IIFA 2022 - ಅಬುದಾಬಿಗೆ ಲಗ್ಗೆ ಇಟ್ಟ Salman Khan ಸೇರಿದಂತೆ ಬಾಲಿವುಡ್‌ ದಂಡು

First Published | Jun 3, 2022, 4:28 PM IST

ಅನನ್ಯಾ ಪಾಂಡೆ (Ananya Pandey), ಸಾರಾ ಅಲಿ ಖಾನ್ (Sara Ali Khan), ಟೈಗರ್ ಶ್ರಾಫ್ (Tiger Shroff), ನೋರಾ ಫತೇಹಿ (Nora Fatehi), ಸಲ್ಮಾನ್ ಖಾನ್ (Salman Khan) ಮತ್ತು ಶೋ ಹೋಸ್ಟ್  ಮನೀಶ್ ಪಾಲ್ (Manish Paul) ಸೇರಿದಂತೆ ಅನೇಕ ಸೆಲಬ್ರೆಟಿಗಳು  ಇಂಟರ್ನ್ಯಾಷನಲ್ ಇಂಡಿಯನ್  ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (IIFA) 2022 ಗೆ ಹಾಜರಾಗಲು ಅಬುಧಾಬಿ ತಲುಪಿದ್ದಾರೆ. ಜೂನ್ 4 ರಂದು ಮುಖ್ಯ ಸಮಾರಂಭ ನಡೆಯಲಿದ್ದು, ಅದಕ್ಕೂ ಮುನ್ನ ಗುರುವಾರ ಸಂಜೆ ಐಐಎಫ್‌ಎ ಸಂಘಟಕರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳೆಲ್ಲರೂ ಪಾಲ್ಗೊಂಡಿದ್ದರು. ಪತ್ರಿಕಾಗೋಷ್ಠಿಯ ಸೆಲೆಬ್ರಿಟಿಗಳ  ಫೋಟೋಗಳು ಇಲ್ಲಿವೆ.

ಪತ್ರಿಕಾಗೋಷ್ಠಿಯಲ್ಲಿ ಅನನ್ಯ ಪಾಂಡೆ, ಸಾರಾ ಅಲಿ ಖಾನ್ ಮತ್ತು ನೋರಾ ಫತೇಹಿ ಸ್ಟೈಲಿಸ್ಟ್ ಡ್ರೆಸ್‌ಗಳಲ್ಲಿ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ, ಅನನ್ಯಾ ಪಾಂಡೆ ಹಳದಿ ತೋಳುಗಳಿಲ್ಲದ ಬ್ರೇಲೆಟ್‌ನೊಂದಿಗೆ ಮಿನಿ ಸ್ಕರ್ಟ್ ಅನ್ನು ಧರಿಸಿದ್ದರು. .

ಈ ಸಂದರ್ಭದಲ್ಲಿ ಸಾರಾ ಅಲಿ ಖಾನ್ ಕೆಂಪು ಮಿನಿ ಡ್ರೆಸ್ ಧರಿಸಿದ್ದರು ಮತ್ತು ಟಾಪ್ ಮೇಲೆ ಮ್ಯಾಚಿಂಗ್ ಕ್ರಾಪ್ ಜಾಕೆಟ್ ಕೂಡ ಧರಿಸಿದ್ದರು.

Tap to resize

ನೋರಾ ಫತೇಹಿ  ಅವರು ಈವೆಂಟ್‌ಗಾಗಿ ಕಪ್ಪು ಬಣ್ಣದ ಟಾಪ್‌ ಮೇಲೆ ಹಸಿರು ಬಣ್ಣದ ಜಾಕೆಟ್ ಅನ್ನು ಧರಿಸಿದ್ದರು ಮತ್ತು ಅದಕ್ಕೆ ಹೊಂದಿಕೆಯಾಗುವ ಸ್ಕರ್ಟ್‌ ಅನ್ನು ಪೇರ್‌ ಮಾಡಿಕೊಂಡಿದ್ದರು.

ಜೂನ್ 3 ಮತ್ತು 4 ರಂದು ನಡೆಯಲಿರುವ ಕಾರ್ಯಕ್ರಮದ ಪತ್ರಿಕಾಗೋಷ್ಠಿಯಲ್ಲಿ ಶಾಹಿದ್ ಕಪೂರ್, ಫರಾ ಖಾನ್, ರಿತೇಶ್ ದೇಶಮುಖ್ ಮತ್ತು ರಾಪರ್ ಹನಿ ಸಿಂಗ್ ಕೂಡ ಉಪಸ್ಥಿತರಿದ್ದರು.

