ಅಮಿತಾಬ್‌ ಜೊತೆ ರಶ್ಮಿಕಾ ಮಂದಣ್ಣರ ಬಾಲಿವುಡ್‌ ಡೆಬ್ಯೂ ಚಿತ್ರ ರಿಲೀಸ್‌ಗೆ ಮುಹೂರ್ತ ಫಿಕ್ಸ್

Published : Jul 23, 2022, 06:01 PM IST

ದಕ್ಷಿಣದ ಪ್ರಮುಖ ಟಾಪ್‌ ನಟಿಯರಲ್ಲಿ  ಒಬ್ಬರಾದ ನಟಿ ರಶ್ಮಿಕಾ ಮಂದಣ್ಣ (Rashmika Mandanna) 'ಗುಡ್ ಬೈ' (GoodBye) ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಲೆಜೆಂಡರಿ ನಟ ಅಮಿತಾಬ್ ಬಚ್ಚನ್ (Amitabh Bachchan)ಜೊತೆಯಲ್ಲಿ ನಟಿಸಿರುವ ರಶ್ಮಿಕಾ ಅವರ ಬಾಲಿವುಡ್‌ನ ಚೊಚ್ಚಲ ಸಿನಿಮಾ  ಈಗ ವಿಶ್ವಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. 

PREV
15
ಅಮಿತಾಬ್‌ ಜೊತೆ ರಶ್ಮಿಕಾ ಮಂದಣ್ಣರ ಬಾಲಿವುಡ್‌ ಡೆಬ್ಯೂ ಚಿತ್ರ ರಿಲೀಸ್‌ಗೆ ಮುಹೂರ್ತ ಫಿಕ್ಸ್

ರಶ್ಮಿಕಾ ಮಂದಣ್ಣ ಅವರ ಗುಡ್‌ಬೈ ಸಿನಿಮಾ ಅಕ್ಟೋಬರ್ 7, 2022 ರಂದು ವಿಶ್ವಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. ವಿಕಾಸ್ ಬಹ್ಲ್ ಅವರ ನೇತೃತ್ವದಲ್ಲಿ, 'ಗುಡ್‌ಬೈ' ಅನ್ನು  ಲೈಫ್‌ನ ಸೆಲೆಬ್ರೆಷನ್‌ ಎಂದು ಹೇಳಲಾಗುತ್ತದೆ. 

25

ಅಮಿತಾಬ್ ಬಚ್ಚನ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದಲ್ಲಿ ನೀನಾ ಗುಪ್ತಾ ಮತ್ತು ಪಾವೈಲ್ ಗುಲಾಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರಲ್ಲದೆ, ನಟರಾದ ಎಲ್ಲಿ ಅವ್ರಾಮ್, ಸುನಿಲ್ ಗ್ರೋವರ್ ಮತ್ತು ಸಾಹಿಲ್ ಮೆಹ್ತಾ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

35

ವಿಕಾಸ್ ಬಹ್ಲ್ ಅವರ 'ಗುಡ್ ಬೈ' ಅನ್ನು ಏಕ್ತಾ ಆರ್ ಕಪೂರ್ ಅವರ ನಿರ್ಮಾಣ ಸಂಸ್ಥೆ, ಬಾಲಾಜಿ ಮೋಷನ್ ಪಿಕ್ಚರ್ಸ್ ಬೆಂಬಲಿಸಿದೆ. ಗುಡ್ ಕಂ ಸಹಭಾಗಿತ್ವದಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಫ್ಯಾಮಿಲಿ ಎಂಟರ್ಟೈನರ್ ಆಗಿರುವ 'ಗುಡ್ ಬೈ' ಕುಟುಂಬ, ಜೀವನ ಮತ್ತು ಸಂಬಂಧಗಳ ಬಗ್ಗೆ ಹೃದಯಸ್ಪರ್ಶಿ ಕಥೆಯಾಗಿದೆ. 

45

ಈ ನಡುವೆ ಕೆಲಸದ ಮುಂಭಾಗದಲ್ಲಿ, ರಶ್ಮಿಕಾ ಮಂದಣ್ಣ ನಟ ರಣಬೀರ್ ಕಪೂರ್ ಎದುರು ಆನಿಮಲ್‌  ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಅವರು ಮತ್ತೊಂದು ಹಿಂದಿ ಚಿತ್ರದಲ್ಲಿ ನಟಿಸಿದ್ದಾರೆ, ಅಲ್ಲಿ ಅವರು ನಟ ಟೈಗರ್ ಶ್ರಾಫ್ ಅವರೊಂದಿಗೆ ಜೋಡಿಯಾಗಲಿದ್ದಾರೆ ಎಂಬ ಸುದ್ದಿಯೂ ಇದೆ. ಆದರೆ, ಇದು ಜಾಹೀರಾತೋ, ಮೂವಿಯೋ ಎಂಬ ಸ್ಪಷ್ಟತೆ ಇಲ್ಲ. 

 

55

ಇನ್ನೂ ಈ ವರ್ಷ ಅಮಿತಾಬ್ ಬಚ್ಚನ್‌ ಅವರ  ಜುಂಡ್ ಮತ್ತು ರನ್‌ವೇ 34 ಎರಡು ಸಿನಿಮಾಗಳು ಬ್ಯಾಕ್-ಟು-ಬ್ಯಾಕ್ ಬಿಡುಗಡೆಯಾಗಿವೆ. ಸೆಪ್ಟೆಂಬರ್ 9 ರಂದು ರಿಲೀಸ್‌ ಆಗಲಿರುವ ಅಯಾನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್, ನಾಗಾರ್ಜುನ  ಜೊತೆ ಅಮಿತಾಬ್‌ ಬಚ್ಚನ್‌ ಸಹ ನಟಿಸಿದ್ದಾರೆ  'ಗುಡ್‌ಬೈ' 2022 ರಲ್ಲಿ ಬಿಡುಗಡೆಅಗಲಿರುವ  ಬಿಗ್ ಬಿ ಅವರ ನಾಲ್ಕನೇ ಸಿನಿಮಾವಾಗಿದೆ.

Read more Photos on
click me!

Recommended Stories