ಮಗಳ ಮುಖ ಮುಚ್ಚಿದ ಮಿರಾ ರಾಜಪುತ್; ಶಾಕಿಂಗ್ ಕಾರಣ ತಿಳಿಸಿದ ಶಾಹಿದ್ ಪತ್ನಿ!

First Published Jul 10, 2022, 10:58 AM IST

ವೈರಲ್ ಆಗುತ್ತಿದೆ ಮಿರಾ ರಾಜಪುತ್‌ ಫ್ಯಾಮಿಲಿ ಫೋಟೋ. ಮಗಳ ಮುಖ ಮುಚ್ಚಿರುವುದಕ್ಕೆ ಕಾರಣ ತಿಳಿಸಿದ್ದಾರೆ. 
 

 ನಟ ಶಾಹಿದ್ ಕಪೂರ್ ಮತ್ತು ಮಿರಾ ರಾಜಪುತ್‌ ಫ್ಯಾಮಿಲಿ ಜೊತೆ ಯುರೋಪ್‌ ಟ್ರಿಪ್‌ ಎಂಜಾಯ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಮಿರಾ ಟ್ರೋಲ್‌ಗೆ ಗುರಿಯಾಗಿದ್ದಾರೆ. 

ಹಂಚಿಕೊಂಡ ಮೊದಲ ಫೋಟೋದಲ್ಲಿ ಮೀರಾ ಸಹೋದರಿ ಮತ್ತು ನಾದಿನಿ ಜೊತೆ ಬಿಲ್ಡಿಂಗ್‌ವೊಂದರ ಮುಂದೆ ಪೋಸ್ ಕೊಟ್ಟಿದ್ದಾರೆ. ಮೂವರೂ ವೈಟ್‌ ಡ್ರೆಸ್‌ ಧರಿಸಿದ್ದಾರೆ.

 ಮಿರಾ ವೈಟ್‌ ಟೀ-ಶರ್ಟ್‌ ಮತ್ತು ಶಾರ್ಟ್ಸ್‌ ಧರಿಸಿದ್ದರೆ, ಮಿಶಾ ವೈಟ್‌ ಫ್ರಾಕ್ ಧರಿಸಿ ಮ್ಯಾಚಿಂಗ್ ಸಾಕ್ಸ್‌ ಆಯ್ಕೆ ಮಾಡಿಕೊಂಡಿದ್ದಾರೆ. 'ಭಾಬಿ ಮತ್ತು ಅಪ್ಪಿ ಜೊತೆಗೆ' ಎಂದು ಮೀರಾ ಬರೆದಿಕೊಂಡಿದ್ದಾರೆ.

ಎರಡನೇ ಫೋಟೋದಲ್ಲಿ ಶಾಹಿದ್ ಕಪೂರ್ ಮಕ್ಕಳ ಜೊತೆ ನೆಟ್‌ ಏರುತ್ತಿರುವ ಫೋಟೋ ಹಂಚಿಕೊಂಡು 'ಮಕ್ಕಳು ಬೆಳೆಯುತ್ತಿದ್ದಂತೆ ದೊಡ್ಡವರಾಗುತ್ತಾರೆ ಆದರೆ ದೊಡ್ಡವರು ಮಕ್ಕಳಾಗುತ್ತಾರೆ'ಎಂದು ಬರೆದಿದ್ದಾರೆ ಮಿರಾ.

ಮೂರನೇ ಫೋಟೋದಲ್ಲಿ ಮಿಶಾ  strollerನಲ್ಲಿ ಕುಳಿತುಕೊಂಡಿದ್ದಾಳೆ. ಆಕೆಯ ಮುಖವನ್ನು ಮುಚ್ಚಿದಕ್ಕೆ ಮೀರಾ ಟ್ರೋಲ್ ಆಗಿದ್ದಾರೆ. 
 

'ನಾನು ಪದೇ ಪದೇ ಫೋಟೋ ಕ್ಲಿಕ್ ಮಾಡಿಕೊಳ್ಳೋಣ ಎಂದು ಹೇಳುತ್ತಿರುವುದು ಆಕೆಗೆ ಇಷ್ಟ ಪಡುತ್ತಿಲ್ಲ' ಎಂದು ಮಿರಾ ಹೇಳಿದ್ದಾರೆ.  ಮಿಶಾ ಮುಖದ ಭಾವನೆ ನೋಡಬೇಕು ತೋರಿಸಿ ಎಂದಿದ್ದಾರೆ ನೆಟ್ಟಿಗರು.

ಸೋಷಿಯಲ್ ಮೀಡಿಯಾದಲ್ಲಿ ಮಿರಾ ಸಖತ್ ಆಕ್ಟಿವ್ ಆಗಿದ್ದಾರೆ. ಲೈಫ್‌ಸ್ಟೈಲ್, ಫ್ಯಾಷನ್, ಸ್ಕಿನ್ ಕೇರ್, ಹೇರ್ ಕೇರ್ ಮತ್ತು ಪೇರೆಂಟಿಂಗ್‌ ಬಗ್ಗೆ ಅಪ್ಲೋಡ್ ಮಾಡುತ್ತಾರೆ. 

click me!