ಇತ್ತೀಚೆಗಷ್ಟೇ ತೆರೆಕಂಡ ಅಕ್ಷಯ್ ಕುಮಾರ್ (Akshay Kumar) ಅಭಿನಯದ ಸಾಮ್ರಾಟ್ ಪೃಥ್ವಿರಾಜ್ (Samrat Prithviraj) ಚಿತ್ರ ಬಾಕ್ಸ್ ಆಫೀಸ್ ನಲ್ಲಿ ನೆಲಕಚ್ಚಿದೆ. 300 ಕೋಟಿ ಬಜೆಟ್‌ನಲ್ಲಿ ತಯಾರಾದ ಚಿತ್ರಕ್ಕೆ ಪ್ರೇಕ್ಷಕರಿಂದ ಯಾವುದೇ ಮೆಚ್ಚುಗೆ ಸಿಗದ ಸ್ಥಿತಿ ನಿರ್ಮಾಣವಾಗಿದೆ. ವರದಿಗಳನ್ನು ನಂಬಬೇಕಾದರೆ, ಪ್ರೇಕ್ಷಕರ ಕೊರತೆಯಿಂದಾಗಿ, ಅನೇಕ ಸ್ಥಳಗಳಲ್ಲಿ ಪ್ರದರ್ಶನಗಳನ್ನು ರದ್ದುಗೊಳಿಸಬೇಕಾಯಿತು. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್‌ಅವರು ಮಾನುಷಿ ಛಿಲ್ಲರ್ (Manushi Chhillar) ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಇಬ್ಬರ ವಯಸ್ಸಿನಲ್ಲೂ ಸುಮಾರು 29 ವರ್ಷಗಳ ವ್ಯತ್ಯಾಸವಿದೆ. ಅಕ್ಷಯ್ ಅವರ ಹಿಂದಿನ ದಾಖಲೆಗಳನ್ನು ನೋಡಿದರೆ, ಅವರು ಹೊಸ ಮತ್ತು ಕಿರಿಯ ನಾಯಕಿಯೊಂದಿಗೆ ಪರದೆಯನ್ನು ಹಂಚಿಕೊಂಡಾಗಲೆಲ್ಲಾ ಅವರ ಹೆಚ್ಚಿನ ಚಿತ್ರಗಳು ಫ್ಲಾಪ್ ಎಂದು ಸಾಬೀತಾಗಿದೆ ಎಂದು ವರದಿಗಳು ಹೇಳುತ್ತವೆ.
ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ತಯಾರಾದ ಸಾಮ್ರಾಟ್ ಪೃಥ್ವಿರಾಜ್ ಚಿತ್ರದಿಂದ ಅಕ್ಷಯ್ ಕುಮಾರ್ ಹೆಚ್ಚಿನ ಭರವಸೆಯನ್ನು ಹೊಂದಿದ್ದರು, ಆದರೆ ಅದು ವಿಫಲವಾಗಿದೆ. ಇದೇ ರೀತಿಯ ಹೊಸ ಮತ್ತು ಯುವ ನಟಿಯರ ಜೊತೆ ನಟಿಸಿದ Akshay Kumar ಸಿನಿಮಾಗಳಷ್ಟು ಫ್ಲಾಪ್ ಆದ ಉದಾಹರಣೆ ಇಲ್ಲಿದೆ.
29
ಇದಕ್ಕೂ ಮೊದಲು ಅವರ ಬಚ್ಚನ್ ಪಾಂಡೆ ಸಿನಿಮಾ ಬಂದಿತ್ತು. ಈ ಚಿತ್ರದಲ್ಲಿ ಕೃತಿ ಸನನ್ ಅವರ ಜೊತೆಗಿದ್ದರು. ಈ ಚಿತ್ರವೂ ಫ್ಲಾಪ್ ಎಂದು ಸಾಬೀತಾಯಿತು. ಅಕ್ಷಯ್ ಮತ್ತು ಕೃತಿ ನಡುವೆ ಸುಮಾರು 23 ವರ್ಷಗಳ ವ್ಯತ್ಯಾಸವಿದೆ.
39
ಬೆಲ್ ಬಾಟಮ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರು ವಾಣಿ ಕಪೂರ್ ಅವರೊಂದಿಗೆ ನಟಿಸಿದ್ದಾರೆ. ವಾಣಿ ಕಪೂರ್ ಅಕ್ಷಯ್ ಅವರಿಗಿಂತ 21 ವರ್ಷ ಚಿಕ್ಕವರಾಗಿದ್ದರು. ಈ ಚಿತ್ರವೂ ಜನರಿಗೆ ಅಷ್ಟಾಗಿ ಇಷ್ಟವಾಗಲಿಲ್ಲ.
