'ಚಂದ್ರಮುಖಿ 2' ತೆಲುಗು ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಪಿ ವಾಸು ನಿರ್ದೇಶನದ ಮತ್ತು ಕಂಗನಾ ರಣಾವತ್ ಮತ್ತು ರಾಘವ್ ಲಾರೆನ್ಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ನಿನ್ನೆಯಷ್ಟೇ ಬೆಳ್ಳಿತೆರೆಗೆ ಅಪ್ಪಳಿಸಿ ಧೂಳೆಬ್ಬಿಸುತ್ತಿದೆ.
2005ರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ಜ್ಯೋತಿಕಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ತಮಿಳಿನ ಸೂಪರ್ ಹಿಟ್ ಚಂದ್ರಮುಖಿ ಚಿತ್ರದ ಮುಂದುವರಿದ ಭಾಗವಾಗಿದೆ. ಇದು ಕೂಡ ಹಿಂದಿನ ಸಿನಿಮಾದಂತೆ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ.
ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಹೇಳುವುದಾದರೆ ಬಿಡುಗಡೆಯಾದ ಮೊದಲನೇ ದಿನವೇ ಚಿತ್ರವು ಎಲ್ಲಾ ಭಾಷೆಗಳಲ್ಲಿ 7.5 ಕೋಟಿ ಗಳಿಸಿದೆ ಮತ್ತು ಗುರುವಾರ ತಮಿಳಿನಲ್ಲಿ ಶೇ.51.90ರಷ್ಟು ಆದರೆ ತೆಲುಗು ಮತ್ತು ಹಿಂದಿಯಲ್ಲಿ ಕ್ರಮವಾಗಿ ಶೇ. 42.65 ಮತ್ತು 12.77 ಹಿಡಿತ ಸಾಧಿಸಿದೆ. ಚಂದ್ರಮುಖಿ 2 ಬಿಡುಗಡೆ ಆಗುತ್ತಿದ್ದಂತೆ 'ದಿ ವ್ಯಾಕ್ಸಿನ್' ಮತ್ತು 'ಫುಕ್ರೆ 3' ಗಳೊಂದಿಗೆ ಬಾಕ್ಸ್ ಆಫೀಸ್ ಘರ್ಷಣೆ ನಡೆಸಿದೆ. ಅದ್ಯಾಗೂ ಚಂದ್ರಮುಖಿ-2 ಬಾಲಿವುಡ್ ಸಿನಿಮಾಗಳಿಗೆ ಪೈಪೋಟಿ ನೀಡುತ್ತಿದೆ.
ಇತ್ತೀಚೆಗೆ ಚಂದ್ರಮುಖಿ 2 ಬಿಡುಗಡೆಯಾಗುವುದಕ್ಕೆ ಮುನ್ನ ಚಿತ್ರದ ನಾಯಕ ರಾಘವ ಲಾರೆನ್ಸ್ ರಜನಿಕಾಂತ್ ಅವರನ್ನು ಭೇಟಿಯಾಗಿ ಪಾದಗಳನ್ನು ಮುಟ್ಟಿ ಆಶೀರ್ವಾದವನ್ನು ಪಡೆದರು ಮತ್ತು 'ಜೈಲರ್'ನ ಯಶಸ್ಸಿಗಾಗಿ ರಜನಿಕಾಂತ್ ಅವರನ್ನು ಅಭಿನಂದಿಸಿದರು.
'ಚಂದ್ರಮುಖಿ 2' ಹಿಂದಿನ ಸಿನಿಮಾವನ್ನೇ ಬಹಳಷ್ಟು ಹೋಲುತ್ತದೆ ಕುಟುಂಬವೊಂದು ಮಹಲಿಗೆ ಹೋಗುತ್ತದೆ. ಚಂದ್ರಮುಖಿ ನಿವಾಸ ಎಂದು ಕರೆಯಲ್ಪಡುವ ಸೌತ್ ಬ್ಲಾಕ್ ಅನ್ನು ತಪ್ಪಿಸಲು ಹೇಳಲಾಗುತ್ತದೆ. ಕಂಗನಾ ರಣಾವತ್ ರಾಜನ ಆಸ್ಥಾನದಲ್ಲಿ ನರ್ತಕಿಯ ಪಾತ್ರವನ್ನು ನಿರ್ವಹಿಸಿದ್ದಾಳೆ. ಲಾರೆನ್ಸ್ ರಾಜನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಹಾಸ್ಯ ಮತ್ತು ಹಾರರ್ ಪಾತ್ರಗಳಿಗೆ ತನ್ನದೇ ಛಾಪು ಮೂಡಿಸಿದರುವ ಲಾರೆನ್ಸ್ ಈ ಹಿಂದೆ ಕಾಂಚನಾ ಸಿನಿಮಾ ಸರಣಿ ನೋಡಿದವರಿಗೆ ಇದು ಇಷ್ಟವಾಗಬಹುದು. ಉಳಿದಂತೆ ಹಿಂದಿನ ಚಂದ್ರಮುಖಿ ಸಿನಿಮಾದ ಯಶಸ್ಸಿನ ಸೂತ್ರವನ್ನು ಇಲ್ಲೂ ಮುಂದುವರಿಸಿದ್ದಾರೆ.
