Published : Jan 01, 2023, 04:21 PM ISTUpdated : Jan 01, 2023, 04:59 PM IST
ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ (Ranbir Kapoor) ಶನಿವಾರ ತಮ್ಮ ಸ್ನೇಹಿತರಿಗಾಗಿ ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ಹೊಸ ವರ್ಷದ ಪಾರ್ಟಿ ಆಯೋಜಿಸಿದ್ದರು. ಎಲ್ಲರೂ ಪೈಜಾಮ ಹಾಕ್ಕೊಂಡು ಪಾರ್ಟಿ ಮಾಡಿದ್ದು ವಿಶೇಷವಾಗಿತ್ತು. ಇದರಲ್ಲಿ ಆದಿತ್ಯ ರಾಯ್ ಕಪೂರ್, ಅಯಾನ್ ಮುಖರ್ಜಿ, ಶಾಹೀನ್ ಭಟ್, ಲವ್ ರಂಜನ್ ಅವರ ಪತ್ನಿ ಅಲಿಶಾ ವೈದ್ ಮತ್ತು ರೋಹಿತ್ ಧವನ್ ಅವರ ಪತ್ನಿ ಜಾನ್ವಿ ದೇಸಾಯಿ ಅವರೊಂದಿಗೆ ಭಾಗವಹಿಸಿದ್ದರು. ಆಲಿಯಾ ಪಾರ್ಟಿಯ ಕೆಲವು ಅಡರೋಬಲ್ ಪೋಟೋಗಳು ಹಂಚಿಕೊಂಡಿದ್ದಾರೆ.
ಬಾಲಿವುಡ್‌ನ ನ್ಯೂ ಮಾಮ್ ಆಲಿಯಾ ಹೊಸ ವರ್ಷಾಚರಣೆಯ ಪಾರ್ಟಿ ಫೋಟೋಗಳಿಗೆ 'ಹೊಸ ಶುಭಾಶಯಗಳು .. ನನ್ನ ಪ್ರೀತಿಪಾತ್ರರೊಂದಿಗೆ' ಎಂದು ಕ್ಯಾಪ್ಷನ್ ಬರೆದಿದ್ದಾರೆ.
26
ಫೋಟೋಗಳಲ್ಲಿ, ಆಲಿಯಾ ಕಪ್ಪು ಬಣ್ಣದ ಮೇಲೆ ಪಿಂಕ್ ಹಾರ್ಟ್ ಪ್ರಿಂಟ್ ಇರುವ ಪೈಜಾಮಾ ಸೆಟ್‌ನಲ್ಲಿ ಕಾಣಿಸಿಕೊಂಡರೆ, ರಣಬೀರ್ ಕಪ್ಪು ಪೈಜಾಮಾ ಸೆಟ್‌ನಲ್ಲಿ ಕಾಣಿಸಿಕೊಳ್ಳಬಹುದು. ಅಲಿಯಾಳ ಸಹೋದರಿ ಶಾಹೀನ್ ಕೂಡ ಆಫ್-ವೈಟ್ ಪ್ರಿಂಟೆಡ್ ಪೈಜಾಮಾ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ
36
ಪಾರ್ಟಿಯ ಒಂದು ಗ್ರೂಪ್ ಫೋಟೊ ಜೊತೆ ಆಲಿಯಾ ಭಟ್ ಅವರು ತಮ್ಮ ಎರಡು ಸಿಂಗಲ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಬಾಲ್ಕನಿಯಲ್ಲಿ ಸ್ಲೀಕ್ ಪೈಜಾಮಾ ಸೆಟ್ ಮತ್ತು 2023 ಹೆಡ್‌ಬ್ಯಾಂಡ್‌ನಲ್ಲಿ ಪೋಸ್ ನೀಡಿದ್ದಾರೆ.
46
ಈ ಫೋಟೊಗಳ ಜೊತೆ ಆಲಿಯಾ ಭಟ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲೂ ಕೂಡ ಕೆಲವು ಕ್ಯೂಟ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
56
ಸ್ಟೋರಿಯಲ್ಲಿ ಪಾರ್ಟಿ ಸಮಯದ ನಾಲ್ಕು ಫೋಟೋಗಳನ್ನು ಪೋಸ್ಟ್ ಮಾಡಿದ್ದು ಆದರಲ್ಲಿ ಒಂದು ಅವರ ಸಹೋದರಿ ಜೊತೆ ಕಾಣಿಸಿಕೊಂಡರೆ ಉಳಿದವು ಪಾರ್ಟಿಯ ಒಂದು ಝಲಕ್ ನೀಡುತ್ತವೆ.
66
2022 ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ಜೀವನ ಬೆಸ್ಟ್ ವರ್ಷ. ಹಲವು ವರ್ಷಗಳ ಡೇಟಿಂಗ್ ನಂತರ ಏಪ್ರಿಲ್‌ನಲ್ಲಿ ವಿವಾಹವಾದ ಈ ಜೋಡಿ ನವೆಂಬರ್ 6 ರಂದು ತಮ್ಮ ಮೊದಲ ಮಗು ಮಗಳು ರಾಹಾಳಿಗೆ ಪೋಷಕರಾದರು.