Urfi Javed Saree Style: ಡ್ರೆಸ್ ಮಾತ್ರವಲ್ಲ, ಸೀರೇನೂ ಉಡ್ತಾರೆ ಉರ್ಫಿ, ಸೆರಗು ಸರಿ ಹಾಕಲ್ಲ ಅಷ್ಟೆ

Suvarna News   | Asianet News
Published : Dec 16, 2021, 12:54 PM ISTUpdated : Dec 16, 2021, 07:06 PM IST

Urfi Javed Saree Style: ನಟಿ ಉರ್ಫಿ ಜಾವೇದ್ ಮಾಡರ್ನ್ ಡ್ರೆಸ್ ಮಾತ್ರವಲ್ಲ, ಸೀರೆಯನ್ನೂ ಉಡ್ತಾರೆ. ಆದರೆ ಎಲ್ಲರಂತಲ್ಲ, ಉರ್ಫಿಯ ಸೀರೆಯ ಸ್ಟೈಲ್ ಕೂಡಾ ಯುನಿಕ್

PREV
113
Urfi Javed Saree Style: ಡ್ರೆಸ್ ಮಾತ್ರವಲ್ಲ, ಸೀರೇನೂ ಉಡ್ತಾರೆ ಉರ್ಫಿ, ಸೆರಗು ಸರಿ ಹಾಕಲ್ಲ ಅಷ್ಟೆ

ಡ್ರೆಸ್‌ನಿಂದಲೇ ಖ್ಯಾತಿ ಪಡೆದಿರೋ ಕಿರುತೆರೆ ನಟಿ ಉರ್ಫಿ ಜಾವೇದ್ ಬರೀ ಮಾಡರ್ನ್ ಡ್ರೆಸ್ ಮಾತ್ರ ಧರಿಸೋದಲ್ಲ. ಸೀರೆಯನ್ನೂ ಉಡ್ತಾರೆ. ಆದರೆ ಸೀರೆ ಉಡೋ ರೀತಿ ಮಾತ್ರ ಬೇರೆ.

213

ಅತಿ ಹೆಚ್ಚು ಎಕ್ಸ್‌ಪೋಸಿಂಗ್ ಡ್ರೆಸ್‌ಗಳನ್ನು ಹುಡಕು ಹುಡಕಿ ಹಾಕೋ ಉರ್ಫಿ ಸೀರೆಯಲ್ಲಿ ತಮ್ಮ ಕ್ರಿಯೇಟಿವಿ ತೋರಿಸ್ತಾರೆ. ಸೀರೆಯುಟ್ಟರೂ ತಮ್ಮ ಫ್ಯಾಷನ್‌ಗೆ ಕೊರತೆಯಾಗದಂತೆ ನೋಡಿಕೊಳ್ತಾರೆ.

313

ಹೌದು. ಉರ್ಫಿ ಸೀರೆ ಉಟ್ಟು ಪಡ್ಡೆ ಹುಡುಗರ ನಿದ್ದೆ ಕೆಡಿಸ್ತಾರೆ. ಯಾವುದೇ ಸೀರೆ ಧರಿಸಿದ್ರೂ ನಟಿಯ ಲುಕ್‌ ಮಾತ್ರ ಹಾಟ್ ಆಗಿರಬೇಕು, ಇದು ಉರ್ಫಿ ಕಂಡೀಷನ್

413

ಸ್ಟೈಲಿಷ್ ಡಿಸೈನರ್ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳುವ ಉರ್ಫಿ ಎಲ್ಲಕ್ಕಿಂತ ಹೆಚ್ಚು ಗಮನ ಕೊಡೋದು ಸೆರಗಿನ ಬಗ್ಗೆ. ನಾರ್ಮಲ್ ಆಗಿ ಸೀರೆ ಉಡೋದೆ ಇಲ್ಲ ಈ ನಟಿ

513

ಎದೆ ಮುಚ್ಚಬೇಕಾದ ಸೆರಗನ್ನು ತೆಗೆದು ಕೆಲವೊಮ್ಮೆ ಕೊರಳಿಗೆ ಸುತ್ತಿಕೊಳ್ಳುತ್ತಾರೆ. ಬ್ಲೌಸ್‌ ಡಿಸೈನ್‌ಗಳಲ್ಲಂತೂ ಸಖತ್ ಕ್ರಿಯೇಟಿವಿಟಿ ತೋರಿಸುತ್ತಾರೆ

