ಬಾಲಿವುಡ್ ಕಿಂಗ್‌ಖಾನ್, ಶಾರೂಕ್ ಖಾನ್ ಅಭಿನಯದ ಪಠಾಣ್, ಜವಾನ್ ಚಿತ್ರಗಳು ಬಾಕ್ಸಾಫೀಸಿನಲ್ಲಿ ಭರ್ಜರಿ ಗಳಿಕೆ ಮಾಡಿವೆ. ರಜನಿಕಾಂತ್ ಅವರ ಜೈಲರ್ ಮತ್ತು ಸನ್ನಿ ಡಿಯೋಲ್ ಅವರ ಗದರ್ 2 ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 3400 ಕೋಟಿ ರೂ.ಗೂ ಹೆಚ್ಚು ಗಳಿಸಿದೆ. ಕೋಟ್ಯಾಂತರ ಅಭಿಮಾನಿಗಳು ಚಿತ್ರವನ್ನು ನೋಡಿ ಮೆಚ್ಚಿದ್ದಾರೆ.
ಇನ್ನು ರಿಲೀಸ್ ಆಗೋ ಮೊದ್ಲೇ ಶಾರೂಕ್ ಖಾನ್ ಅಭಿನಯದ 'ಡುಂಕಿ', ಪ್ರಭಾಸ್‌ನ 'ಸಲಾರ್', ದಳಪತಿ ವಿಜಯ್ ಅಭಿನಯದ ಲಿಯೋ ಮತ್ತು ರಣಬೀರ್ ಕಪೂರ್‌ರ ಅನಿಮಲ್‌ನಂತಹ ಚಿತ್ರಗಳು ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಆದ್ರೆ ಇದ್ಯಾವುದೂ ಅಲ್ಲ, ಭಾರತದ ಈ ಸಿನಿಮಾವೊಂದು ರಿಲೀಸ್ ಆಗೋ ಮೊದ್ಲೇ ಬರೋಬ್ಬರಿ 250 ಕೋಟಿ ರೂ. ಗಳಿಸಿದೆ.
2024ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಈ ಸಿನಿಮಾ ಒಂದಾಗಿದೆ. ಚಿತ್ರದ ಟೀಸರ್, ಟ್ರೇಲರ್, ಬಿಡುಗಡೆಯ ದಿನಾಂಕ ಯಾವುದರ ಬಗ್ಗೆಯೂ ಮಾಹಿತಿ ಇಲ್ಲವಾದರೂ ಅಭಿಮಾನಿಗಳ ಕುತೂಹಲ ಕಡಿಮೆಯಾಗಿಲ್ಲ. ಹೀಗಾಗಿಯೇ, ಚಿತ್ರದ ಶೂಟಿಂಗ್ ಮುಗಿಯುವ ಮುನ್ನವೇ ಮೂವಿ ಭರ್ಜರಿ 250 ಕೋಟಿ ರೂ. ಕಲೆಕ್ಷನ್ ಮಾಡಿದೆ.
Game changer
ಆ ಚಿತ್ರ ರಾಮ್ ಚರಣ್ ಅಭಿನಯದ ಮತ್ತು ಶಂಕರ್ ಷಣ್ಮುಗಂ ನಿರ್ದೇಶನದ 'ಗೇಮ್ ಚೇಂಜರ್'. ಕಿಯಾರಾ ಅಡ್ವಾಣಿ ನಾಯಕಿಯಾಗಿ ಕಾಣಿಸಿಕೊಂಡಿರುವ ಪಾಲಿಟಿಕಲ್ ಸಿನಿಮಾ ಇನ್ನೂ ಚಿತ್ರೀಕರಣವನ್ನು ಪೂರ್ಣಗೊಳಿಸಿಲ್ಲ. ಮುಂದಿನ ವರ್ಷ ಬೇಸಿಗೆಯಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಇತ್ತೀಚಿನ ವರದಿಗಳ ಪ್ರಕಾರ, ZEE5 ಗೆ ಮಾರಾಟವಾದ ಸ್ಟ್ರೀಮಿಂಗ್ ಹಕ್ಕುಗಳಿಂದ 'ಗೇಮ್ ಚೇಂಜರ್' ಈಗಾಗಲೇ 250 ಕೋಟಿ ರೂಪಾಯಿಗಳನ್ನು ಗಳಿಸಿದೆ. OTT ಪ್ಲಾಟ್‌ಫಾರ್ಮ್ ZEE5 ಎಲ್ಲಾ ಭಾಷೆಗಳಲ್ಲಿ ಚಿತ್ರದ ಡಿಜಿಟಲ್ ಹಕ್ಕುಗಳಿಗಾಗಿ ಈ ದೊಡ್ಡ ಮೊತ್ತವನ್ನು ಖರ್ಚು ಮಾಡಿದೆ ಎಂದು OTTplay ನಲ್ಲಿನ ವರದಿಯು ಹೇಳುತ್ತದೆ.
ಗೇಮ್ ಚೇಂಜರ್ RRR ನಟ ರಾಮ್ ಚರಣ್ ಮತ್ತು ಕಬೀರ್ ಸಿಂಗ್ ನಟಿ ಕಿಯಾರಾ ಅಡ್ವಾಣಿ ಜೊತೆಯಾಗಿ ನಟಿಸುತ್ತಿರುವ ಎರಡನೇ ಸಿನಿಮಾವಾಗಿದೆ. ಇಬ್ಬರೂ ಈ ಹಿಂದೆ ಬೋಯಪತಿ ಶ್ರೀನು ನಿರ್ದೇಶನದ 2019ರ ತೆಲುಗು ಭಾಷೆಯ ಆಕ್ಷನ್ ಚಿತ್ರ 'ವಿನಯ ವಿಧೇಯ ರಾಮ'ದಲ್ಲಿ ಪರಸ್ಪರ ಜೊತೆಯಾಗಿ ನಟಿಸಿದ್ದರು. ಆದ್ರೆ ಚಿತ್ರ ಹಿಟ್ ಆಗಲ್ಲಿಲ್ಲ.
2018ರಲ್ಲಿ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ಸೈಂಟಿಫಿಕ್ ಆಕ್ಷನ್ ಡ್ರಾಮಾ 2.0 ನಂತರ 'ಗೇಮ್‌ಚೇಂಜರ್' ಸಿನಿಮಾದ ಮೂಲಕ ಶಂಕರ್ ನಿರ್ದೇಶನಕ್ಕೆ ಮರಳುತ್ತಿದ್ದಾರೆ.
ಗೇಮ್ ಚೇಂಜರ್ ಜೊತೆಗೆ, ಚಲನಚಿತ್ರ ನಿರ್ಮಾಪಕರು ಕಮಲ್ ಹಾಸನ್ ಅವರ ಇಂಡಿಯನ್ 2ನ್ನು ಸಹ ಮುಂದಿನ ವರ್ಷ ಬಿಡುಗಡೆ ಮಾಡಲು ಪ್ಲಾನ್ ಮಾಡುತ್ತಿದ್ದಾರೆ.