ಈ ಸಿನಿಮಾ ಬಜೆಟ್ ಕೇವಲ 10 ಕೋಟಿ ರೂಪಾಯಿ. ಆದರೆ ಗಳಿಸಿದ್ದು ಬರೋಬ್ಬರಿ 90 ಕೋಟಿ ರೂಪಾಯಿ. ಈ ಚಿತ್ರ ಗಿನ್ನಿಸ್ ವಿಶ್ವದಾಖಲೆಯನ್ನು ಬರೆದಿತ್ತು. ಇಷ್ಟೇ ಅಲ್ಲ ಈ ಚಿತ್ರದ ಮೂಲಕ ರಾತ್ರೋರಾತ್ರಿ ಇಬ್ಬರು ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ

ಮುಂಬೈ(ಮಾ.09) ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಹಲವು ಚಿತ್ರಗಳು ದುಪ್ಪಟ್ಟು ಕಲೆಕ್ಷನ್ ಮಾಡಿ ಭರ್ಜರಿ ಯಶಸ್ಸುಗಳಿಸಿದ ಉದಾಹರಣೆ ಇದೆ. ಅದೇ ರೀತಿ ಕೋಟಿ ಕೋಟಿ ರೂಪಾಯಿ ಸುರಿದು ಅದರ ಅರ್ಥದಷ್ಟು ಸಿಗದೆ ಕೈಸುಟ್ಟಕೊಂಡ ಹಲವರಿದ್ದಾರೆ. ಆದರೆ ಈ ಬಾಲಿವುಡ್ ಚಿತ್ರ ನಿರ್ಮಾಣ ಬಜೆಟ್ ಕೇವಲ 10 ಕೋಟಿ ರೂಪಾಯಿ. ಆದರೆ ಈ ಚಿತ್ರ ಗಳಿಸಿದ್ದು ಬರೋಬ್ಬರಿ 90 ಕೋಟಿ ರೂಪಾಯಿ. ಇನ್ನು ಗಿನ್ನೆಸ್ ವಿಶ್ವಾದಾಖಲೆ ಕಿರೀಟ ಕೂಡ ಈ ಚಿತ್ರ ಮುಡಿಗೇರಿಸಿಕೊಂಡಿದೆ. ಜೊತೆಗೆ ರಾತ್ರೋರಾತ್ರಿ ಇಬ್ಬರು ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿಸಿದ್ದಾರೆ. ಈ ಚಿತ್ರ ಬೇರೆ ಯಾವುದು ಅಲ್ಲ, ಅದು ಕಹೋ ನಾ ಪ್ಯಾರ್ ಹೆ.

ರಾಕೇಶ್ ರೋಶನ್ ನಿರ್ದೇಶನದ ಈ ಚಿತ್ರದಲ್ಲಿ ಪುತ್ರ ಹೃತಿಕ್ ರೋಶನ್ ನಾಯಕ ನಟನಾಗಿ ಪದಾರ್ಪಣೆ ಮಾಡಿದ್ದಾರೆ. ಜೊತೆಗೆ ನಾಯಕಿಯಾಗಿ ಅಮಿಷಾ ಪಟೇಲ್ ನಟಿಸಿದ್ದಾರೆ. ಅನುಪಮ್ ಖೇರ್, ಫರಿದಾ ಜಲಾರ್, ಮೊಹ್ನೀಶ್ ಬೆಹೆಲ್ ಸೇರಿದಂತೆ ಹಲವು ತಾರಾಗಣಗಳು ಈ ಚಿತ್ರದಲ್ಲಿದೆ. 10 ಕೋಟಿ ರೂಪಾಯಿ ಬಂಡವಾಳ ಹಾಕಿ 90 ಕೋಟಿ ತೆಗೆಯುವ ಮೂಲಕ ಗರಿಷ್ಠ ಗಳಿಕೆ ಸಾಧನೆ ಮಾಡಿತ್ತು.

ಹೃತಿಕ್ 'ಕಹೋ ನಾ ಪ್ಯಾರ್ ಹೈ' ಚಿತ್ರೀಕರಣ ವೇಳೆ ತಂದೆ ಜೊತೆ ಜಗಳ ಮಾಡಿದ್ರು ಗೊತ್ತಾ

ಗಿನ್ನೆಸ್ ದಾಖಲೆ
ಕಹೋ ನಾ ಪ್ಯಾರ್‌ಗೆ ಚಿತ್ರ ಗಿನ್ನೆಸ್ ವಿಶ್ವಾದಾಖಲೆ ಬರೆದಿತ್ತು. ಕಾರಣ ಈ ಚಿತ್ರ ಬರೋಬ್ಬರಿ 92 ಪ್ರಶಸ್ತಿ ಗೆದ್ದುಕೊಂಡಿತ್ತು. ಈ ಮೂಲಕ ಅತೀ ಹೆಚ್ಚು ಪ್ರಶಸ್ತಿ ಗೆದ್ದ ಚಿತ್ರ ಅನ್ನೋ ದಾಖಲೆ ಬರೆದಿತ್ತು. ಒಂದೇ ಚಿತ್ರಕ್ಕೆ ಇಷ್ಟೊಂದು ಪ್ರಶಸ್ತಿ ಸಿಕ್ಕಿದ್ದು ಇದೇ ಮೊದಲು. 

