ಸೀರೆ ಉಟ್ಟಿದ್ದರು. ಭಾರವಾದ ಆಭರಣಗಳೊಂದಿಗೆ ಸಂಪ್ರದಾಯಿಕ ಶೈಲಿಯನ್ನು ಹೊಂದಿದ್ದರು. ವಿಕ್ಕಿ ಕಪ್ಪು ಶೆರ್ವಾನಿಯನ್ನು ಆರಿಸಿಕೊಂಡರು. ವಧು-ವರರು ಅತಿಥಿಗಳೊಂದಿಗೆ ಬೆರೆತರು. ಮದುವೆಯಲ್ಲಿ ಅಂಕಿತಾ ಅವರ ಹಲವಾರು ಸಹೋದ್ಯೋಗಿಗಳು ಮತ್ತು ಕಿರುತೆರೆ ಸ್ನೇಹಿತರ ಜೊತೆಯಲ್ಲಿ ಸ್ಟಾರ್-ಸ್ಟಡ್ಡ್ ಕಾರ್ಯಕ್ರಮ ನಡೆಯಿತು.

46

ಮುಂಬೈನ ಗ್ರ್ಯಾಂಡ್ ಹಯಾತ್‌ನಲ್ಲಿ ನಡೆದ ಮದುವೆಯಲ್ಲಿ ಮೃಣಾಲ್ ಠಾಕೂರ್, ಶ್ರದ್ಧಾ ಆರ್ಯ, ಆರ್ತಿ ಸಿಂಗ್, ಸೃಷ್ಟಿ ರೋಡ್, ಆಶಾ ನೇಗಿ, ಐಜಾಜ್ ಖಾನ್ ಮತ್ತು ಪವಿತ್ರಾ ಪುನಿಯಾ ಭಾಗವಹಿಸಿದ್ದರು. ಸಂಜೆ ವಿಕ್ಕಿ ಬ್ಯಾಂಡ್ ಬಾಜಾ ಬಾರಾತ್ ನೊಂದಿಗೆ ಸ್ಥಳಕ್ಕೆ ಆಗಮಿಸಿದ್ದರು. ಬಾರಾತ್ ಸಾಗುತ್ತಿದ್ದಂತೆ ಅವರು ವಿಂಟೇಜ್ ಕಾರಿನಲ್ಲಿದ್ದರು. ವರನ ಬ್ರಿಗೇಡ್‌ನ ಭಾಗವಾಗಿ ಪುರುಷರು ಹೂವಿನ ನೀಲಿ ಟರ್ಬನ್‌ಗಳನ್ನು ಧರಿಸಿದ್ದರು.

56

ಶನಿವಾರದಂದು ವಿವಾಹ ಮಹೋತ್ಸವವು ಪ್ರಾರಂಭವಾಯಿತು. ಅಧಿಕೃತ ಮೆಹೆಂದಿ ಸಮಾರಂಭ, ಹಳದಿ, ಕಾಕ್ಟೈಲ್ ಮತ್ತು ಸಂಗೀತದೊಂದಿಗೆ ಮುಂದುವರೆಯಿತು. ಅಂಕಿತಾ ಮತ್ತು ವಿಕ್ಕಿ ಮೂರು ವರ್ಷಕ್ಕೂ ಹೆಚ್ಚು ಕಾಲ ಒಟ್ಟಿಗೆ ಇದ್ದಾರೆ.

66

ಸೋಮವಾರ ಅಂಕಿತಾ ಅವರ ಮಣಿಕರ್ಣಿಕಾ ಸಹನಟಿ ಕಂಗನಾ ರನೌತ್ ಕೂಡ ಸಂಗೀತ ಕಾರ್ಯಕ್ರಮದಲ್ಲಿ ಸೇರಿಕೊಂಡರು. ಅವರು ನೇರಳೆ ಬಣ್ಣದ ಲೆಹೆಂಗಾದಲ್ಲಿದ್ದರು. ಅವರ 'ಯಾರ್ ಕಿ ಶಾದಿ' ಯಿಂದ ತನ್ನ Instagram ಸ್ಟೋರಿಗಳಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Read more Photos on
click me!

Recommended Stories