IIFA ನ ಮುಖ್ಯ ಸಮಾರಂಭದಲ್ಲಿ ಪ್ರದರ್ಶನ ನೀಡಿದ ಸೆಲಬ್ರೆಟಿಗಳು ಅಭಿಷೇಕ್ ಬಚ್ಚನ್, ಶಾಹಿದ್ ಕಪೂರ್, ಟೈಗರ್ ಶ್ರಾಫ್, ಕಾರ್ತಿಕ್ ಆರ್ಯನ್, ಸಾರಾ ಅಲಿ ಖಾನ್, ಅನನ್ಯ ಪಾಂಡೆ, ದಿವ್ಯಾ ಖೋಸ್ಲಾ ಕುಮಾರ್ ಮತ್ತು ನೋರಾ ಫತೇಹಿ. 

ಮತ್ತೊಂದೆಡೆ, ದೇವಿ ಶ್ರೀ ಪ್ರಸಾದ್, ತನಿಷ್ಕ್ ಬಾಗ್ಚಿ, ಗುರು ರಾಂಧವಾ, ಹನಿ ಸಿಂಗ್, ನೇಹಾ ಕಕ್ಕರ್, ಧ್ವನಿ ಭಾನುಶಾಲಿ, ಜೆಹ್ರಾ ಎಸ್ ಖಾನ್, ಅನೀಸ್ ಕೌರ್ ಮತ್ತು ಆಶ್ ಕಿಂಗ್ IIFA ರಾಕ್ಸ್‌ನಲ್ಲಿ ಪ್ರದರ್ಶನ ನೀಡಲಿದ್ದಾರೆ.

ಸಿದ್ಧಾರ್ಥ್  ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅಭಿನಯದ 'ಶೇರ್ಷಾ', ರಣವೀರ್ ಸಿಂಗ್ ಅಭಿನಯದ '83', 'ವಿಕ್ಕಿ ಕೌಶಲ್ ಅಭಿನಯದ 'ಸರ್ದಾರ್ ಉದಾಮ್', ಅಜಯ್ ದೇವಗನ್ ಅಭಿನಯದ 'ತನ್ಹಾಜಿ: ದಿ ಅನ್‌ಸಂಗ್ ವಾರಿಯರ್' ಮತ್ತು ತಾಪ್ಸಿ ಪನ್ನು ಅಭಿನಯದ 'ಥಪ್ಪಡ್' ಈ ಬಾರಿ ಅತ್ಯುತ್ತಮ ಚಿತ್ರದಲ್ಲಿ ಎಂಟ್ರಿ ಪಡೆದಿವೆ. 

ಖಾನ್ (83), ಅನುರಾಗ್ ಬಸು (ಲುಡೋ), ಶೂಜಿತ್ ಸಿರ್ಕಾರ್ (ಸರ್ದಾರ್ ಉದಾಮ್), ವಿಷ್ಣುವರ್ಧನ್ (ಶೇರ್ಷಾ) ಮತ್ತು ಅನುಭವ್ ಸಿನ್ಹಾ (ತಪ್ಪಡ್), ರಣವೀರ್ ಸಿಂಗ್ (83), ವಿಕ್ಕಿ ಕೌಶಲ್ (ಸರ್ದಾರ್ ಉದಾಮ್), ಸಿದ್ಧಾರ್ಥ್ ಮಲ್ಹೋತ್ರಾ (ಶೇರ್ಷಾ) ಕಬೀರ್ ಅತ್ಯುತ್ತಮ ನಿರ್ದೇಶಕ ) ಇರ್ಫಾನ್ ಖಾನ್ (ಅಂಗ್ರೇಜಿ ಮಧ್ಯಮ) ಮತ್ತು ಮನೋಜ್  ಬಾಜ್ಪೇಯಿ (ಬೋನ್ಸ್ಲೆ) ಅತ್ಯುತ್ತಮ ನಟರ ಪಟ್ಟಿಯಲ್ಲಿದ್ದಾರೆ.

ವಿದ್ಯಾ ಬಾಲನ್ (ಶೆರ್ನಿ), ಕೃತಿ ಸನೋನ್ (ಮಿಮಿ), ಸನ್ಯಾ ಮಲ್ಹೋತ್ರಾ (ಪ್ಯಾಗ್ಲೆಟ್), ಕಿಯಾರಾ ಅಡ್ವಾಣಿ (ಶೇರ್ಷಾ) ಮತ್ತು ತಾಪ್ಸಿ ಪನ್ನು (ತಪ್ಪಡ್‌) ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ.

ಮೂರು ವರ್ಷಗಳ ನಂತರ IIFA ಆವಾರ್ಡ್‌ ಶೋ ನಡೆಯುತ್ತಿವೆ. ಕೊನೆಯ ಸಮಾರಂಭವನ್ನು 2019 ರಲ್ಲಿ ನಡೆಸಲಾಯಿತು. 2020 ರಲ್ಲಿ, ಕೊರೋನಾ ಕಾರಣದಿಂದ  ಸಮಾರಂಭವನ್ನು ರದ್ದುಗೊಳಿಸಬೇಕಾಯಿತು ಮತ್ತು 2021 ರಲ್ಲಿ ಈ ಪ್ರಶಸ್ತಿಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ಘೋಷಿಸಲಾಯಿತು.

Latest Videos

click me!