ಗಾಲ್ ಗಡೋಟ್ ಜೊತೆ ಹಾಲಿವುಡ್ ಪಾದಾರ್ಪಣೆ ಮಾಡಲಿರುವ ಆಲಿಯಾ ಭಟ್!

Suvarna News   | Asianet News
Published : Mar 08, 2022, 05:01 PM IST

ಆಲಿಯಾ ಭಟ್ (Alia Bhatt) ಇತ್ತೀಚಿನ ದಿನಗಳಲ್ಲಿ ಗಂಗೂಬಾಯಿ ಕಥಿಯಾವಾಡಿ (Gangubai Kathiawadi) ಚಿತ್ರದ ಕಾರಣದಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಚಿತ್ರದಲ್ಲಿನ ಅವರ ಅಭಿನಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಅವರ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಸುದ್ದಿ ಪ್ರಕಾರ, ಗಳಿಕೆಯಲ್ಲಿ ಚಿತ್ರವು ವಿಶ್ವಾದ್ಯಂತ 100 ಕೋಟಿ ಗಡಿ ದಾಟಿದೆ. ಈ ನಡುವೆ, ಬಾಲಿವುಡ್ ನಂತರ ಆಲಿಯಾ ಈಗ ಹಾಲಿವುಡ್‌ನಲ್ಲಿ ತನ್ನ ಛಾಪು ಮೂಡಿಸಲು  ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಬರುತ್ತಿದೆ.

PREV
16
  ಗಾಲ್ ಗಡೋಟ್ ಜೊತೆ ಹಾಲಿವುಡ್ ಪಾದಾರ್ಪಣೆ ಮಾಡಲಿರುವ ಆಲಿಯಾ ಭಟ್!

ವರದಿಗಳು ಹೇಳುವಂತೆ, ಆಲಿಯಾ ಅವರು ನೆಟ್‌ಫ್ಲಿಕ್ಸ್ ಮೂಲ ಚಿತ್ರದೊಂದಿಗೆ ಹಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಚಿತ್ರದ ಹೆಸರು ಹಾರ್ಟ್ ಆಫ್ ಸ್ಟೋನ್. ಹಾಲಿವುಡ್ ನಟಿ ಗಾಲ್ ಗಡೋಟ್ ಈ ಚಿತ್ರದಲ್ಲಿ ಆಲಿಯಾ ಜೊತೆ ಇರಲಿದ್ದಾರೆ.

26

ಈ ಸುದ್ದಿ ಕೇಳಿ ಆಲಿಯಾ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಆಲಿಯಾಗೂ ಮೊದಲು, ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ಹಾಲಿವುಡ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.


 

36

'ಆಲಿಯಾ ಭಟ್ ಹಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದು, ಗಾಲ್ ಗಡೋಟ್ ಎದುರು ನೆಟ್‌ಫ್ಲಿಕ್ಸ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾರ್ಟ್ ಆಫ್ ಸ್ಟೋನ್ ಚಿತ್ರ ಸ್ಪೈ ಥ್ರಿಲ್ಲರ್ ಚಿತ್ರವಾಗಿದೆ' ಎಂದು ಈ ಬಗ್ಗೆ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
 

46

ಅಲಿಯಾರ ಗಂಗೂಬಾಯಿ ಕಥಿಯಾವಾಡಿ   ಚಿತ್ರವು ಎಸ್ ಹುಸೇನ್ ಜೈದಿ ಅವರ ಪುಸ್ತಕ ಮಾಫಿಯಾ ಕ್ವೀನ್ಸ್ ಆಫ್ ಮುಂಬೈನ ಅಧ್ಯಾಯವನ್ನು ಆಧರಿಸಿದೆ. ಹಿಂದಿ ಮಾತ್ರವಲ್ಲದೆ ತೆಲುಗಿನಲ್ಲೂ ಚಿತ್ರ ಬಿಡುಗಡೆಯಾಗಿದೆ. ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮತ್ತು ಅಜಯ್ ದೇವಗನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


 

56

ಆಲಿಯಾ ಶೀಘ್ರದಲ್ಲೇ ರಣಬೀರ್ ಕಪೂರ್ ಜೊತೆಗೆ ಅಯಾನ್ ಮುಖರ್ಜಿ ಅವರ ಬ್ರಹ್ಮಾಸ್ತ್ರ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅವರು SS ರಾಜಮೌಳಿ ಅವರ RRR ಮತ್ತು ಕರಣ್ ಜೋಹರ್ ಅವರ ತಖ್ತ್ ಮತ್ತು ರಾಕಿ ಔರ್‌  ರಾಣಿ ಕಿ ಪ್ರೇಮ್‌ಕಹಾನಿ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

66

ಅಜಯ್ ದೇವಗನ್ ಅವರ ಕೆಲಸದ   ಬಗ್ಗೆ  ಹೇಳುವುದಾದರೆ ಅವರು RRR, ಮೇ ಡೇ, ಮೈದಾನ್, ಥ್ಯಾಂಕ್ ಗಾಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಜಯ್ ದೇವಗನ್  ಅವರು ಇತ್ತೀಚೆಗೆ ದೃಶ್ಯಂ 2 ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ.

Read more Photos on
click me!

Recommended Stories