ಪಾಕಿಸ್ತಾನಿ ನಟನ ಜೊತೆಗಿನ ಸಂಬಂಧದ ಬಗ್ಗೆ ಅಮೀಷಾ ಪಟೇಲ್‌ ಏನು ಹೇಳಿದ್ದಾರೆ ಗೊತ್ತಾ?

Published : Sep 30, 2022, 04:32 PM IST

ಕಹೋ ನಾ ಪ್ಯಾರ್ ಹೈ' ಮತ್ತು 'ಗದರ್: ಏಕ್ ಪ್ರೇಮ್ ಕಥಾ' ನಂತಹ ಹಿಟ್‌ಗಳಲ್ಲಿ ಕಾಣಿಸಿಕೊಂಡಿರುವ ನಟಿ ಅಮೀಷಾ ಪಟೇಲ್ (Ameesha Patel) ಇತ್ತೀಚೆಗೆ ಪಾಕಿಸ್ತಾನಿ ನಟ ಇಮ್ರಾನ್ ಅಬ್ಬಾಸ್ ಅವರೊಂದಿಗೆ ರೊಮ್ಯಾಂಟಿಕ್ ಹಾಡಿನ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆದ ನಂತರ ಇಬ್ಬರ ನಡುವಿನ ಸಂಬಂಧ ಚರ್ಚೆಯಾಗುತ್ತಿದೆ. ಇದೀಗ ಈ ವಿಷಯದ ಬಗ್ಗೆ ಮೊದಲ ಬಾರಿಗೆ ಮಾತನಾಡುತ್ತಾ ಅಮಿಶಾ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ಅಮೀಶಾ ಏನು ಹೇಳಿದ್ದಾರೆ ಗೊತ್ತಾ?

PREV
16
ಪಾಕಿಸ್ತಾನಿ ನಟನ  ಜೊತೆಗಿನ ಸಂಬಂಧದ ಬಗ್ಗೆ ಅಮೀಷಾ ಪಟೇಲ್‌ ಏನು ಹೇಳಿದ್ದಾರೆ ಗೊತ್ತಾ?

 ಬಾಲಿವುಡ್ ನಟಿ ಅಮೀಷಾ ಪಟೇಲ್ ಪಾಕಿಸ್ತಾನಿ ನಟ ಇಮ್ರಾನ್ ಅಬ್ಬಾಸ್ ಜೊತೆಗಿನ ಸಂಬಂಧದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಆದರೆ, ಇದೀಗ ಅಮೀಷಾ ಈ ವರದಿಗಳಿಗೆ ತೆರೆ ಎಳೆದಿದ್ದಾರೆ.

26

ಈ ಇಡೀ ವಿಷಯವು ಮೂರ್ಖತನದಿಂದ ತುಂಬಿದೆ ಎಂದು ನಟಿ ಹೇಳಿದ್ದಾರೆ ಮತ್ತು ಪಾಕಿಸ್ತಾನಿ ನಟ ಇಮ್ರಾನ್ ಅಬ್ಬಾಸ್ ಜೊತೆಗಿನ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ ಅಮೀಷಾ ಪಟೇಲ್  ಈ ವದಂತಿಗಳು ಆಧಾರರಹಿತ ಎಂದಿದ್ದಾರೆ. 

36

ಸಂದರ್ಶನವೊಂದರಲ್ಲಿ, ಈ ವಿಷಯದ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ ಅಮೀಷಾ, 'ನಾನು ಕೂಡ ಈ ವರದಿಗಳನ್ನು ಓದಿದ್ದೇನೆ ಮತ್ತು ನಾನು ತುಂಬಾ ನಕ್ಕಿದ್ದೇನೆ. ಬಹಳ ವರ್ಷಗಳ ನಂತರ ನನ್ನ ಸ್ನೇಹಿತನೊಬ್ಬನನ್ನು ಭೇಟಿಯಾಗಿದ್ದು. ಇದು ಕೇವಲ ಭೇಟಿಯಾಗಿತ್ತು  ಈ ಸಮಯದಲ್ಲಿ ನಾವು ಆ ವೀಡಿಯೊವನ್ನು ಮಾಡಿದ್ದೇವೆ. ಇಡೀ ವಿಷಯವು ತುಂಬಾ ಹುಚ್ಚು ಮತ್ತು ಮೂರ್ಖತನವಾಗಿದೆ' ಎಂದು ಹೇಳಿದರು.

46

ಇತ್ತೀಚೆಗೆ ಅಮೀಷಾ ಬಹ್ರೇನ್‌ಗೆ ಭೇಟಿ ನೀಡಿದ್ದರು, ಅಲ್ಲಿ ಅವರು ಕಾರ್ಯಕ್ರಮವೊಂದರಲ್ಲಿ ಅಬ್ಬಾಸ್ ಅವರನ್ನು ಭೇಟಿಯಾದರು ಈ ಸಮಯದಲ್ಲಿ, ಇಬ್ಬರೂ 'ದಿಲ್ ಮೇ ದರ್ದ್ ಸಾ ಜಗಾ ಹೈ' ಹಾಡಿನ ಫನ್ನಿ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ. ಅದು ವೈರಲ್ ಆಗಿದೆ.  

56

ವೀಡಿಯೊ ವೈರಲ್ ಆದ ನಂತರ, ಅಮೀಷಾ ಮತ್ತು ಅಬ್ಬಾಸ್ ನಡುವೆ  ಸಂಬಂಧದ ವದಂತಿಗಳು ಪ್ರಾರಂಭವಾದವು, ಅದನ್ನು ಈಗ ಅಮೀಷಾ ಕೊನೆಗೊಳಿಸಿದ್ದಾರೆ.

 

66

ಅಮೀಷಾ ಈ ದಿನಗಳಲ್ಲಿ ಸನ್ನಿ ಡಿಯೋಲ್ ಜೊತೆಗಿನ 'ಗದರ್ 2' ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. 'ಗದರ್' ಎಲ್ಲಿ ಕೊನೆಗೊಂಡಿತೋ ಅಲ್ಲಿಂದ ಈ ಚಿತ್ರದ ಕಥೆ ಶುರುವಾಗಲಿದೆ.

Read more Photos on
click me!

Recommended Stories