49
ಬ್ರದರ್ಸ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ತನಗಿಂತ 16 ವರ್ಷ ಕಿರಿಯ ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ಕೆಲಸ ಮಾಡಿದ್ದಾರೆ. ಈ ಚಿತ್ರ ಯಾವಾಗ ಬಂತು, ಯಾವಾಗ ಹೋಯಿತು ಎಂಬುದು ಜನರಿಗೆ ಗೊತ್ತಿಲ್ಲ. ಅಷ್ಟೇ ಅಲ್ಲ, ಇತ್ತೀಚೆಗಷ್ಟೇ ಬಚ್ಚನ್ ಪಾಂಡೆ ಸಿನಿಮಾದಲ್ಲೂ ಜಾಕ್ವೆಲಿನ್ ಜೊತೆಗಿದ್ದರು.
59
ಗೋಲ್ಡ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಮೌನಿ ರಾಯ್ ಮುಖ್ಯ ಭೂಮಿಕೆಯಲ್ಲಿದ್ದರು. ಈ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಗಿದೆ. ಅಕ್ಷಯ ಮತ್ತು ಮೌನಿಯ ವಯಸ್ಸಿನಲ್ಲಿ 18 ವರ್ಷ ವ್ಯತ್ಯಾಸವಿದೆ.
69
ಸಿಂಗ್ ಈಸ್ ಬ್ಲಿಂಗ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಆಮಿ ಜಾಕ್ಸನ್ ಮುಖ್ಯ ಭೂಮಿಕೆಯಲ್ಲಿದ್ದರು. ಈ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ನೆಲಕಚ್ಚಿತು. ಅಕ್ಷಯ್ ಮತ್ತು ಆಮಿಯ ವಯಸ್ಸಿನಲ್ಲಿ ಸುಮಾರು 24 ವರ್ಷ ವ್ಯತ್ಯಾಸವಿದೆ.
79
ಅಕ್ಷಯ್ ಕುಮಾರ್ ಅವರು ಅತ್ರಾಂಗಿ ರೇ ಚಿತ್ರದಲ್ಲಿ ಸಾರಾ ಅಲಿ ಖಾನ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ಒಟಿಟಿಯಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಹೆಚ್ಚಿನ ಪ್ರತಿಕ್ರಿಯೆ ಸಿಗಲಿಲ್ಲ. ಅಕ್ಷಯ್-ಸಾರಾ ವಯಸ್ಸಿನಲ್ಲಿ ಸುಮಾರು 28 ವರ್ಷಗಳ ವ್ಯತ್ಯಾಸವಿದೆ.
89
ಅಕ್ಷಯ್ ಕುಮಾರ್ ಅಭಿನಯದ ಲಕ್ಷ್ಮಿ ಚಿತ್ರ ಕರೋನಾ ಲಾಕ್‌ಡೌನ್ ಸಮಯದಲ್ಲಿ ಬಂದಿತು. ಈ ಚಿತ್ರದಲ್ಲಿ ಅವರು ತನಗಿಂತ 25 ವರ್ಷ ಕಿರಿಯ ಕಿಯಾರಾ ಅಡ್ವಾಣಿ ಜೊತೆ ಕಾಣಿಸಿಕೊಂಡಿದ್ದರು. ಇದು ಕಿಯಾರಾ ಜೊತೆಗಿನ ಅಕ್ಷಯ್ ಅವರ ಮೊದಲ ಚಿತ್ರವಾಗಿದ್ದು, ಇದು ಫ್ಲಾಪ್ ಎಂದು ಸಾಬೀತಾಯಿತು.
99
ಅಕ್ಷಯ್ ಕುಮಾರ್ ತಮನ್ನಾ ಜೊತೆ ಎಂಟರ್‌ಟೈನ್‌ಮೆಂಟ್ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಇದು ತಮನ್ನಾ ಜೊತೆಗಿನ ಅಕ್ಷಯ್ ಅವರ ಮೊದಲ ಚಿತ್ರವಾಗಿದ್ದು, ಇದು ಸೂಪರ್ ಫ್ಲಾಪ್ ಎಂದು ಸಾಬೀತಾಯಿತು. ಇವರಿಬ್ಬರ ನಡುವೆ ಸುಮಾರು 22 ವರ್ಷಗಳ ವ್ಯತ್ಯಾಸವಿದೆ.