ಸೀರೆಯಲ್ಲಿ ಮಸ್ತ್ ಪೋಸ್ ನೀಡಿದ 'ಕಬ್ಜ' ಸುಂದರಿ ಶ್ರೀಯಾ; ವಾವ್.. ಗಾರ್ಜಿಯಸ್ ಎಂದ ಫ್ಯಾನ್ಸ್

First Published | Jun 3, 2022, 12:55 PM IST

ಇತ್ತೀಚಿಗಷ್ಟೆ ಕಬ್ಜ ಸಿನಿಮಾ ಮೂಲಕ ಸುದ್ದಿಯಲ್ಲಿದ್ದ ಶ್ರಿಯಾ ಇದೀಗ ಸೀರೆಯಲ್ಲಿ ಮಿಂಚಿದ ಫೋಟೋಗಳನ್ನು ಶೇರ್ ಮಾಡಿ ಸದ್ದು ಮಾಡುತ್ತಿದ್ದಾರೆ. ಶ್ರಿಯಾ ಸೀರೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಬಹುಭಾಷಾ ನಟಿ ಶ್ರಿಯಾ ಶರಣ್ ಮತ್ತೆ ಕನ್ನಡಕ್ಕೆ ಮರಳಿದ್ದಾರೆ. ಬರೋಬ್ಬರಿ 9 ವರ್ಷಗಳ ಬಳಿಕ ಶ್ರಿಯಾ ಕನ್ನಡ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾ ಮೂಲಕ ಶ್ರಿಯಾ ಕನ್ನಡದಲ್ಲಿ ಮಿಂಚುತ್ತಿದ್ದಾರೆ.

ಇತ್ತೀಚಿಗಷ್ಟೆ ಕಬ್ಜ ಸಿನಿಮಾ ಮೂಲಕ ಸುದ್ದಿಯಲ್ಲಿದ್ದ ಶ್ರಿಯಾ ಇದೀಗ ಸೀರೆಯಲ್ಲಿ ಮಿಂಚಿದ ಫೋಟೋಗಳನ್ನು ಶೇರ್ ಮಾಡಿ ಸದ್ದು ಮಾಡುತ್ತಿದ್ದಾರೆ. ಶ್ರಿಯಾ ಸೀರೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Tap to resize

ನಟಿ ಶ್ರಿಯಾ ಸದ್ಯ ಮಗು, ಪತಿ ಅಂತ ಸಂಸಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಶ್ರಿಯಾ ಮಗುವಿಗೆ ಜನ್ಮ ನೀಡಿರುವ ವಿಚಾರವನ್ನು ಬಹಿರಂಗ ಪಡಿಸಿರಲಿಲ್ಲ. ಲಾಕ್ ಡೌನ್ ಸಮಯದಲ್ಲಿ ಶ್ರಿಯಾ ಹೆಣ್ಣು ಮಗಳಿಗೆ ಜನ್ಮ ನೀಡಿದ್ದರು. ಮಗಳು ಹುಟ್ಟಿ ಅನೇಕ ತಿಂಗಳ ಬಳಿಕ ಬಹಿರಂಗ ಪಡಿಸಿದ್ದರು.

ಆಗಾಗ ಶ್ರಿಯಾ ಪತಿ ಮತ್ತು ಮಗಳ ಫೋಟೋವನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿಗಷ್ಟೆ ಮಗಳ ಜೊತೆ ಬೀಚ್ ನಲ್ಲಿ ಮಸ್ಟ್ ಮಜಾ ಮಾಡುತ್ತಿದ್ದ ಪೋಟೋ ಶೇರ್ ಮಾಡಿದ್ದರು. ಈ ಫೋಟೋಗಳು ಸಹ ವೈರಲ್ ಆಗಿತ್ತು.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೇ ಶ್ರಿಯಾ ಕೊನೆಯದಾಗಿ ಆರ್ ಆರ್ ಆರ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಸಕ್ಸಸ್ ಕಂಡಿದೆ. ಅನೇಕ ದಾಖಲೆಗಳನ್ನು ಬರೆದಿರುವ ಆರ್ ಆರ್ ಆರ್‌ನಲ್ಲಿ ಶ್ರಿಯಾ ಅಭಿಮಾನಿಗಳ ಗಮನ ಸೆಳೆದಿದ್ದರು.

ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿಯಲ್ಲಿ ದೃಶ್ಯಂ2 ಬಿಡುಗಡೆ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ಅಜಯ್ ದೇಗನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಉಳಿದಂತೆ ತಡ್ಕ, ನರಗಸೂರಮ್ ಸೇರಿದಂತೆ ಇನ್ನು ಕೆಲವು ಸಿನಿಮಾಗಳು ಇವೆ.

ರಿಯಲ್ ಸ್ಟಾರ್ ಜೊತೆ ಕಬ್ಜ ಸಿನಿಮಾದಲ್ಲಿ ಶ್ರಿಯಾ ನಾಯಕಿಯಾಗಿ ಮಿಂಚಿದ್ದಾರೆ. ಈಗಾಗಲೇ ಈ ಸಿನಿಮಾದ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ರಾಯಲ್ ಲುಕ್‌ನಲ್ಲಿ ಶ್ರಿಯಾ ಕಾಣಿಸಿಕೊಂಡಿದ್ದರು. ಈ ಸಿನಿಮಾಗಾಗಿ ಕನ್ನಡ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Latest Videos

click me!