ಶಾರುಖ್ ಜೊತೆ 'ಡರ್' ಚಿತ್ರಕ್ಕೆ ಐಶ್ವರ್ಯಾ ರೈ ಆಯ್ಕೆ ಆಗಿದ್ರು; ಆಮೇಲೆ ಜೂಹಿ ಚಾವ್ಲಾ ಬಂದಿರೋ ಸೀಕ್ರೆಟ್ ಸ್ಟೋರಿ ಇದು!

Published : May 23, 2026, 08:34 PM IST

'ಡರ್' ಸಿನಿಮಾ ಬಾಲಿವುಡ್‌ನ ಸಾರ್ವಕಾಲಿಕ ಶ್ರೇಷ್ಠ ಥ್ರಿಲ್ಲರ್ ಸಿನಿಮಾಗಳಲ್ಲಿ ಒಂದಾಗಿ ಹೊರಹೊಮ್ಮಿತು. ಶಾರುಖ್ ಖಾನ್ ಅವರ ನೆಗೆಟಿವ್ ಶೇಡ್ ನಟನೆ ಮತ್ತು ಜೂಹಿ ಚಾವ್ಲಾ ಅವರ 'ಕಿರಣ್' ಪಾತ್ರ ಇಂದಿಗೂ ಫೇಮಸ್. ಆದ್ರೆ ಐಶ್ವರ್ಯಾ ರೈ ಮಿಸ್ ಆದ್ರು!

PREV
16

ಐಶ್ವರ್ಯಾ ರೈ 'ಡರ್' ಚಿತ್ರದ ನಾಯಕಿಯಾಗಬೇಕಿತ್ತಾ? ಶಾರುಖ್ ಪಕ್ಕ ಮಿಂಚಬೇಕಿದ್ದ ವಿಶ್ವ ಸುಂದರಿ ಮಿಸ್ ಆದ ಆ ಒಂದು 'ಬಿಗ್' ರೀಸನ್ ಇಲ್ಲಿದೆ!

ಬಾಲಿವುಡ್‌ನ ಎವರ್‌ಗ್ರೀನ್ ಬ್ಯೂಟಿ, ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರ ಕಣ್ಣಿನ ನೋಟಕ್ಕೆ ಮರುಳಾಗದವರೇ ಇಲ್ಲ. ಆದರೆ, ಐಶ್ವರ್ಯಾ ಅವರ ಸಿನಿ ಜರ್ನಿ ಆರಂಭವಾಗುವ ಮೊದಲೇ ಒಂದು ದೊಡ್ಡ ಸಿನಿಮಾ ಅವರ ಕೈತಪ್ಪಿತ್ತು ಎಂಬ ಅಚ್ಚರಿಯ ವಿಷಯ ಈಗ ಹೊರಬಂದಿದೆ. ಹೌದು, 1993ರಲ್ಲಿ ತೆರೆಕಂಡು ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ್ದ ಯಶ್ ಚೋಪ್ರಾ ನಿರ್ದೇಶನದ 'ಡರ್' (Darr) ಸಿನಿಮಾಗೆ ಮೊದಲು ಐಶ್ವರ್ಯಾ ಅವರನ್ನೇ ಆಯ್ಕೆ ಮಾಡಲಾಗಿತ್ತಂತೆ!

26

ಅಸಲಿ ಗುಟ್ಟು ರಟ್ಟು ಮಾಡಿದ ನೀತಾ ಲುಲ್ಲಾ:

ಬಿಟೌನ್‌ನ ಖ್ಯಾತ ಕಾಸ್ಟ್ಯೂಮ್ ಡಿಸೈನರ್ ನೀತಾ ಲುಲ್ಲಾ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ಕುತೂಹಲಕಾರಿ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಯಶ್ ಚೋಪ್ರಾ ಅವರ ಕಚೇರಿಯಲ್ಲಿ ಐಶ್ವರ್ಯಾ ಅವರ ಮೊದಲ ಲುಕ್ ಟೆಸ್ಟ್ ನಡೆದಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ. ಆಗಿನ್ನೂ ಐಶ್ವರ್ಯಾ ರೈ ಅವರಿಗೆ ಮಿಸ್ ವರ್ಲ್ಡ್ ಪಟ್ಟ ಸಿಕ್ಕಿರಲಿಲ್ಲ. ಕೇವಲ ಮಾಡೆಲಿಂಗ್ ಲೋಕದಲ್ಲಿ ಗುರುತಿಸಿಕೊಂಡಿದ್ದ ಕಾಲವದು.

36

ಯಶ್ ಚೋಪ್ರಾ ಫಿದಾ ಆಗಿದ್ದರೂ ನೋ ಎಂದಿದ್ದೇಕೆ?:

ನೀತಾ ಲುಲ್ಲಾ ಹೇಳುವ ಪ್ರಕಾರ, "ನಾನು ಐಶ್ವರ್ಯಾರನ್ನು ಮೊದಲು ಭೇಟಿ ಮಾಡಿದ್ದು ಯಶ್ ಚೋಪ್ರಾ ಅವರ ಆಫೀಸಿನಲ್ಲಿ. ಯಶ್ ಜಿ ಅವರಿಗೆ ಐಶ್ವರ್ಯಾರನ್ನು 'ಡರ್' ಸಿನಿಮಾದ ನಾಯಕಿಯಾಗಿ ಮಾಡಬೇಕೆಂಬ ಆಸೆಯಿತ್ತು. ನಾವಿಬ್ಬರೂ ಸೇರಿ ಅವರಿಗೆ ಲುಕ್ ಟೆಸ್ಟ್ ಮಾಡಿದೆವು. ಐಶ್ವರ್ಯಾರ ಸೌಂದರ್ಯ ನೋಡಿ ಯಶ್ ಚೋಪ್ರಾ ಬೆರಗಾಗಿದ್ದರು. 'ಈಕೆ ನಿಜಕ್ಕೂ ಅದ್ಭುತ ಸುಂದರಿ' ಎಂದು ಹೊಗಳಿದ್ದರು. ಆದರೆ, ಎಲ್ಲವೂ ಓಕೆ ಆದ ಮೇಲೆ ಯಶ್ ಜಿ ಒಂದು ಮಾತು ಹೇಳಿದರು, 'ಇದು ಸದ್ಯಕ್ಕೆ ವರ್ಕ್ ಆಗುವುದು ಕಷ್ಟ ಅನ್ನಿಸುತ್ತಿದೆ'. ಅದಕ್ಕೆ ಕಾರಣ ಐಶ್ವರ್ಯಾ ಆಗ 'ಮಿಸ್ ವರ್ಲ್ಡ್' ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದರು."

