ನಿರ್ದೇಶಕರ ಪೈಜಾಮ ಬಿಚ್ಚಲು ಮಾಡಿದ ಸಹಾಯಕ್ಕಾಗಿ ಸಿನಿಮಾದಲ್ಲಿ ಅವಕಾಶ ಪಡೆದ ಅನನ್ಯಾ ಪಾಂಡೆ ಅಪ್ಪ

First Published Sep 26, 2022, 5:17 PM IST

ಚಂಕಿ ಪಾಂಡೆ (Chunky Pandey) ಬಾಲಿವುಡ್‌ನ ಪೋಷಕ ನಟ ಎಂದು ಹೆಸರುವಾಸಿಯಾಗಿದ್ದಾರೆ. ಇಂದು ಅಂದರೆ ಸೆಪ್ಟೆಂಬರ್ 26 ರಂದು ಚಂಕಿ ಪಾಂಡೆ ಅವರ ತಂದೆಯ ಹುಟ್ಟುಹಬ್ಬ. ಸುದೀರ್ಘ ಹೋರಾಟದ ಹೊರತಾಗಿಯೂ ಹೀರೋ ಆಗಲು ಚಂಕಿ ಪಾಂಡೆ ಅವರಿಗೆ ಸಾಧ್ಯವಾಗಲಿಲ್ಲ. ಚಂಕಿ ಪಾಂಡೆ ಚಿತ್ರರಂಗದ ಅತ್ಯಂತ ಹಿರಿಯ ನಟ. ಅವರು 80 ರಿಂದ 90 ರ ದಶಕದ ಮಧ್ಯದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಚಂಕಿ ಮತ್ತು ಅಕ್ಷಯ್ ಕುಮಾರ್ ಒಟ್ಟಿಗೆ ಡ್ಯಾನ್ಸ್‌ ಕ್ಲಾಸ್‌ಗಳಿಗೆ ಹೋಗುತ್ತಿದ್ದರು. ಅದೇ ಸಮಯದಲ್ಲಿ, ಚಂಕಿ ಅನೇಕ ಬಾರಿ ಅಕ್ಷಯ್‌ಗೆ ನೃತ್ಯದ ಸ್ಡೆಪ್ಸ್‌ ಕಲಿಸಿದ್ದಾರೆ. ಚಂಕಿ ಅವರು ಚಲನಚಿತ್ರಗಳಿಗೆ ಬಂದ ಕಥೆಯು ತುಂಬಾ ಆಸಕ್ತಿದಾಯಕವಾಗಿದೆ. ನಂತರ ಬಾಂಗ್ಲಾದೇಶದ ಸೂಪರ್‌ಸ್ಟಾರ್‌ ಸಹ ಆದರು.
 

ಅತ್ಯಂತ ಪ್ರತಿಭಾವಂತರ ಹೊರತಾಗಿಯೂ, ಚಂಕಿ ಪಾಂಡೆ ಸೈಡ್ ಹೀರೋ ಆಗಿ ಉಳಿದರು, ಅವರು ಅಕ್ಷಯ್ ಕುಮಾರ್‌ಗೆ ಡ್ಯಾನ್ಸ್ ಕ್ಲಾಸ್ ಸಮಯದಲ್ಲಿ ಸರಿಯಾದ ಹೆಜ್ಜೆಗಳನ್ನು ಹಾಕಲು ಅನೇಕ ಬಾರಿ ಕಲಿಸಿದರು, ಇದರ ಹೊರತಾಗಿಯೂ, ಕಿಲಾಡಿ ಕುಮಾರ್ ಮುಂದೆ ಹೋದರು ಆದರೆ ಚಂಕಿ ಪಾಂಡೆ ರೇಸ್‌ನಲ್ಲಿ ಪೋಷಕ ನಟನ ಸ್ಥಾನ ಮಾತ್ರವನ್ನು ಸಾಧಿಸಲು ಸಾಧ್ಯವಾಯಿತು.  
 

