Ananya Panday: ಸತತ ಫ್ಲಾಪ್‌ಗಳ ನಂತರ ಈಗ OTT ಕಡೆ ಮುಖ ಮಾಡಿದ ನಟಿ

First Published | Sep 26, 2022, 5:24 PM IST

ಅನನ್ಯಾ ಪಾಂಡೆ (Ananya Panday) ಇದುವರೆಗೆ ತಮ್ಮ ಬಾಲಿವುಡ್ ವೃತ್ತಿಜೀವನದಲ್ಲಿ ಒಂದೇ ಒಂದು ಹಿಟ್ ಚಿತ್ರ ನೀಡಿಲ್ಲ. ಸೂಪರ್ ಫ್ಲಾಪ್ ಕೆರಿಯರ್ ನಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಸದಾ ಟ್ರೋಲ್ ಆಗುತ್ತಿರುವ ಅನನ್ಯಾ ಬಗ್ಗೆ ಹೊಸ ಸುದ್ದಿಯೊಂದು ವರದಿಯಾಗಿದೆ. ಈ ನಟಿ ಒಟಿಟಿಯಲ್ಲಿ ಪಾದಾರ್ಪಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ಅನನ್ಯಾ ಅವರು ಧರ್ಮ ಪ್ರೊಡಕ್ಷನ್ಸ್‌ನ ಡಿಜಿಟಲ್ ವಿಂಗ್ ಧರ್ಮಟಿಕ್ ಎಂಟರ್‌ಟೈನ್‌ಮೆಂಟ್‌ನ ಬ್ಯಾನರ್‌ನಡಿಯಲ್ಲಿ ಕಾಲ್ ಮಿ ಬಿ ಎಂಬ ವೆಬ್ ಸರಣಿಯೊಂದಿಗೆ ಡಿಜಿಟಲ್ ಚೊಚ್ಚಲ ಪ್ರವೇಶ ಮಾಡಲಿದ್ದಾರೆ. ಈ ಸರಣಿಯಲ್ಲಿ ಅನನ್ಯಾ ಅವರ ವಿಭಿನ್ನ ಶೈಲಿಯನ್ನು ಕಾಣಬಹುದು ಎಂದು ಹೇಳಲಾಗುತ್ತಿದೆ. 

ಇತ್ತೀಚೆಗಷ್ಟೇ ಧರ್ಮಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಲೈಗರ್ ಚಿತ್ರದಲ್ಲಿ ಅನನ್ಯಾ ಕಾಣಿಸಿಕೊಂಡಿದ್ದಾರೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಫ್ಲಾಪ್ ಎಂದು ಸಾಬೀತಾಯಿತು. ಈ ಚಿತ್ರದಲ್ಲಿ ಅನನ್ಯಾ ಜೊತೆ ಸೌತ್ ಸ್ಟಾರ್ ವಿಜಯ್ ದೇವರಕೊಂಡ ಮುಖ್ಯ ಭೂಮಿಕೆಯಲ್ಲಿದ್ದರು.

ಹೊರಬರುತ್ತಿರುವ ವರದಿಗಳ ಪ್ರಕಾರ, ಕಾಲ್ ಮಿ ಬೇ ವೆಬ್ ಸರಣಿಯಲ್ಲಿ ಅನನ್ಯಾ ಪಾಂಡೆ ಫ್ಯಾಷನಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೋಸ್ತಾನಾ 2 ಅನ್ನು ನಿರ್ದೇಶಿಸಲಿರುವ ಕಾಲಿನ್ ಡಿ ಕುನ್ಹಾ ಈ ವೆಬ್ ಸರಣಿಯನ್ನು ನಿರ್ದೇಶಿಸಲಿದ್ದಾರೆ. ಸದ್ಯದಲ್ಲೇ ವೆಬ್ ಸಿರೀಸ್ ಶೂಟಿಂಗ್ ಆರಂಭವಾಗಲಿದ್ದು, ಅನನ್ಯಾ ಕೂಡ ಇದರಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. 

Tap to resize

ಸ್ಟೂಡೆಂಟ್ ಆಫ್ ದಿ ಇಯರ್ 2 ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಅನನ್ಯಾ ಪಾಂಡೆ ಇದುವರೆಗೆ 4-5 ಚಿತ್ರಗಳಲ್ಲಿ ನಟಿಸಿದ್ದಾರೆ, ಆದರೆ ಅವುಗಳಲ್ಲಿ ಯಾವುದೂ ಹಿಟ್ ಆಗಲಿಲ್ಲ.

ಅನನ್ಯಾ ಪಾಂಡೆ ಅವರು ಪತಿ ಪಟ್ನಿ ಔರ್ ವೋ, ಖಾಲಿ ಪೀಲಿ, ಡೆಹ್ರಿಯಾನ್ ಮತ್ತು ಲೈಗರ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಎಲ್ಲಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ನೆಲಕಚ್ಚಿದವು. 

ಮುಂದಿನ ದಿನಗಳಲ್ಲಿಅನನ್ಯಾ ಅವರು ಆಯುಷ್ಮಾನ್ ಖುರಾನಾ ಅವರೊಂದಿಗೆ ಡ್ರೀಮ್ ಗರ್ಲ್ 2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ರಿವೀಲ್ ಆಗಿದೆ. ಟೀಸರ್ ಕಾಣಿಸಿಕೊಂಡ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಅನನ್ಯಾ ತೀವ್ರವಾಗಿ ಟ್ರೋಲ್ ಆಗಿದ್ದರು. 

ಡ್ರೀಮ್ ಗರ್ಲ್ 2 ಚಿತ್ರವು 2023 ರ ಈದ್ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಅದೇ ಸಮಯದಲ್ಲಿ, ಅನನ್ಯಾ ಖೋ ಗಯೇ ಹಮ್ ಕಹಾನ್ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಈ ಎರಡೂ ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ.

ಅನನ್ಯಾ ಬಾಲಿವುಡ್ ನಟ ಚಂಕಿ ಪಾಂಡೆ ಅವರ ಮಗಳು. ಆದಾಗ್ಯೂ, ಚಂಕಿಯ ಬಾಲಿವುಡ್ ವೃತ್ತಿಜೀವನವು ವಿಶೇಷವಾಗಿರಲಿಲ್ಲ. ಅವರು ತಮ್ಮ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಕೆಲವು ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು ಆದರೆ ನಂತರ ಅವರು ಚಲನಚಿತ್ರಗಳಲ್ಲಿ ಪೋಷಕ ನಟರಾಗಿ ಉಳಿದರು. ಅನೇಕ ದೊಡ್ಡ ತಾರೆಯರ ಜೊತೆ ತೆರೆ ಹಂಚಿಕೊಂಡಿರುವ ಚಂಕಿ ಬಾಲಿವುಡ್ ಮತ್ತು ಸೌತ್ ಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ.

Latest Videos

click me!