ಅಂದಹಾಗೆ ಈ ಸಿನಿಮಾ ಸೆಪ್ಟೆಂಬರ್ 15ರಂದೇ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು, ಆದರೆ ತಾಂತ್ರಿಕ ಕಾರಣಗಳಿಂದ ಅದನ್ನು ಸೆಪ್ಟೆಂಬರ್ 28 ಕ್ಕೆ ಮುಂದೂಡಿತು. ಒಟ್ಟಿನಲ್ಲಿ ಭಾರತ ಚಂದ್ರನನ್ನು ವಶಪಡಿಸಿಕೊಂಡ ವರ್ಷವಾಗಿದ್ದು, ಇತ್ತ ಚಂದ್ರನ ಮುಖದ ಹುಡುಗಿ (ಚಂದ್ರಮುಖಿ) ಬೆಳ್ಳಿತೆರೆಗೆ ಪುನರಾಗಮನ ಮಾಡಿದ್ದಾಳೆ.
ಚಂದ್ರಮುಖಿಯಲ್ಲಿ ನನ್ನ ಗುರು ರಜಿನಿ ಸರ್ ಅವರ ಪಾತ್ರದ ನಂತರ ನಾನು ಚಂದ್ರಮುಖಿ 2 ಸಿನಿಮಾದಲ್ಲಿ ಅವರ ಪಾತ್ರದ ಮುಂದುವರಿದ ಭಾಗದಲ್ಲಿ ಅಭಿನಯಿಸಲು ಅದೃಷ್ಟ ಮಾಡಿದ್ದೇನೆ ಎಂದಿದ್ದಾರೆ. ನಾನು ಪಿ ವಾಸು ಸರ್ ಅವರ ಚಲನಚಿತ್ರಗಳಲ್ಲಿ ಗ್ರೂಪ್ ಡ್ಯಾನ್ಸರ್, ಡ್ಯಾನ್ಸ್ ಅಸಿಸ್ಟೆಂಟ್ ಮತ್ತು ಡ್ಯಾನ್ಸ್ ಮಾಸ್ಟರ್ ಆಗಿ ಕೆಲಸ ಮಾಡಿದ್ದೇನೆ. ಈಗ ಅವರ ಸಿನಿಮಾದಲ್ಲಿ ಹೀರೋ ಆಗುವುದೇ ಒಂದು ಸೌಭಾಗ್ಯ ಎಂದಿದ್ದಾರೆ.
ವಡಿವೇಲು ಸರ್ ಅವರು ಮೊದಲು ಮತ್ತು ಎರಡನೇ ಚಿತ್ರಗಳ ನಡುವಿನ ಕೊಂಡಿ. ಎಂಎಂ ಕೀರವಾಣಿ ಇಡೀ ಚಿತ್ರವನ್ನು ನೋಡಿದ ಮೊದಲ ವ್ಯಕ್ತಿ. ಈ ಚಿತ್ರಕ್ಕೆ ಆಸ್ಕರ್ ವಿಜೇತ ಎಂಎಂ ಕೀರವಾಣಿ ಸಂಗೀತ ಸಂಯೋಜಿಸಿರುವುದು ವಿಶೇಷ. ಕಂಗನಾ ನಮ್ಮ ಚಂದ್ರಮುಖಿಯಾಗಿ ಬಂದಾಗ ನನಗೆ ಸಂತೋಷವಾಯಿತು. ನಾನು ಅವರ ಅಭಿಮಾನಿ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತೆಯಾಗಿ, ಅವರ ನಟನೆಯಿಂದ ನಾನು ಕೂಡ ಆಕರ್ಷಿತನಾಗಿದ್ದೇನೆ. ಅವರು ನನ್ನೊಂದಿಗೆ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದು ಚಿತ್ರದ ಮೌಲ್ಯವನ್ನು ದುಪ್ಪಟ್ಟಾಗಿಸಿದೆ ಎಂದ ಲಾರೆನ್ಸ್
ಕಂಗನಾ ರಣಾವತ್ ಹೇಳೋದೇನು?
ತಲೈವಿ ನಂತರ ಇದು ನನ್ನ ಮೂರನೇ ತಮಿಳು ಚಿತ್ರವಾಗಿದ್ದು, ಈ ಚಿತ್ರದ ನಟನೆ ನನಗೆ ಅದ್ಭುತ ಅನುಭವಗಳನ್ನ ನೀಡಿದೆ ಎಂದಿದ್ದಾರೆ. ನಾನು ಮೊದಲ ಚಿತ್ರವನ್ನು ನೋಡಿದ್ದೇನೆ. ಚಂದ್ರಮುಖಿ ಏಕೆ ಅಂತಹ ಪ್ರಸಿದ್ಧ ಬ್ರ್ಯಾಂಡ್ ಎಂದು ನನಗೆ ಅರ್ಥವಾಗಿದೆ. ನೃತ್ಯ, ಹೊಡೆದಾಟ, ಸಂಗೀತ ಮತ್ತು ಸುಂದರವಾದ ಬಟ್ಟೆಗಳನ್ನು ಹೊಂದಿರುವ ಅಂತಹ ವರ್ಣರಂಜಿತ ಚಿತ್ರದ ಭಾಗವಾಗಿ ನಾನು ಎಂದಿಗೂ ಇರಲಿಲ್ಲ! ಇದೀಗ ಲಾರೆನ್ಸ್ ಮಾಸ್ಟರ್ ನನಗೆ ಸೆಟ್‌ಗಳಲ್ಲಿ ಅವಕಾಶ ಕಲ್ಪಿಸುವಲ್ಲಿ ಉದಾರ ಮತ್ತು ದಯೆ ತೋರಿದ್ದಾರೆ ಮತ್ತು ನನ್ನ ದೃಶ್ಯಗಳು ಅವರ ಮತ್ತು ಲಕ್ಷ್ಮಿ (ಮೆನನ್) ಜೊತೆಯಲ್ಲಿವೆ. ನನಗೆ ಇಷ್ಟವಾದ ಪಾತ್ರವಾಗಿದೆ ಎಂದಿದ್ದಾರೆ.