ಐದು ವರ್ಷಗಳಲ್ಲಿ ಸುಮಾರು ಹಿಟ್‌ ಸಿನಿಮಾ ನೀಡಿರುವ ಕಾರ್ತಿಕ್ ಆರ್ಯನ್!

First Published Nov 22, 2022, 4:54 PM IST

ಕಾರ್ತಿಕ್ ಆರ್ಯನ್ (Kartik Aaryan) ಅವರು ಕಡಿಮೆ ಸಮಯದಲ್ಲಿ ಚಲನಚಿತ್ರ ನಿರ್ಮಾಪಕರ ವಿಶ್ವಾಸ ಗಳಿಸಿದ ಯುವನಟ. ಅವರ ಸಿನಿಮಾಗಳು ಬಾಕ್ಸ್ ಆಫೀಸ್ ಯಶಸ್ಸು ಗಳಿಸುತ್ತಿವೆ. ಕಾರ್ತಿಕ್‌ ಆರ್ಯನ್‌ ಅವರ ಹಿಂದಿನ ಸಿನಿಮಾ ಭೂಲ್ ಭುಲೈಯಾ 2 ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ ಹಿಟ್‌ ಆಗಿದೆ. ಚಿತ್ರಗಳನ್ನು ಸೂಪರ್‌ಹಿಟ್ ಮಾಡುವ ವಿಷಯದಲ್ಲಿ ಕಾರ್ತಿಕ್ ಆರ್ಯನ್ ಬಾಲಿವುಡ್‌ನ ಟಾಪ್‌ ಸ್ಟಾರ್‌ಗಳನ್ನು ಹಿಂದೆ ಹಾಕಿದ್ದಾರೆ. ನವೆಂಬರ್ 22 ಕಾರ್ತಿಕ್ ಅವರ ಜನ್ಮದಿನ, ಈ ಸಂದರ್ಭದಲ್ಲಿ  ಅವರ ಸಿನಿಮಾಗಳ ಬಾಕ್ಸ್‌ ಆಫೀಸ್‌ ವರದಿ ಇಲ್ಲಿದೆ.

ಕಾರ್ತಿಕ್ ಆರ್ಯನ್ ಈ ದಿನಳಲ್ಲಿ ಅವರು ತಮ್ಮ ಮುಂಬರುವ ಚಲನಚಿತ್ರ ಫ್ರೆಡ್ಡಿ ಬಿಡುಗಡೆಗಾಗಿ ಕಾಯುತ್ತಿದ್ದಾರೆ, ಇದು ಶೀಘ್ರದಲ್ಲೇ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗಲಿದೆ. ಕಾರ್ತಿಕ್ ಅವರ ಹಲವು ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಬಂಪರ್ ಯಶಸ್ಸನ್ನು ಗಳಿಸಿವೆ.

2022 ರಲ್ಲಿ ಬಿಡುಗಡೆಯಾದ ಕಾರ್ತಿಕ್ ಆರ್ಯನ್ ಅವರ 'ಭೂಲ್ ಭುಲೈಯಾ 2' ಬ್ಲಾಕ್ ಬಸ್ಟರ್ ಆಗಿದೆ ಎಂದು ಬಾಲಿವುಡ್ ಹಂಗಾಮಾ ತನ್ನ ವರದಿಯೊಂದರಲ್ಲಿ ತಿಳಿಸಿದೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 185 ಕೋಟಿ ರೂಪಾಯಿ ಗಳಿಸಿತು. 

ಮತ್ತೊಂದೆಡೆ, ಮಾಧ್ಯಮ ವರದಿಗಳ ಪ್ರಕಾರ, ಅವರು ಹೇರಾ ಫೆರಿ 3 ನಲ್ಲಿಯೂ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ  ಅಕ್ಷಯ್ ಕುಮಾರ್ ಬದಲಿಗೆ ಕಾರ್ತಿಕ್‌ ಆರ್ಯನ್‌ ಆಯ್ಕೆ ಆಗಿದ್ದಾರೆ.

ಇದಕ್ಕೂ ಮೊದಲು 2018 ರಲ್ಲಿ ಬಿಡುಗಡೆಯಾದ ಕಾರ್ತಿಕ್ ಅವರ 'ಸೋನು ಕೆ ಟಿಟು ಕಿ ಸ್ವೀಟಿ' ಸಿನಿಮಾ 108.95 ಕೋಟಿ ಗಳಿಸಿತ್ತು. ಈ ಚಿತ್ರ ಸೂಪರ್ ಹಿಟ್ ಆಗಿದೆ.
 

ಇದರ ನಂತರ, 2019 ರಲ್ಲಿ, ಕಾರ್ತಿಕ್ ಆರ್ಯನ್ ಅವರ ಎರಡು ಚಿತ್ರಗಳು 'ಲುಕಾ ಚುಪ್ಪಿ' ಮತ್ತು 'ಪತಿ ಪಟ್ನಿ ಔರ್ ವೋ' ಥಿಯೇಟರ್‌ನಲ್ಲಿ ಬಿಡುಗಡೆಯಾದವು. ಈ ಎರಡೂ ಚಿತ್ರಗಳು 86.89 ಕೋಟಿ ಮತ್ತು 94 ಕೋಟಿ ಗಳಿಸಿದ್ದವು. ಈ ಚಿತ್ರಗಳು ಸರಾಸರಿ ಪ್ರದರ್ಶನ ನೀಡಿವೆ.
 

ಕೊರೋನಾದಿಂದಾಗಿ, ಕಾರ್ತಿಕ್ ಆರ್ಯನ್‌ಗೆ 2020 ರ ವರ್ಷವು ಅಷ್ಷು ಚೆನ್ನಾಗಿ ನಡೆಯಲಿಲ್ಲ. ಅವರ  ಲವ್ ಆಜ್ ಕಲ್ 2 ಚಿತ್ರವು ಕೇವಲ 34.99 ಕೋಟಿ ರೂಪಾಯಿಗಳನ್ನು ಗಳಿಸಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಖಂಡಿತವಾಗಿಯೂ ಉತ್ಸಾಹವಿತ್ತು, ಆದರೆ ಈ ಚಿತ್ರವು ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ  ಕರೆತರಲು ಸಾಧ್ಯವಾಗಲಿಲ್ಲ.

ಕಾರ್ತಿಕ್ ಆರ್ಯನ್ ಅವರ ಮುಂಬರುವ ಚಿತ್ರ ಫ್ರೆಡ್ಡಿ. ಈ ಸಿನಿಮಾಗಾಗಿ ಕಾರ್ತಿಕ್ ತನ್ನ ತೂಕವನ್ನು 14 ಕೆಜಿ ಹೆಚ್ಚಿಸಬೇಕಾಗಿತ್ತು. 'ಫ್ರೆಡ್ಡಿ' ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದು ಚಿತ್ರದ ಟೀಸರ್ (Teaser) ಮೂಲಕ ಬಹಿರಂಗವಾಗಿದೆ. ಈ ಚಲನಚಿತ್ರವು 9ನೇ ಡಿಸೆಂಬರ್ 2022 ರಿಂದ ಒಟಿಟಿ ಪ್ಲಾಟ್‌ಫಾರ್ಮ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

click me!