ಮಗಳು ನನ್ನ ಕೆಲಸ ಅರ್ಥ ಮಾಡಿಕೊಂಡು ಗೌರವಿಸುತ್ತಿರುವುದೇ ಹೆಚ್ಚು: ಐಶ್ವರ್ಯ ರೈ

Published : Jun 13, 2023, 04:18 PM IST

ನಿರ್ದೇಶಕರು ಕಲಾವಿದರನ್ನು ಹುಡುಕುತ್ತಾರೆ, ಕಲಾವಿದರು ಕ್ರಿಯೇಟಿವ್ ನಿರ್ದೇಶಕರನ್ನು ಹುಡುಕುತ್ತಾರೆ. ಆರಾಧ್ಯ ನನ್ನ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ.  

PREV
17
ಮಗಳು ನನ್ನ ಕೆಲಸ ಅರ್ಥ ಮಾಡಿಕೊಂಡು ಗೌರವಿಸುತ್ತಿರುವುದೇ ಹೆಚ್ಚು: ಐಶ್ವರ್ಯ ರೈ

ವಿಶ್ವ ಸುಂದರಿ ಬಾಲಿವುಡ್ ಬ್ಯೂಡಿ ಐಶ್ವರ್ಯ ರೈ ಮೊದಲ ಸಲ ಮಗಳು ಆರಾಧ್ಯ ಬಗ್ಗೆ ಮಾತನಾಡಿದ್ದಾರೆ. ತಮ್ಮ ಕೆಲಸವನ್ನು ಮಗಳು ಮೆಚ್ಚಿಕೊಂಡಿದ್ದಾಳೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.

27

 'ಕೆಲವರು ನಟ-ನಟಿಯರಾಗಬೇಕು ಎಂದು ಕೆಲವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವರಿಗೆ ಒಳ್ಳೆಯ ಪಾತ್ರ ಸಿಕ್ಕಿ ಕ್ರೆಡಿಟ್ ಸಿಗುತ್ತದೆ ಇನ್ನು ಕೆಲವರಿಗೆ ಎಷ್ಟೇ ಶ್ರಮ ಹಾಕಿದ್ದರೂ ಕ್ರೆಡಿಟ್ ಸಿಗುವುದಿಲ್ಲ'

37

 'ಡೈರೆಕ್ಟರ್‌ಗಳು ಕಲಾವಿದರನ್ನು ಹುಡುಕುವುದು ಹೇಗೆ ಅಂದ್ರೆ ತಮ್ಮ ಜೀವನನ್ನೇ ನಟನೆಗೆ ಮುಡಿಪಾಗಿ ಇಟ್ಟವರಿಗೆ ಅವಕಾಶ ಕೊಡುತ್ತಾರೆ' ಎಂದು ಫಿಲ್ಮ ಕಂಪ್ಯಾನಿಯನ್ ಸಂದರ್ಶನದಲ್ಲಿ ಹೇಳಿದ್ದಾರೆ.

47

 ಆದರೆ ನಮ್ಮಲ್ಲಿ ಅದೆಷ್ಟೋ ಮಂದಿ ಕ್ರಿಯೇಟಿವ್ ಆಗಿರುವ ನಿರ್ದೇಶಕರನ್ನು ಹುಡುಕುತ್ತಿದ್ದಾರೆ ಎಲ್ಲದಕ್ಕಿಂತ ಮುಖ್ಯವಾಗಿ ಬಂಡವಾಳ ಹಾಕುವವರು ಮುಖ್ಯವಾಗುತ್ತಾರೆ. ದೇಶದಲ್ಲಿ ಸಿನಿಮಾದಿಂದ ಆರ್ಥಿಕತೆ ಹೆಚ್ಚಿರುವುದನ್ನು ನೋಡಿದ್ದೀವಿ. 

 

57

ನನ್ನ ಮಗಳು ಆರಾಧ್ಯ ಸಿನಿಮಾ ಕೆಲವಗಳಿಗೆ ನನ್ನ ಜೊತೆ ಪ್ರಯಾಣ ಮಾಡುತ್ತಾಳೆ ಆದರೆ ಇದರಿಂದ ಅಥವಾ ನನ್ನಿಂದ ಏನು ಕಲಿಯುತ್ತಾಳೆ ಎಂದು ನನಗೆ ಗೊತ್ತಿಲ್ಲ.
 

67

ನಾವು ಕಲಾವಿದರು ಜನರಿಗಾಗಿ ಜನರಿಗೋಸ್ಕರ ಕೆಲಸ ಮಾಡುವವರು ನನ್ನ ