ಅನಿಮಲ್ ಚಿತ್ರದ ಪೋಸ್ಟರ್‌: ರಣಬೀರ್ ಕಪೂರ್-ರಶ್ಮಿಕಾ ಮಂದಣ್ಣ ಲಿಪ್ ಲಾಕ್ ಮಾಡಿದ್ರೆ ಜನರಿಗ್ಯಾಕೆ ಇಷ್ಟು ಕೋಪ?

Published : Oct 10, 2023, 07:12 PM IST

ರಣಬೀರ್ ಕಪೂರ್ (Ranbir Kapoor)ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಬಹು ನಿರೀಕ್ಷಿತ ಚಿತ್ರ ಅನಿಮಲ್ (Animal)  ಹೊಸ ಪೋಸ್ಟರ್ ರಿವೀಲ್ ಆಗಿದೆ. ಅನಿಮಲ್ ಚಿತ್ರದ ಹೊಸ ಪೋಸ್ಟರ್ ನಲ್ಲಿ ರಶ್ಮಿಕಾ-ರಣಬೀರ್ ಲಿಪ್ ಲಾಕ್ ಮಾಡುತ್ತಿರುವುದು ಬಹಿರಂಗವಾಗಿದೆ. ಈ ಹೊಸ ಪೋಸ್ಟರ್‌ ನೋಡಿ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಅದರ ಹಿಂದಿನ ಕಾರಣವೇನು ಗೊತ್ತಾ?  

PREV
17
ಅನಿಮಲ್  ಚಿತ್ರದ ಪೋಸ್ಟರ್‌:  ರಣಬೀರ್ ಕಪೂರ್-ರಶ್ಮಿಕಾ ಮಂದಣ್ಣ ಲಿಪ್ ಲಾಕ್ ಮಾಡಿದ್ರೆ ಜನರಿಗ್ಯಾಕೆ ಇಷ್ಟು ಕೋಪ?

ಅನಿಮಲ್‌ನ ಹೊಸ ಪೋಸ್ಟರ್ ರಿವೀಲ್‌ನೊಂದಿಗೆ, ರಣಬೀರ್ ಚಿತ್ರದ ಮೊದಲ ಹಾಡು ಅಕ್ಟೋಬರ್ 11 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಹೇಳಿ ಕೊಂಡಿದೆ.

27

ಇದೀಗ ಬಂದಿರುವ ಅನಿಮಲ್ ಚಿತ್ರದ ಪೋಸ್ಟರ್ ನಲ್ಲಿ ರಣಬೀರ್-ರಶ್ಮಿಕಾ ರೊಮ್ಯಾಂಟಿಕ್ ಮೂಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್‌ನೊಂದಿಗೆ ಚಿತ್ರದ ಮೊದಲ ಹಾಡು ಹುವಾ ಮೈನ್.. ಪ್ರಕಟಿಸಲಾಗಿದೆ.

37

Instagram ನಲ್ಲಿ ಪೋಸ್ಟ್ ವೀಕ್ಷಿಸಿ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದು, ಕೆಲವರು ಅಸಮಾಧಾನವನ್ನೂ ವ್ಯಕ್ತ ಪಡಿಸುತ್ತಿದ್ದಾರೆ. ವಾಸ್ತವವಾಗಿ, ಪೋಸ್ಟರ್‌ನಲ್ಲಿ ರಣಬೀರ್ ಹೆಸರನ್ನು ಬರೆಯಲಾಗಿದೆ ಆದರೆ ರಶ್ಮಿಕಾ ಅವರ ಹೆಸರಿಲ್ಲ ಮತ್ತು ಅಭಿಮಾನಿಗಳು ಇದರಿಂದ ಅಸಮಾಧಾನಗೊಂಡಿದ್ದಾರೆ.

47

ಲೆಸ್ಟ್ ದಿ ಫ್ಲಾನ್ ಕ್ರ್ಯಾಶ್ ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ಈ ಪೋಸ್ಟರ್ ನೋಡಿದ ನಂತರ ಆಲಿಯಾ ಭಟ್ ಮತ್ತು ವಿಜಯ್ ದೇವರಕೊಂಡ ಚಡಪಡಿಸುತ್ತಾರೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

57

ರಣಬೀರ್ ಯಾರನ್ನೂ ಬಿಡುವುದಿಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ. ಇನ್ನು ಕೆಲವರು ಕೂಡ ಇದೇ ರೀತಿ ಕಾಮೆಂಟ್ ಮಾಡಿದ್ದಾರೆ.

67

ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ಅಭಿನಯದ ಅನಿಮಲ್ ಚಿತ್ರ ಇದೇ ವರ್ಷ ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ. ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಕೂಡ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

 

77

ಈ ಮೊದಲು ಈ ಚಿತ್ರವನ್ನು ಆಗಸ್ಟ್ 11 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು, ಆದರೆ ಸನ್ನಿ ಡಿಯೋಲ್ ಅವರ ಗದರ್ 2 ಮತ್ತು ಅಕ್ಷಯ್ ಕುಮಾರ್ ಅವರ OMG 2 ಜೊತೆಗಿನ ಘರ್ಷಣೆಯನ್ನು ತಪ್ಪಿಸಲು, ಅನಿಮಲ್ ಚಿತ್ರದ ಬಿಡುಗಡೆಯನ್ನು ಮುಂದೂಡಲಾಯಿತು. 

Read more Photos on
click me!

Recommended Stories