ಮಗುವಾದ್ಮೇಲೂ ಕುಂದದ ಬೇಡಿಕೆ, ಆಲಿಯಾ ಕೈ ತುಂಬಾ ಇವೆ ಚಿತ್ರಗಳು!

Published : Aug 08, 2023, 04:32 PM IST

ಆಲಿಯಾ ಭಟ್‌  (Alia Bhatt) ಒಬ್ಬ ಟ್ಯಾಲೆಂಟೆಡ್‌ ನಟಿ ಎನ್ನುವುದರಲ್ಲಿ ಅನುಮಾನವೇ ಇಲ್ಲ.ಹೈವೇ, ರಾಝಿ, ಡಿಯರ್ ಜಿಂದಗಿ, ಗಂಗೂಬಾಯಿ ಮತ್ತು ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಅಲಿಯಾ  ಮುಂತಾದ ಚಲನಚಿತ್ರಗಳೊಂದಿಗೆ ಆಲಿಯಾ ತಮ್ಮ ಛಾಪು ಮೂಡಿಸಿದ್ದಾರೆ. ಪ್ರಸ್ತುತ ತಾಯಿತನದ ಹೊಸ ಜವಾಬ್ದಾರಿ ಹೊತ್ತಿರುವ ಆಲಿಯಾ ಮದುವೆ ಮತ್ತು ಮಗುವಿನ ನಂತರ ನಟಿಯರಿಗೆ ಅವಕಾಶ ಸಿಗುವುದಿಲ್ಲ ಎನ್ನುವ ಮಾತನ್ನು ಸುಳ್ಳಾಗಿಸಿದ್ದಾರೆ ಎಂದು ಮುಂಬುವರ ದಿನಗಳಲ್ಲಿ ಆಲಿಯಾ ಕಾಣಿಸಿಕೊಳ್ಳುವ ಸಿನಿಮಾ ಸಂಖ್ಯೆ ನೋಡಿದರೆ ತಿಳಿಯುತ್ತದೆ. ಆಲಿಯಾ ಭಟ್ ಅವರ  ನಟಿಯ ಮುಂಬರುವ ಚಿತ್ರಗಳ ವಿವರ ಇಲ್ಲಿದೆ.  

PREV
16
ಮಗುವಾದ್ಮೇಲೂ ಕುಂದದ ಬೇಡಿಕೆ, ಆಲಿಯಾ ಕೈ ತುಂಬಾ ಇವೆ ಚಿತ್ರಗಳು!

ಹಾರ್ಟ್‌ ಆಫ್‌ ಸ್ಟೋನ್‌:
ಈ ಸಿನಿಮಾದಲ್ಲಿ ವಿಲನ್ ಪಾತ್ರದ ಮೂಲಕ ಆಲಿಯಾ ಹಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಟಾಮ್ ಹಾರ್ಪರ್ ನಿರ್ದೇಶನದ ಈ ಅಮೇರಿಕನ್ ಸ್ಪೈ ಆಕ್ಷನ್ ಥ್ರಿಲ್ಲರ್‌ನಲ್ಲಿ ಆಲಿಯಾ ಅವರು ಕೀಯಾ ಧವನ್ ಪಾತ್ರವನ್ನು ನಿರ್ವಹಿಸುತ್ತಾರೆ.

26

ಜೀ ಲೆ ಜರಾ:
ಪ್ರಿಯಾಂಕಾ ಚೋಪ್ರಾ ಜೋನಾಸ್ ಮತ್ತು ಕತ್ರಿನಾ ಕೈಫ್ ಜೊತೆ ಆಲಿಯಾ ಭಟ್ ನಟಿಸಲಿದ್ದಾರೆ. ಈ ಚಲನಚಿತ್ರವು ಮೂವರು ಮಹಿಳಾ ನಾಯಕಿಯರು ಮಾಡುವ ರಸ್ತೆ ಪ್ರವಾಸದ ಸುತ್ತ ಸುತ್ತುತ್ತದೆ.

36

ವಾರ್‌ 2:
ಆಲಿಯಾ ಭಟ್ ತನ್ನ RRR ಸಹನಟ ಜೂನಿಯರ್ NTR ಜೊತೆಗೆ  ಹೃತಿಕ್ ರೋಷನ್‌ ಅವರ ಸ್ಪೈ ಥ್ರಿಲ್ಲರ್‌ ವಾರ್‌ 2 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

46

ಬೈಜು ಬಾವ್ರಾ:
ಸಂಜಯ್ ಲೀಲಾ ಬನ್ಸಾಲಿ ಅವರು ತಮ್ಮ ಮುಂಬರುವ ಚಿತ್ರ ಬೈಜು ಬಾವ್ರಾದಲ್ಲಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅವರನ್ನು ಕಾಸ್ಟ್‌  ಮಾಡುತ್ತಾರೆ ಎಂದು ವರದಿಯಾಗಿದೆ.

56

ಬ್ರಹ್ಮಾಸ್ತ್ರ 2:
ಬ್ರಹ್ಮಾಸ್ತ್ರ 2 ಚಿತ್ರದಲ್ಲಿ ಆಲಿಯಾ ಭಟ್ ತಮ್ಮ ಪತಿ ಮತ್ತು ನಟ ರಣಬೀರ್ ಕಪೂರ್ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲಿದ್ದಾರೆ.

66

RRR 2:
 ಆಲಿಯಾ ಅವರು ಐಕಾನಿಕ್‌ RRR ನ ಭಾಗವಾಗಿದ್ದರು ಮತ್ತು ಅವರ ಅಭಿನಯಕ್ಕಾಗಿ ಸದ್ದು ಮಾಡಿದರು. ಈಗ ಅವರು ಆರ್‌ಆರ್‌ಆರ್ 2 ಗಾಗಿ ಮತ್ತೆ ಬರುತ್ತಾರೆ ಎಂಬ ಗುಸುಗುಸುಗಳಿವೆ.


 

Read more Photos on
click me!

Recommended Stories