Brahmastra Event: ಆಲಿಯಾ - ರಣಬೀರ್ ಕಪೂರ್ ರೊಮ್ಯಾಂಟಿಕ್‌ ಮೂಮೆಂಟ್ಸ್‌!

Published : Dec 16, 2021, 06:20 PM ISTUpdated : Dec 16, 2021, 06:22 PM IST

ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್  (Ranbir Kapoor) ಮದುವೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಬ್ಬರೂ 2018 ರಿಂದ ಡೇಟಿಂಗ್ ಮಾಡುತ್ತಿರುವ ಈ ಕಪಲ್‌ ತಮ್ಮ ಪ್ರೀತಿಯನ್ನು ಎಲ್ಲರ ಮುಂದೆ ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾದ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡ  ಆಲಿಯಾ ಮತ್ತು ರಣಬೀರ್ ಕಪೂರ್  ಇಬ್ಬರೂ ಕೈ ಹಿಡಿದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಬುಧವಾರ, ಡಿಸೆಂಬರ್ 14 ರಂದು, ನವದೆಹಲಿಯಲ್ಲಿ ಅಯಾನ್ ಮುಖರ್ಜಿ ಅವರ ಬ್ರಹ್ಮಾಸ್ತ್ರ ಮೋಷನ್ ಪೋಸ್ಟರ್ ಬಿಡುಗಡೆಗಾಗಿ ಮೆಗಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆ ಸಮಯದ  ಆಲಿಯಾ ಮತ್ತು ರಣಬೀರ್ ಕಪೂರ್ ಅವರ ರೋಮ್ಯಾಂಟಿಕ್‌ ಮೂಮಮೆಂಟ್‌ಗಳ ಫೋಟೋ ಇಲ್ಲಿವೆ.

PREV
18
Brahmastra Event: ಆಲಿಯಾ - ರಣಬೀರ್ ಕಪೂರ್ ರೊಮ್ಯಾಂಟಿಕ್‌ ಮೂಮೆಂಟ್ಸ್‌!

ಬ್ರಹ್ಮಾಸ್ತ್ರ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ರಣಬೀರ್ ಕಪೂರ್ ಅವರ ಒಂದು ಲುಕ್‌ ಅನ್ನು ಅದರಲ್ಲಿ ತೋರಿಸಲಾಗಿದೆ. ಚಿತ್ರದಲ್ಲಿ ರಣಬೀರ್ ಕಪೂರ್  ಪಾತ್ರವು ಸೂಪರ್ ಪವರ್ ಹೊಂದಿರುವ ವ್ಯಕ್ತಿಯ ಪಾತ್ರವಾಗಿರುತ್ತದೆ.
 

28

ಅಯಾನ್ ಮುಖರ್ಜಿ ಅವರು ಚಲನಚಿತ್ರ ಬಿಡುಗಡೆಗಾಗಿ ಈ ಮೆಗಾ ಈವೆಂಟ್ ಅನ್ನು ಆಯೋಜಿಸಿದರು. ಇದರಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್ ಭಾಗವಹಿಸಿದ್ದರು. ಈ ವೇಳೆ ಇಬ್ಬರೂ ಪರಸ್ಪರ ಖುಷಿಯಾಗಿ ಹರಟೆ ಹೊಡೆಯುತ್ತಿರುವುದು ಕಂಡು ಬಂತು

38

ಆಲಿಯಾ ಭಟ್ ಕೆಂಪು ಡ್ರೆಸ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಅದೇ ಸಮಯದಲ್ಲಿ ದೆಹಲಿಯ ಚಳಿ ತಪ್ಪಿಸಲು ರಣಬೀರ್ ಕಪೂರ್ ಜಾಕೆಟ್ ಧರಿಸಿದ್ದರು. ಇವರಿಬ್ಬರ ಜೋಡಿ ವೇದಿಕೆ ಮೇಲೆ ಕಾಣಿಸಿಕೊಂಡ ಸಮಯದ ಫೋಟೋಗಳು ವೈರಲ್‌ ಆಗಿವೆ.

48

ಈ ವೇಳೆ ಮಾಧ್ಯಮದವರು ಮದುವೆ ಯಾವಾಗ ಎಂದು ಕೇಳಿದರು. ಮೀಡಿಯಾದವರ ಈ ಪ್ರಶ್ನೆಗೆ ಇಬ್ಬರೂ ನಾಚಿಕೊಳ್ಳುತ್ತಿರುವುದು ಕಂಡುಬಂದಿತು. ಇವತ್ತಿಗೆ ಒಂದು ಡೇಟ್ ಸಾಕು ಎಂದು ರಣಬೀರ್ ಹೇಳಿದ್ದಾರೆ.

58

ಈ ಚಿತ್ರದಲ್ಲಿ ರಣಬೀರ್ ಮತ್ತು ಆಲಿಯಾ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಅಫ್‌ ಸ್ಕ್ರೀನ್‌ ಜೊತೆ ಈ ಸಿನಿಮಾದ ಮೂಲಕ  ಇಬ್ಬರೂ ತೆರೆಯ ಮೇಲೂ ರೊಮ್ಯಾನ್ಸ್ ಮಾಡಲಿದ್ದಾರೆ.
 

68

ಈ ಸಮಯದಲ್ಲಿ ರಣಬೀರ್ ಕಪೂರ್ ತಮ್ಮ ತಂದೆ ದಿವಂಗತ ರಿಷಿ ಕಪೂರ್ ಅವರನ್ನು ನೆನೆದು ಭಾವುಕರಾಗಿ ಕಾಣುತ್ತಿದ್ದರು. ಇದರೊಂದಿಗೆ, ಅವರು ತಮ್ಮ ತಂದೆಯ ನೆನಪಿಗಾಗಿ ತಮ್ಮ ಪ್ರಸಿದ್ಧ ಗೀತೆ ಓಂ ಶಾಂತಿ ಓಂ ಅನ್ನು ಕೂಡ ಹಾಡಿದರು. 

78

ಬ್ರಹ್ಮಾಸ್ತ್ರ' ಸಿನಿಮಾ  ಬಹಳ ದೊಡ್ಡ ಮಟ್ಟದಲ್ಲಿ ತಯಾರಲಾಗಿದ್ದು, ಇದರ ಬಜೆಟ್ ಸುಮಾರು 300 ಕೋಟಿ ಎಂದು ಹೇಳಲಾಗುತ್ತಿದೆ. ಧರ್ಮ ಪ್ರೊಡಕ್ಷನ್ಸ್‌ನ ಅತ್ಯಂತ ದುಬಾರಿ ಸಿನಿಮಾ ಇದಾಗಿದೆ. ಈ ಚಿತ್ರದ ಮೊದಲ ಭಾಗವು 9 ಸೆಪ್ಟೆಂಬರ್ 2022 ರಂದು ಬಿಡುಗಡೆಯಾಗಲಿದೆ. 

88

ಮಾಹಿತಿ ಪ್ರಕಾರ ಈ ಚಿತ್ರ 3 ಭಾಗಗಳಲ್ಲಿ ಬರಲಿದೆಯಂತೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಬಹಳ ದಿನಗಳ ಕಾಯುತ್ತಿದ್ದಾರೆ ಮತ್ತು ಬಾಲಿವುಡ್‌ನ ಈ ರಿಯಲ್‌ ಜೋಡಿಯನ್ನು ತೆರೆಯ ಮೇಲೆ ಒಟ್ಟಿಗೆ ನೋಡಲು ಉತ್ಸುಕರಾಗಿದ್ದಾರೆ.

Read more Photos on
click me!

Recommended Stories