ಸ್ಟಾರ್ ಪಟ್ಟ
ಹೃತಿಕ್ ರೋಶನ್ ನಾಯಕ ನಟನಾಗಿ ಈ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದರೆ, ಇತ್ತ ನಾಯಕಿಯಾಗಿ ಅಮಿಷಾ ಪಟೇಲ್ ಪಾದರ್ಪಣೆ ಮಾಡಿದ್ದರು. ಇಬ್ಬರ ಕರಿಯರ್‌ಗೂ ಈ ಕಹೋ ನಾ ಪ್ಯಾರ್ ಹೇ ಚಿತ್ರ ಅತೀ ದೊಡ್ಡ ತಿರುವು ನೀಡಿತ್ತು. ಬಾಲಿವುಡ್‌ನ ಮೋಸ್ಟ್ ಸ್ಟೈಲಿಶ್ ನಟ ಅನ್ನೋ ಹೆಗ್ಗಳಿಕೆಗೂ ಹೃತಿಕ್ ರೋಶನ್ ಪಾತ್ರರಾಗಿದ್ದರು.

ಹೃತಿಕ್ ಮೊದಲ ಆಯ್ಕೆಯಾಗಿರಲಿಲ್ಲ
ಕಹೋ ನಾ ಪ್ಯಾರ್ ಹೇ ಚಿತ್ರಕ್ಕೆ ಹೃತಿಕ್ ಹಾಗೂ ಅಮಿಷಾ ಪಟೇಲ್ ಮೊದಲ ಆಯ್ಕೆಯಾಗಿರಲಿಲ್ಲ. ನಿರ್ದೇಶಕ ರಾಕೇಶ್ ರೋಶನ್, ಈ ಚಿತ್ರವನ್ನು ಶಾರುಖ್ ಖಾನ್ ಅಥವಾ ಅಮೀರ್ ಖಾನ್ ಜೊತೆ ಮಾಡಲು ಬಯಸಿದ್ದರು. ಇಬ್ಬರು ರೊಮ್ಯಾಂಟಿಕ್ ಹೀರೋಗಳಾಗಿ ಗುರುತಿಸಿಕೊಂಡಿದ್ದರು. ಸಾಕಷ್ಟು ರೊಮ್ಯಾಂಟಿಕ್ ಚಿತ್ರಗಳು ಸೂಪರ್ ಹಿಟ್ ಆಗಿತ್ತು. ಆದರೆ ಚಿತ್ರದ ಸಂಭಾಷಣೆ, ಸ್ಕ್ರೀನ್ ಪ್ಲೇ ಕುರಿತು ಚರ್ಚೆಗಳ ಸಮಯದಲ್ಲಿ ಈ ಚಿತ್ರಕ್ಕೆ ಹೊಸ ಮುಖಗಳ ಅವಶ್ಯಕತೆ ಇದೆ ಎಂದು ನಿರ್ಧರಿಸಲಾಗಿತ್ತು. ಹೀಗಾಗಿ ರಾಕೇಶ್ ರೋಶನ್ ಕೊನೆಗೆ ತಮ್ಮ ಪುತ್ರ ಹೃತಿಕ್ ರೋಶನ್‌ ಆಯ್ಕೆ ಮಾಡಿದ್ದರು. ಇತ್ತ ಅಮಿಷಾ ಪಟೇಲ್‌ಗೂ ನಾಯಕಿಯಾಗಿ ಇದು ಮೊದಲ ಚಿತ್ರ. ಹೀಗಾಗಿ ರಾತ್ರೋರಾತ್ರಿ ಇಬ್ಬರು ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. 

ಈ ಚಿತ್ರವನ್ನು ಶಾರುಖ್ ಖಾನ್ ಅಥವಾ ಅಮಿರ್ ಖಾನ್ ಮಾಡಿದರೆ ರಿಪೀಟ್ ಆಗುತ್ತೆ. ಹೀಗಾಗಿ ಹೊಸಬರು ಮಾಡಿದರೆ ಚೆನ್ನಾಗಿರುತ್ತೆ ಎಂದು ಖುದ್ದು ಹೃತಿಕ್ ರೋಶನ್ ಕೂಡ ಸಲಹೆ ನೀಡಿದ್ದರು. ಆದರೆ ಕೊನೆಯದಾಗಿ ತಾನೆ ಆಯ್ಕೆಯಾಗುತ್ತೇನೆ ಅನ್ನೋ ಯಾವುದೇ ಸುಳಿವು ಹೃತಿಕ್ ರೋಶನ್‌ಗೆ ಇರಲಿಲ್ಲ.

ಇದೇ ರೀತೀ ಹಲವು ಚಿತ್ರಗಳು ಕಡಿಮೆ ಬೆಜೆಟ್‌ನಲ್ಲಿ ನಿರ್ಮಾಣ ಮಾಡಿ ಕೋಟಿ ಕೋಟಿ ರೂಪಾಯಿ ಗಳಿಸಿದೆ. ಇತ್ತೀಚಿಗಿನ ಉದಾಹರಣೆ ಎಂದರೆ 15 ಕೋಟಿ ರೂಪಾಯಿಯಲ್ಲಿ ಕನ್ನಡದ ಕಾಂತಾರ ಚಿತ್ರ 400 ಕೋಟಿ ರೂಪಾಗಿಂತಲೂ ಅಧಿಕ ಹಣ ಗಳಿಸಿದೆ.

'ಕಹೋ ನಾ ಪ್ಯಾರ್ ಹೈ' ಬಳಿಕ ಏನೇ ಕಸರತ್ತು ಮಾಡಿದ್ರೂ ಹೃತಿಕ್ ರೋಶನ್‌ ಗೆಲ್ಲೋಕೆ ಆಗ್ತಿಲ್ವ?