ಕರೀನಾ ಕಪೂರ್ (Kareena Kapoor) ಈ ವರ್ಷದ ಫೆಬ್ರವರಿಯಲ್ಲಿ ತಮ್ಮ ಎರಡನೇ ಮಗ ಜೆಹ್ ಅಲಿ ಖಾನ್‌ಗೆ (Jeh Ali Khan) ಜನ್ಮ ನೀಡಿದ್ದರು. ಜನನದ ನಂತರ, ಕರೀನಾ ತನ್ನ ಮಗನ ಫೋಟೋ ಮತ್ತು ಹೆಸರನ್ನು ಹಂಚಿಕೊಂಡಿರಲಿಲ್ಲ. ಆದರೆ, ಕರೀನಾ ತನ್ನ ಮಗನಿಗೆ ಜಹಾಂಗೀರ್ ಎಂದು ಹೆಸರಿಟ್ಟಿದ್ದಾರೆ ಎಂದು ತಿಳಿದುಬಂದಾಗ, ಅವರು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್‌ಗೆ ಒಳಗಾಗಿದ್ದರು.