ವಯಸ್ಸು 49 ಆದ್ರೂ ಇನ್ನೂ ಯಾಕೆ ಸಿಂಗಲ್ ನಟಿ ಅಮೀಷಾ ಪಟೇಲ್?

Published : May 02, 2025, 09:04 PM ISTUpdated : May 03, 2025, 08:06 AM IST

ತಮ್ಮ ಮೊದಲ ಚಿತ್ರ 'ಕಹೋ ನಾ ಪ್ಯಾರ್ ಹೈ' ಮೂಲಕ ರಾತ್ರೋರಾತ್ರಿ ಸ್ಟಾರ್ ಆದ ನಟಿ ಅಮೀಷಾ ಪಟೇಲ್, ಇತ್ತೀಚಿನ ದಿನಗಳಲ್ಲಿ ತಮ್ಮ ಹಾಟ್ ನೆಸ್ ನಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿ ಹಚ್ಚುತ್ತಿದ್ದಾರೆ.  

PREV
19
ವಯಸ್ಸು 49 ಆದ್ರೂ ಇನ್ನೂ ಯಾಕೆ ಸಿಂಗಲ್ ನಟಿ ಅಮೀಷಾ ಪಟೇಲ್?

ಅಮೀಷಾ ಪಟೇಲ್ ಇನ್ನೂ ಸಿಂಗಲ್
ಬಾಲಿವುಡ್ ನಟಿ ಅಮೀಷಾ ಪಟೇಲ್ (Ameesha Patel) ಬಗ್ಗೆ ಯಾವುದೇ ಪರಿಚಯದ ಅಗತ್ಯವಿಲ್ಲ. 'ಕಹೋ ನಾ ಪ್ಯಾರ್ ಹೈ' ಚಿತ್ರದ ಮೂಲಕ ರಾತ್ರೋರಾತ್ರಿ ಸ್ಟಾರ್ ಆದ ನಟಿ ಅಮೀಷಾ ಪಟೇಲ್. ಇತ್ತೀಚಿನ ದಿನಗಳಲ್ಲಿ ತಮ್ಮ ಹಾಟ್ ನೆಸ್ ನಿಂದ ಸಾಮಾಜಿಕ ಮಾಧ್ಯಮದಲ್ಲಿ ಕಿಚ್ಚು ಹಚ್ಚುತ್ತಿದ್ದಾರೆ. 49 ನೇ ವಯಸ್ಸಿನಲ್ಲಿಯೂ 'ಗದರ್ ನ ಸಕಿನಾ ಇನ್ನೂ ಸಿಂಗಲ್ ಅನ್ನೋದು ಹಲವರಿಗೆ ತಿಳಿದಿಲ್ಲ.
 

29

ಇನ್ನೂ ಯಾಕೆ ಮದುವೆಯಾಗಲಿಲ್ಲ?
ಇತ್ತೀಚಿನ ಸಂದರ್ಶನವೊಂದರಲ್ಲಿ ಅಮೀಷಾ ಪಟೇಲ್ ಅವರು 49 ನೇ ವಯಸ್ಸಿನಲ್ಲಿಯೂ ಮದುವೆಯಾಗದಿದ್ದಕ್ಕಾಗಿ (still single) ಯಾವುದೇ ವಿಷಾದವಿಲ್ಲ ಎಂದು ಹೇಳಿದರು. ಅವರು ಈಗ ಹೇಗಿದ್ದಾರೋ ಹಾಗೆಯೇ  ಸಂತೋಷವಾಗಿದ್ದಾರೆ ಎಂದು ಹೇಳಿದರು. ಮದುವೆ ಎಂದಿಗೂ ತನಗೆ ಆದ್ಯತೆಯಾಗಿಲ್ಲ ಸಂಬಂಧಗಳನ್ನು ಕಾಪಾಡಿಕೊಳ್ಳುವುದಕ್ಕಿಂತ ತನ್ನ ಕೆಲಸವನ್ನು ನಾನು ಪ್ರೀತಿಸುತ್ತೇನೆ ಎಂದಿದ್ದಾರೆ ನಟಿ. 

