ಜಂಜೀರ್ ಹಿಟ್ ಆಗಿದ್ದರೆ ಚಿತ್ರದ ಇಡೀ ತಂಡದೊಂದಿಗೆ ಲಂಡನ್ ಗೆ ಹೋಗುವುದಾಗಿ ಬಿಗ್ ಬಿ ನಿರ್ಧರಿಸಿದ್ದರು ಎನ್ನಲಾಗಿದೆ. ಇದನ್ನು ತಮ್ಮ ತಂದೆ ಹರಿವಂಶ್ ರಾಯ್ ಬಚ್ಚನ್ ಅವರಿಗೆ ಹೇಳಿದಾಗ ಅವರು ಅವರ ಮುಂದೆ ಒಂದು ಷರತ್ತು ಹಾಕಿದರು. ಅಮಿತಾಭ್ ಬಚ್ಚನ್ ಮದುವೆಯಾಗದೆ ಜಯಾ ಜೊತೆ ಹೋಗಬಾರದು ಎಂದು ತಂದೆ ಬಯಸಿದ್ದರು. ಮತ್ತು ಇಬ್ಬರೂ ತರಾತುರಿಯಲ್ಲಿ ಮದುವೆಯಾಗಲು ಇದು ಕಾರಣವಾಗಿತ್ತು.