ಕರಣ್ ಜೋಹರ್ ಬರ್ತಡೇ ಪಾರ್ಟಿಯಲ್ಲಿ ಸಲ್ಮಾನ್, ಐಶ್ವರ್ಯಾ, ರಶ್ಮಿಕಾ, ದೇವರಕೊಂಡ ; ಇನ್ನು ಯಾರೆಲ್ಲ ಸ್ಟಾರ್ಸ್ ಹಾಜರಿದ್ದರು?

Published : May 26, 2022, 12:26 PM IST

ಬಾಲಿವುಡ್‌ನ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ 50ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಸಿಕೊಂಡಿದ್ದಾರೆ. ಕರಣ್ ಜೋಹರ್ ಯಾವುದೇ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಇಡೀ ಬಾಲಿವುಡ್ ಮಂದಿಗೆ ಆಹ್ವಾನ ನೀಡುತ್ತಾರೆ. ಈ ಬಾರಿಯ ಹುಟ್ಟುಹಬ್ಬವನ್ನು ಸಹ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ.  

PREV
17
ಕರಣ್ ಜೋಹರ್ ಬರ್ತಡೇ ಪಾರ್ಟಿಯಲ್ಲಿ ಸಲ್ಮಾನ್, ಐಶ್ವರ್ಯಾ, ರಶ್ಮಿಕಾ, ದೇವರಕೊಂಡ ; ಇನ್ನು ಯಾರೆಲ್ಲ ಸ್ಟಾರ್ಸ್ ಹಾಜರಿದ್ದರು?
karan johar

ಬಾಲಿವುಡ್‌ನ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ 50ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಸಿಕೊಂಡಿದ್ದಾರೆ. ಕರಣ್ ಜೋಹರ್ ಯಾವುದೇ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಇಡೀ ಬಾಲಿವುಡ್ ಮಂದಿಗೆ ಆಹ್ವಾನ ನೀಡುತ್ತಾರೆ. ಈ ಬಾರಿಯ ಹುಟ್ಟುಹಬ್ಬವನ್ನು ಸಹ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ.

 

27

ಅಂದಹಾಗೆ ಈ ಬಾರಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಅನೇಕ ಸೆಲೆಬ್ರಿಟಗಳು ಭಾಗಿಯಾಗಿದ್ದರು. ಬಾಲಿವುಡ್ ನಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಂಪತಿ, ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಂಪತಿ ಸೇರಿದಂತೆ ಅನೇಕ ಸ್ಟಾರ್ ಹಾಜರಿದ್ದರು.

 

37

ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಇಬ್ಬರೂ ಮುಖಾಮುಖಿಯಾಗದೆ ಅನೇಕ ವರ್ಷಗಳಾಗಿವೆ. ಕರಣ್ ಜೋಹರ್ ಬರ್ತಡೇ ಪಾರ್ಟಿಯಲ್ಲಿ ಇಬ್ಬರು ಭಾಗಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆದರೆ ಪಾರ್ಟಿಯಲ್ಲಿ ಇಬ್ಬರೂ ಮಾತನಾಡಿದ್ರಾ ಎನ್ನುವ ವಿವರ ಬಹಿರಂಗವಾಗಿಲ್ಲ. ಆದರೆ ಇಬ್ಬರೂ ಪಾರ್ಟಿಗೆ ಹಾಜರಾಗಿರುವ ಫೋಟೋಗಳು ವೈರಲ್ ಆಗಿವೆ.

 

47

ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಪುತ್ರ ಇಬ್ರಾಹಿಂ ಕೂಡ ಪಾರ್ಟಿಯಲ್ಲಿ ಹಾಜರಾಗಿದ್ದರು. ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ದಂಪತಿ, ಆಯುಷ್ಮಾನ್ ಖುರಾನ ದಂಪತಿ, ರಣಬೀರ್ ಕಪೂರ್ ಮತ್ತು ತಾಯಿ ನೀತು ಕಪೂರ್ ಪಾರ್ಟಿಯಲ್ಲಿ ಹಾಜರಿದ್ದರು.

 

57

ಇನ್ನು ವರುಣ್ ಧವನ್, ಕಿಯಾರಾ ಅಡ್ವಾಣಿ, ಶ್ವೇತಾ ಬಚ್ಚನ್, ಫರ್ಹಾ ಖಾನ್, ಮನೀಶ್ ಮಲ್ಹೋತ್ರಾ, ರಾಣಿ ಮುಖರ್ಜಿ, ಮಲೈಕಾ ಅರೋರಾ, ಅನನ್ಯಾ ಪಾಂಡೆ, ನವ್ಯಾ ನವೇಲಿ, ಸಾರಾ ಅಲಿ ಖಾನ್, ಜಾಹ್ನವಿ ಕಪೂರ್ ಕೂಡ ಕರಣ್ ಜೋಹರ್ ಬರ್ತಡೇ ಪಾರ್ಟಿಯಲ್ಲಿ ಮಿಂಚಿದ್ದಾರೆ.

 

67

ಇನ್ನು ನಟ ಹೃತಿಕ್ ರೋಷನ್ ಗರ್ಲ್ ಫ್ರೆಂಡ್ ಸಬಾ ಜೊತೆ ಪಾರ್ಟಿಗೆ ಹಾಜರಾಗಿದ್ದರೆ, ಹೃತಿಕ್ ಮಾಜಿ ಪತ್ನಿ ಸುಸೇನ್ ಖಾನ್ ಬಾಯ್ ಫ್ರೆಂಡ್ ಅರ್ಸ್ಲಾನ್ ಜೊತೆ ಪಾರ್ಟಿಗೆ ಎಂಟ್ರಿ ಕೊಟ್ಟಿದ್ದರು. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಇಬ್ಬರು ತಮ್ಮ ಸಂಬಂಧವನ್ನು ಅಧಿಕೃತ ಗೊಳಿಸುತ್ತಿದ್ದಾರೆ. ನಟ ಆಮೀರ್ ಖಾನ್ ಮಾಜಿ ಪತ್ನಿ ಜೊತೆ ಪಾರ್ಟಿಲ್ಲಿ ಕಾಣಿಸಿಕೊಂಡಿದ್ದರು. 

 

77

ಇನ್ನು ಪಾರ್ಟಿಯಲ್ಲಿ ಸೌತ್ ಸ್ಟಾರ್ ಗಳಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ಸೌತ್ ಸ್ಟಾರ್‌ಗಳು ಭಾಗಿಯಾಗಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಕೆಜಿಎಫ್ ತಂಡಕ್ಕೂ ಆಹ್ವಾನ ವಿತ್ತು ಎನ್ನಲಾಗಿತ್ತು. ಆದರೆ ದಕ್ಷಿಣ ಭಾರತದಿಂದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಾತ್ರ ಕಾಣಿಸಿಕೊಂಡಿದ್ದಾರೆ.

 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories