ಜಿಯಾ ಖಾನ್ ಪ್ರಕರಣ: ಪಾಂಚೋಲಿಗೆ ಮುಗಿಯದ ಕಷ್ಟ, ನಟಿಯ ತಾಯಿಗೆ ನ್ಯಾಯಾಲಯ ಛೀಮಾರಿ
First Published | Sep 30, 2022, 4:24 PM ISTಬಾಲಿವುಡ್ ನಟರಾದ ಆದಿತ್ಯ ಪಾಂಚೋಲಿ ಮತ್ತು ಜರೀನಾ ವಹಾಬ್ ಅವರ ಪುತ್ರ ಸೂರಜ್ ಪಾಂಚೋಲಿ( Suraj Pancholi) 2015 ರಲ್ಲಿ 'ಹೀರೋ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರಕ್ಕಾಗಿ ಅವರಿಗೆ ಅತ್ಯುತ್ತಮ ನ್ಯೂಕಮ್ಮರ್ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ನೀಡಲಾಯಿತು. ಆದರೆ, ಈ ಚಿತ್ರ ಬಿಡುಗಡೆಯಾಗುವ ಎರಡು ವರ್ಷಗಳ ಮೊದಲೇ ಸೂರಜ್ ಸಖತ್ ಪ್ರಚಾರ ಪಡೆದಿದ್ದರು. ಇದಕ್ಕೆ ಕಾರಣ 2013ರಲ್ಲಿ ನಟಿ ಜಿಯಾ ಖಾನ್ (Jiah Khan) ಆತ್ಮಹತ್ಯೆ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿತ್ತು. ಜಿಯಾ ಅವರ ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಿರುವ ಸಂಬಂಧದ ಆಧಾರದ ಮೇಲೆ ಪೊಲೀಸರು ಸೂರಜ್‌ನನ್ನು ಬಂಧಿಸಿದ್ದರು. ಅಂದಿನಿಂದ, ಕಳೆದ 9 ವರ್ಷಗಳಲ್ಲಿ ಸೂರಜ್ ಅವರ ಎರಡು ಚಿತ್ರಗಳು ಮಾತ್ರ ಬಿಡುಗಡೆಯಾಗಿವೆ. ಅಷ್ಟೇ ಅಲ್ಲ, ಈ ಪ್ರಕರಣದಿಂದ ಇದುವರೆಗೂ ಖುಲಾಸೆಯಾಗಲು ಸಾಧ್ಯವಾಗಿಲ್ಲ. ಇದೀಗ ಸೂರಜ್ ಮತ್ತೊಮ್ಮೆ ಈ ವಿಚಾರದಲ್ಲಿ ಕಷ್ಟ ಎದುರಿಸುತ್ತಿದ್ದಾರೆ.