613

ಏನೇ ಇರಲಿ, ಸೀರೆಯುಟ್ಟರೂ ನನ್ ಫ್ಯಾಷನ್ ರೂಲ್ಸ್ ಬ್ರೇಕ್ ಮಾಡಲ್ಲ ಅನ್ನೋ ಪಾಲಿಸಿ ಇಟ್ಟುಕೊಂಡಿರುವಂತಿದೆ ಉರ್ಫಿ. ಅದಕ್ಕೆ ಅವರ ಸೀರೆ(Saree) ಫೋಟೋಗಳೇ ಸಾಕ್ಷಿ

713

ಶಾರ್ಟ್ ಲೆಂಗ್ತ್ ಬ್ಲೌಸ್ ಧರಿಸೋ ಉರ್ಫಿ ತಮ್ಮ ಚಂದದ ಟ್ಯಾಟೂ ಕಡ್ಡಾಯವಾಗಿ ತೋರಿಸುತ್ತಾರೆ. ಅದನ್ನು ಮಾತ್ರ ಮಿಸ್ ಮಾಡುವುದಿಲ್ಲ. ಅದಕ್ಕಾಗಿ ಸೆರಗಿನಲ್ಲೂ ಕಾಂಪ್ರಮೈಸ್ ಮಾಡಿಕೊಳ್ಳುತ್ತಾರೆ

813

ಜ್ಯುವೆಲ್ಲರಿ, ಆರ್ಟಿಕಲ್ಸ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಉರ್ಫಿಯ ಗಮನ ಇರುವುದೆಲ್ಲ ಡ್ರೆಸ್ ಮೇಲೆ ಮಾತ್ರ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ

913

ಸ್ಟೈಲಿಷ್ ಡಿಸೈನರ್ ಸೀರೆಯ ಸೆರಗನ್ನು ಸುತ್ತಿ ಸುತ್ತಿ ಹಗ್ಗದಂತೆ ಹಾಕಿಕೊಂಡಿರುವ ಉರ್ಫಿ ಜಾವೇದ್. ಇದು ಉರ್ಫಿ ಸ್ಟೈಲ್‌ಗೆ ಉದಾಹರಣೆ

1013

ಡಾರ್ಕ್ ಗ್ರೀನ್ ಬಣ್ಣದ ಶೈನಿಂಗ್ ಸೀರೆಯಲ್ಲಿ ಮಿಂಚುತ್ತಿರುವ ನಟಿ. ಇದಕ್ಕೆ ಹಸಿರು ಹರಳಿನ ನೆಕ್ಲೆಸ್ ಧರಿಸಿ ಮ್ಯಾಚಿಂಗ್ ಮಾಡಿಕೊಂಡಿದ್ದಾರೆ.

1113

ಬಿಗ್‌ಬಾಸ್ ಒಟಿಟಿ ಮೂಲಕ ಸುದ್ದಿಯಾದ ಉರ್ಫಿಯ ಬಟ್ಟೆಗಳು ವೈರಲ್ ಆಗಿದ್ದು ಇತ್ತೀಚೆಗಾದರೂ ನಟಿ ಹಿಂದಿನಿಂದಲೂ ಆರಿಸಿಕೊಳ್ಳುತ್ತಿದ್ದದ್ದು ಇಂಥವೇ ಫ್ಯಾಷನ್‌ ವೇರ್‌ಗಳನ್ನು

1213

ಬಿಗ್‌ಬಾಸ್ ಮನೆಯಿಂದ ಹೊರಬಂದಾಗ ಉರ್ಫಿ ಮೊದಲ ಬಾರಿ ಮಾಧ್ಯಮಗಳ ಕಣ್ಣಿಗೆ ಬಿದ್ದು ಅವರ ಡ್ರೆಸ್‌ಗಾಗಿ ಟ್ರೋಲ್ ಆದರು. ನಂತರದಲ್ಲಿ ಇದು ಹಾಗೆಯೇ ಮುಂದುವರಿದಿದೆ

1313

ಇತ್ತೀಚೆಗಂತೂ ನಟಿ ಪಾಪ್ಪರಾಜಿಗಳಿಗಾಗಿಯೇ ಡ್ರೆಸ್ ಮಾಡ್ತಾರೇನೋ ಅನ್ನುವಷ್ಟು ಡಿಫರೆಂಟಾಗಿ ಡ್ರೆಸ್ ಮಾಡಿ ಹೊರಗಡೆ ಕಾಣಿಸಿಕೊಳ್ಳುತ್ತಿದ್ದಾರೆ

Read more Photos on
click me!

Recommended Stories