ವಾಸ್ತವವಾಗಿ ಖ್ಯಾತ ನಿರ್ದೇಶಕ ಪಹ್ಲಾಜ್ ನಿಹಲಾನಿ ಮತ್ತು ಚಂಕಿ ಪಾಂಡೆಯ ಮೊದಲ ಭೇಟಿಯು ಟಾಯ್ಲೆಟ್‌ನಲ್ಲಿ ಪಹ್ಲಾಜ್  ಪೈಜಾಮದ ಲಾಡಿ ಬಿಚ್ಚಲು ಬರದಿರುವ ಸಂದರ್ಭದಲ್ಲಿ ನಡೆಯಿತು. ಆ ಸಮಯದಲ್ಲಿ ಚಂಕಿ ಪಾಂಡೆ ಸಹಾಯ ಮಾಡಿದ್ದರು.

ಇದಾದ ನಂತರ, ಪಹ್ಲಾಜ್ ನಿಹಲಾನಿ ತಮ್ಮ 'ಆಗ್ ಹಿ ಆಗ್' (1987 ಧರ್ಮೇಂದ್ರಮತ್ತು ಶತ್ರುಘ್ನ ಸಿನ್ಹಾ) ಚಲನಚಿತ್ರವನ್ನು ಪ್ರಾರಂಭಿಸಿದಾಗ, ಅವರು ತಮಗೆ ಸಹಾಯ ಮಾಡಿದ ಚಂಕಿಗೆ  ಪ್ರಮುಖ ಪಾತ್ರವನ್ನು ನೀಡಿದರು.

ತೇಜಾಬ್ ಚಿತ್ರದಲ್ಲಿ ಅನಿಲ್ ಕಪೂರ್ ಅವರ ಸ್ನೇಹಿತನ ಪಾತ್ರದಲ್ಲಿ ಚಂಕಿ ಅವರ  ನಿಜವಾಗಿ ಗುರುತಿಸಿಕೊಂಡರು. ಇದಕ್ಕಾಗಿ ಅವರು ಫಿಲ್ಮ್‌ಫೇರ್ ಪ್ರಶಸ್ತಿ (ಪೋಷಕ ನಟ) ಕೂಡ ಪಡೆದರು. 1988 ರಲ್ಲಿ, ಅವರು 'ಸಪ್ ಕಿ ದುನಿಯಾ' (1988), 'ಖತ್ರೋನ್ ಕೆ ಖಿಲಾಡಿ' (1988) ಮುಂತಾದ ಚಿತ್ರಗಳನ್ನು ಸಹ ಮಾಡಿದರು.

90 ರ ದಶಕದ ಅಂತ್ಯದ ವೇಳೆಗೆ, ಚಂಕಿಗೆ ಕೆಲಸ ದೊರೆಯುವುದು ಕಡಿಮೆಯಾಯಿತು. ಇದರ ನಂತರ ಅವರು ಬಾಂಗ್ಲಾದೇಶದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿದರು. ಚಂಕಿ ಅವರು 'ಸ್ವಾಮಿ ಕೆನೋ ಆಸಾಮಿ', 'ಬೇಶ್ ಕೊರೆಚಿ ಪ್ರೇಮ್ ಕೊರೆಚಿ', 'ಮೇಯೆರಾ ಇ ಮಾನುಷ್' ಮುಂತಾದ ಅನೇಕ ಹಿಟ್ ಚಿತ್ರಗಳಲ್ಲಿ ಬಂಗಾಳಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಬಾಂಗ್ಲಾದೇಶದಲ್ಲಿ ಸೂಪರ್‌ಹಿಟ್ ಆದ ನಂತರ, ಅವರು ಮತ್ತೊಮ್ಮೆ ಬಾಲಿವುಡ್‌ಗೆ ಪುನರಾಗಮನ ಮಾಡಿದರು, ಈ ಬಾರಿ ಅವರು ನಾಯಕನಾಗಿ ನಟಿಸಲು ಸಾಧ್ಯವಾಗಲಿಲ್ಲ ಆದರೆ ಅವರು ತಮ್ಮ ಡೈಲಾಗ್ ಡೆಲಿವರಿ ಮತ್ತು ಟೈಮಿಂಗ್‌ನಿಂದ ಎಲ್ಲರ ಹೃದಯವನ್ನು ಗೆದ್ದರು.

click me!