ವದಂತಿಗಳ ಪ್ರಕಾರ, ನಯನತಾರಾ ವಿಘ್ನೇಶ್‌ಗಾಗಿ 20 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಖರೀದಿಸಿದ್ದಾರೆ. ಈ ಮನೆಯ ರಿಜಿಸ್ಟ್ರಿಷನ್ ಮುಗಿದಿವೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಈ ಮನೆ ವಿಘ್ನೇಶ್ ಹೆಸರಿನಲ್ಲಿ ನೋಂದಣಿಯಾಗಿದೆ.
ವಿಘ್ನೇಶ್ ಸಹೋದರಿ ಐಶ್ವರ್ಯಾ ಅವರಿಗೂ ನಯನತಾರಾ 30 ತರದ ಚಿನ್ನಾಭರಣ ನೀಡಿದ್ದಾರೆ. ಅಷ್ಟೇ ಅಲ್ಲ ನಟಿ ತನ್ನ ನಿಕಟ ಕುಟುಂಬಕ್ಕೆ ಸಹ ಹಲವಾರು ಉಡುಗೊರೆಗಳನ್ನು ನೀಡಿದ್ದಾರೆ.
ವಿಘ್ನೇಶ್ ಕೂಡ ಈ ದಿನವನ್ನು ನಯನತಾರಾಗೆ ಸ್ಮರಣೀಯ ದಿನವನ್ನಾಗಿ ಮಾಡಲು ಶ್ರಮಿಸಿದರು. ಅಂದಾಜಿನ ಪ್ರಕಾರ, ಮದುವೆ ಸಮಾರಂಭದಲ್ಲಿ ನಯನತಾರಾ ಧರಿಸಿದ್ದ ಎಲ್ಲಾ ಚಿನ್ನದ ಆಭರಣಗಳಿಗಾಗಿ ವಿಘ್ನೇಶ್ 2.5 ರಿಂದ 3 ಕೋಟಿ ರೂ ಖರ್ಚು ಮಾಡಿದ್ದಾರೆ. ಜೊತೆಗೆ ನಯನತಾರಾಗೆ ವಿಘ್ನೇಶ್ 5 ಕೋಟಿ ರೂ.ಗಳ ವಜ್ರದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದಾರೆ.
ನಯನತಾರಾ ಮತ್ತು ವಿಘ್ನೇಶ್ ಅವರ ವಿವಾಹವು ಗ್ರ್ಯಾಂಡ್ ಸಮಾರಂಭವಾಗಿದ್ದು, ರಾಜಕೀಯ ಮತ್ತು ಮನರಂಜನಾ ಪ್ರಪಂಚದ ಅನೇಕ ಪ್ರಮುಖ ವ್ಯಕ್ತಿಗಳು ಹಾಜರಿದ್ದರು. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಆಹ್ವಾನಿಸಲಾಗಿತ್ತು.
ಮುಖ್ಯಮಂತ್ರಿ ಜೊತೆಗೆ ರಜನಿಕಾಂತ್, ಕಮಲ್ ಹಾಸನ್, ಚಿರಂಜೀವಿ, ಸೂರ್ಯ, ಅಜಿತ್ ಮತ್ತು ಕಾರ್ತಿ ಆಹ್ವಾನಿತರಿದ್ದರು. ಸಮಂತಾ ರುತ್ ಪ್ರಭು ಮತ್ತು ವಿಜಯ್ ಸೇತುಪತಿ ಸಹ ಅತಿಥಿಗಳ ಪಟ್ಟಿಯ್ಲಲಿದ್ದರು.
ವರದಿಗಳ ಪ್ರಕಾರ, ದಂಪತಿಗಳು ರೆಸಾರ್ಟ್‌ನಲ್ಲಿ 129 ಕೊಠಡಿಗಳನ್ನು ಕಾಯ್ದಿರಿಸಿದ್ದರು. ಈ ವಾರಾಂತ್ಯದಲ್ಲಿ ಮಹಾಬಲಿಪುರಂ ರೆಸಾರ್ಟ್ ಸಂಪೂರ್ಣವಾಗಿ ಬುಕ್ ಆಗಲಿದೆ ಎನ್ನಲಾಗಿದೆ. ಸಮಾರಂಭದ ನಂತರ ಆರತಕ್ಷತೆ ನಡೆಯಲಿದೆ.
ಮೊದಲು ಈ ಕಪಲ್ ಮದುವೆಗಾಗಿ ತಿರುಪತಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ವ್ಯವಸ್ಥೆಯ ಕಾಳಜಿಯಿಂದಾಗಿ, ಮದುವೆಯ ಸ್ಥಳವನ್ನು ಬದಲಾಯಿಸಲಾಯಿತು. ಮದುವೆಯಾಗುವ ಮುನ್ನ ನಯನತಾರಾ ಮತ್ತು ವಿಘ್ನೇಶ್ ಆರು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು.
nayanthara -vignesh shivan wedding
ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಸೇರಿದಂತೆ ಎಲ್ಲರಿಗೂ ಕರೆಯುವ ಉದ್ದೇಶ ಹೊಂದಿದ್ದರು. ಆದರೆ ಎಲ್ಲರಿಗೂ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಘ್ನೇಶ್ ಹೇಳಿದರು. ಮದುವೆ ಸಮಾರಂಭದ ನಂತರ ಅಭಿಮಾನಿಗಳಿಗೆ ಮದುವೆಯ ಫೋಟೋಗಳನ್ನು ನೀಡಲಾಗುವುದು ಎಂದು ವಿಘ್ನೇಶ್ ಹೇಳಿದ್ದರು.