ಖಾಕಿ ಧರಿಸಿದ ತಕ್ಷಣವೇ ಜವಾಬ್ದಾರಿಗಳು ನೆನಪಾಗುತ್ತದೆ: ರಣವಿಕ್ರಮ ನಟಿ ಅದಾ ಶರ್ಮಾ

Published : Jul 10, 2022, 12:46 PM IST

ಶ್ರೇಯಾ ತಲ್ಪಾಡೆ ಜೊತೆ ಅಭಿನಯಿಸುತ್ತಿರುವ ಅದಾ ಶರ್ಮಾ. ಬಬ್ಲಿ ಹುಡುಗಿಯಿಂದ ಖಡಕ್ ಆಫೀಸರ್‌ ಲುಕ್ ಇದು...

PREV
17
ಖಾಕಿ ಧರಿಸಿದ ತಕ್ಷಣವೇ ಜವಾಬ್ದಾರಿಗಳು ನೆನಪಾಗುತ್ತದೆ: ರಣವಿಕ್ರಮ ನಟಿ ಅದಾ ಶರ್ಮಾ

ರಣವಿಕ್ರಮ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಅದಾ ಶರ್ಮಾ ಮೊದಲ ಬಾರಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

27

ಸದಾ ಬಬ್ಲಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಅದಾ ಶರ್ಮಾ ಹೆಸರಿಡದ ಚಿತ್ರವೊಂದರಲ್ಲಿ ಖಡಕ್ ಪೊಲೀಸ್ ಅಫೀಸರ್ ಪಾತ್ರಗಳಲ್ಲಿ ಮಿಂಚಲಿದ್ದಾರೆ. 

37

ಈ ಚಿತ್ರದಲ್ಲಿ ಅದಾ ಶರ್ಮಾ ಜೊತೆ ಶ್ರೇಯಾ ತಲ್ಪಾಡ್ ಅಭಿನಯಿಸುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಪೊಲೀಸ್‌ ವಾಹನದಿಂದ ಇಳಿದು ಬರುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. 

47

'ಪೊಲೀಸರ ಖಾಕಿ ಬಟ್ಟೆ ಧರಿಸಿದ ಮೇಲೆ ನಮಗೆ ತಿಳಿಯದಂತೆ ಒಂದು ರೀತಿಯ ಜವಾಬ್ದಾರಿ ಶುರುವಾಗುತ್ತದೆ. ನಾನು ಅದನ್ನು ಈಗ ಅನುಭವಿಸುತ್ತಿರುವೆ' ಎಂದು ಅದಾ ಹೇಳಿದ್ದಾರೆ. 

57

'ಭ್ರಷ್ಟಾಚಾರ ಪೊಲೀಸ್ ಪಾತ್ರಕ್ಕೆ ಸ್ವಲ್ಪ ಹಾಸ್ಯ ಟಚ್ ಕೊಡುವ ಪಾತ್ರ ಇದಾಗಿದ್ದು. ನನಗೆ ಖುಷಿ ಏನೆಂದರೆ ಪೊಲೀಸ್ ಮಾತ್ರವಾಗಲ್ಲ ಬೇರೆ ರೀತಿಯೂ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳ ಬಲ್ಲೆ ಎಂದು ಹೇಳುತ್ತಿರುವೆ'

67

'ಶ್ರೇಯಾ ಮತ್ತು ನನ್ನ ನಡುವೆ ಬೆಕ್ಕು ಇಲಿ ಆಟ ಆಗುತ್ತದೆ. ಕಥೆ ಅದ್ಭುತವಾಗಿದೆ ಸದ್ಯ ಬೂಪಾಲ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ' ಎಂದಿದ್ದಾರೆ. ಈ ಚಿತ್ರಕ್ಕೆ ವಿಶಾಲ್ ಪಾಂಡೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

77

'ನನಗೆ ನಾನೇ ಚಾಲೆಂಜ್ ಮಾಡಿಕೊಳ್ಳುವ ಪಾತ್ರಗಳು ನನಗೆ ಸಿಗುತ್ತಿದೆ. ಮುಂದಿನ ಪ್ರಾಜೆಕ್ಟ್‌ಗೆ ತಯಾರಿ ನಡೆಯುತ್ತಿದೆ. ಬಾಲಿವುಡ್‌ನಲ್ಲಿ ಇದುವರೆಗೂ ಯಾರೂ ಪ್ರಯತ್ನ ಮಾಡಿಲ್ಲ' ಎಂದ ಅದಾ ಹೇಳಿದ್ದಾರೆ.

Read more Photos on
click me!

Recommended Stories