39

ಪರ್ಫೆಕ್ಟ್ ವ್ಯಕ್ತಿ ಸಿಕ್ಕಿಲ್ಲ
ಅಮೀಷಾ ಹೇಳುವಂತೆ ತನ್ನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಅಥವಾ ತನ್ನ ಅಗತ್ಯಗಳಿಗೆ ಸರಿಹೊಂದುವ ವ್ಯಕ್ತಿಯನ್ನು ಅವರು ಇದುವರೆಗೂ ಭೇಟಿ ಮಾಡಿಲ್ಲ.
 

49

ಸಮಯ ಮತ್ತು ಗಮನ
ಸಂಬಂಧಕ್ಕೆ ಸಮಯ ಮತ್ತು ಗಮನ ನೀಡುವ ಜವಾಬ್ದಾರಿಯನ್ನು ಸೀರಿಯಸ್ ಆಗಿಯೇ ತೆಗೆದುಕೊಂಡಿರುವ  ಅಮೀಷಾ , ಈ ಸಮಯದಲ್ಲಿ ಸಮಯ ಹಾಗೂ ಗಮನವನ್ನು ಯಾರಿಗೂ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ..

59

ಅನ್ ಪ್ರೆಡಿಕ್ಟೇಬಲ್ ಶೆಡ್ಯೂಲ್
ತನ್ನ ಶೆಡ್ಯೂಲ್ ತುಂಬಾ ಅನಿರೀಕ್ಷಿತವಾಗಿದೆ, ದೀರ್ಘ ಶೂಟಿಂಗ್ ಸಮಯ, ಪ್ರಯಾಣ ಮತ್ತು ಕ್ರೇಜ್ ಕರಿಯರ್ ಇರುವಾಗ ಸಂಬಂಧಕ್ಕಾಗಿ ಸಮಯ ಕಂಡುಕೊಳ್ಳುವುದು ಕಷ್ಟ ಎಂದು ಅಮೀಷಾ ಹೇಳಿದರು.

69

ಸ್ವತಂತ್ರ ಮಹಿಳೆ
ತನ್ನಂತಹ ಯಶಸ್ವಿ ಮತ್ತು ಸ್ವತಂತ್ರ ಮಹಿಳೆಯೊಂದಿಗೆ ಯಾವುದೇ ಪುರುಷನು ಬದುಕುವುದು ಸುಲಭವಲ್ಲ ಅನ್ನೋದನ್ನು ಸಹ ಅಮೀಷಾ ಹೇಳಿದ್ದಾರೆ. 

79

ಸಂಗಾತಿಯ ಅಗತ್ಯವಿಲ್ಲ
ತನ್ನ ಜೀವನ ಈಗಾಗಲೇ ಪೂರ್ಣಗೊಂಡಿದೆ ಮತ್ತು ತನ್ನ ಬಗ್ಗೆ ತನಗೆ ವಿಶ್ವಾಸವಿರುವುದರಿಂದ ತನಗೆ ಸಂಗಾತಿಯ ಅವಶ್ಯಕತೆ ಇಲ್ಲ ಎಂದಿದ್ದಾರೆ ಅಮೀಷಾ . 

89

ತನ್ನ ಬಗ್ಗೆ ಹೆಮ್ಮೆ ಇದೆ
ನಾನು ಹೊರಗಿನಿಂದ ಬಂದು ಬಾಲಿವುಡ್‌ನಲ್ಲಿ ದೊಡ್ಡ ಸ್ಥಾನವನ್ನು ಗಳಿಸಿದ್ದಕ್ಕೆ ತನಗೆ ಹೆಮ್ಮೆಯಿದೆ ಎನ್ನುತ್ತಾರೆ ಗದಾರ್ ಬೆಡಗಿ.

99

ಮದುವೆ ಅಗತ್ಯ ಇಲ್ಲ

ಮದುವೆ ಅಗತ್ಯ ಎಂಬ ಚಿಂತನೆಯನ್ನು ಟೀಕಿಸಿದ ಅವರು, ಪ್ರತಿಯೊಬ್ಬರ ಜೀವನದ ಆದ್ಯತೆಗಳು ವಿಭಿನ್ನವಾಗಿವೆ , ಅದರಲ್ಲಿ ನಾಚಿಗೆಪಡುವಂತದ್ದೂ ಏನೂ ಇಲ್ಲ ಎಂದಿದ್ದಾರೆ ಅಮೀಷಾ. 

Read more Photos on
click me!

Recommended Stories