46

ಒಂದು ವೇಳೆ ಐಶ್ವರ್ಯಾ 'ಡರ್' ಸಿನಿಮಾಗೆ ಸಹಿ ಹಾಕಿದ್ದರೆ, ಅವರ ಮಿಸ್ ವರ್ಲ್ಡ್ ಪಯಣಕ್ಕೆ ಅಡ್ಡಿಯಾಗುವ ಸಾಧ್ಯತೆ ಇತ್ತು. ಹಾಗಾಗಿಯೇ ಯಶ್ ಚೋಪ್ರಾ ಅವರು ಆಕೆಯನ್ನು ಸಿನಿಮಾದಿಂದ ಕೈಬಿಟ್ಟು, ವಿಶ್ವ ಸುಂದರಿ ಸ್ಪರ್ಧೆಗೆ ಹೋಗಲು ಪ್ರೋತ್ಸಾಹಿಸಿದರು. ಆನಂತರ ಆ ಪಾತ್ರ ಜೂಹಿ ಚಾವ್ಲಾ ಅವರ ಪಾಲಾಯಿತು.

56

ಇತಿಹಾಸ ಸೃಷ್ಟಿಸಿದ ಸಿನಿಮಾ:

'ಡರ್' ಸಿನಿಮಾ ಬಾಲಿವುಡ್‌ನ ಸಾರ್ವಕಾಲಿಕ ಶ್ರೇಷ್ಠ ಥ್ರಿಲ್ಲರ್ ಸಿನಿಮಾಗಳಲ್ಲಿ ಒಂದಾಗಿ ಹೊರಹೊಮ್ಮಿತು. ಶಾರುಖ್ ಖಾನ್ ಅವರ ನೆಗೆಟಿವ್ ಶೇಡ್ ನಟನೆ ಮತ್ತು ಜೂಹಿ ಚಾವ್ಲಾ ಅವರ 'ಕಿರಣ್' ಪಾತ್ರ ಇಂದಿಗೂ ಫೇಮಸ್. ಇತ್ತ ಐಶ್ವರ್ಯಾ ರೈ 1994 ರಲ್ಲಿ ವಿಶ್ವ ಸುಂದರಿ ಕಿರೀಟ ತೊಟ್ಟು ಇತಿಹಾಸ ಸೃಷ್ಟಿಸಿದರು. ಆಮೇಲೆ ಮಣಿರತ್ನಂ ಅವರ 'ಇರುವರ್' ಚಿತ್ರದ ಮೂಲಕ ಬೆಳ್ಳಿಪರದೆಗೆ ಪದಾರ್ಪಣೆ ಮಾಡಿದರು.

66

ಕುತೂಹಲದ ಸಂಗತಿಯೆಂದರೆ, ಮುಂದೆ ನೀತಾ ಲುಲ್ಲಾ ಅವರೇ ಐಶ್ವರ್ಯಾ ಅವರ ಹಿಟ್ ಸಿನಿಮಾ 'ಜೀನ್ಸ್'ಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದರು. ಅಲ್ಲಿಂದ ಐಶ್ವರ್ಯಾ ಮತ್ತು ನೀತಾ ಅವರ ಸ್ನೇಹ ಇಂದಿಗೂ ಮುಂದುವರಿದಿದೆ. ಇಂದು ಐಶ್ವರ್ಯಾ ರೈ ಜಾಗತಿಕ ಮಟ್ಟದಲ್ಲಿ ದೊಡ್ಡ ತಾರೆಯಾಗಿ ಬೆಳೆದಿರಬಹುದು, ಆದರೆ 'ಡರ್' ಸಿನಿಮಾದಲ್ಲಿ ಶಾರುಖ್ ಖಾನ್ ಪಕ್ಕ ಐಶ್ವರ್ಯಾ ನಟಿಸಿದ್ದರೆ ಆ ಸಿನಿಮಾ ಹೇಗಿರುತ್ತಿತ್ತು ಎಂಬ ಕುತೂಹಲ ಮಾತ್ರ ಸಿನಿಗೂಡಿನಲ್ಲಿ ಹಾಗೆಯೇ ಉಳಿದಿದೆ!

ಒಟ್ಟಿನಲ್ಲಿ, ಪ್ರತಿಭೆ ಮತ್ತು ಸೌಂದರ್ಯದ ಗಣಿ ಐಶ್ವರ್ಯಾ ಅವರಿಗೆ ಸಿಗಬೇಕಿದ್ದ ಮೊದಲ ಬ್ರೇಕ್ ಮಿಸ್ ಆಗಿದ್ದರೂ, ಅದು ಅವರ ಜೀವನದ ದೊಡ್ಡ ಯಶಸ್ಸಿಗೆ ಮೆಟ್ಟಿಲಾಯಿತು ಎನ್ನುವುದು ಮಾತ್ರ ಸುಳ್ಳಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories