ರಣಬೀರ್ ಕಪೂರ್ ರಹಸ್ಯ ಇನ್‌ಸ್ಟಾಗ್ರಾಮ್‌ ಖಾತೆ ಹೊಂದಿದ್ದಾರೆ ಎಂದು ಖಚಿತಪಡಿಸಿದ ಆಲಿಯಾ!

First Published | Sep 29, 2023, 5:37 PM IST

ಬಾಲಿವುಡ್‌ನ ಹ್ಯಾಂಡ್‌ಸಮ್‌ ನಟ ರಣಬೀರ್ ಕಪೂರ್ (ranbir Kapoor)  ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದೇ ಖಾತೆ ಹೊಂದಿಲ್ಲ ಎಂಬುದು ಅವರ ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿದೆ. ಆದರೆ ಅವರು  'ರಹಸ್ಯ ಖಾತೆ' ಹೊಂದಿದ್ದಾರೆ ಎಂದು ಅವರ ಪತ್ನಿ ಆಲಿಯಾ  ಭಟ್  (Alia Bhatt) ಖಚಿತಪಡಿಸಿದ್ದಾರೆ. ಪೂರ್ತಿ ವಿವರ ಇಲ್ಲಿದೆ

ನಟ ರಣಬೀರ್ ಕಪೂರ್ ನಿನ್ನೆ ಅಂದರೆ ಸೆಪ್ಟೆಂಬರ್‌ 28ರಂದು  ತಮ್ಮ 41 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅವರ ವಿಶೇಷ ದಿನದಂದು, ಪತ್ನಿ ಆಲಿಯಾ  ಅವರಿಗೆ ಶುಭ ಹಾರೈಸಲು ಕೆಲವು ಸೂಪರ್ ಕ್ಯೂಟ್‌ ಫೋಟೋಗಳ ಕ್ಯುರೇಟ್ ಮಾಡಿದ್ದಾರೆ. ಜೊತೆಗೆ ಅಷ್ಟೇ ಅಡರೋಬಲ್‌ ಶೀರ್ಷಿಕೆಯನ್ನು ಸಹ ನೀಡಿದ್ದಾರೆ. 

'ನನ್ನ ಪ್ರೀತಿ ನನ್ನ ಆತ್ಮೀಯ ಸ್ನೇಹಿತ  ನನ್ನ ಸಂತೋಷದ ಸ್ಥಳ  ನನ್ನ ಪಕ್ಕದಲ್ಲಿ ಕುಳಿತು ನಿಮ್ಮ ರಹಸ್ಯ ಖಾತೆಯಿಂದ ನೀವು ಈ ಶೀರ್ಷಿಕೆಯನ್ನು ಓದುತ್ತಿರುವಾಗ  ನಾನು ಹೇಳಲು ಬಯಸುತ್ತೇನೆ  ಜನ್ಮದಿನದ ಶುಭಾಶಯಗಳು ಬೇಬಿ  ನೀವು ಎಲ್ಲವನ್ನೂ ಮಾಂತ್ರಿಕವಾಗಿ ಮಾಡುತ್ತೀರಿ' ಎಂದು ಆಲಿಯಾ ವಿಶ್‌ ಮಾಡಿದ್ದಾರೆ.

Tap to resize

ಆಲಿಯಾ ಭಟ್ ಕಳೆದ ವರ್ಷ ಏಪ್ರಿಲ್‌ನಲ್ಲಿ ತಮ್ಮ ಬ್ರಹ್ಮಾಸ್ತ್ರ ಸಹನಟ ರಣಬೀರ್ ಕಪೂರ್ ಅವರನ್ನು ಅವರ ಮನೆ ವಾಸ್ತುದಲ್ಲಿ ಕೆಲವು ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾದರು. 

ಈ ಸ್ಟಾರ್ ಜೋಡಿ ಮದುವೆಯಾಗುವ ಮೊದಲು 5 ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕಳೆದ ವರ್ಷ ನವೆಂಬರ್ 6 ರಂದು ತಮ್ಮ ಮೊದಲ ಮಗು, ಹೆಣ್ಣು ಮಗಳನ್ನು ಸ್ವಾಗತಿಸಿದರು. 

ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ನೊಂದಿಗೆ ನಟಿ ತನ್ನ ಮಗಳ ಆಗಮನದ ಸುದ್ದಿಯನ್ನು ಪ್ರಕಟಿಸಿದರು. ಆಕೆಗೆ ರಾಹಾ ಎಂದು ಹೆಸರಿಟ್ಟಿದ್ದಾರೆ.

ಆಲಿಯಾ ಭಟ್ ಇತ್ತೀಚೆಗೆ ಗಂಗೂಬಾಯಿ ಕಥಿಯಾವಾಡಿ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರು ಈ ವರ್ಷ ಗಾಲ್ ಗಡೋಟ್ ಅವರ ಹಾರ್ಟ್ ಆಫ್ ಸ್ಟೋನ್‌ನೊಂದಿಗೆ  ಹಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

ರಣಬೀರ್ ಕಪೂರ್ ಕೊನೆಯದಾಗಿ ಶ್ರದ್ಧಾ ಕಪೂರ್ ಜೊತೆ ತು ಜೂಥಿ ಮೈನ್ ಮಕ್ಕರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಮುಂದಿನ ಯೋಜನೆ ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ರಶ್ಮಿಕಾ ಮಂದಣ್ಣ ಅವರೊಂದಿಗೆ ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್. ಈ ವರ್ಷ ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.

Latest Videos

click me!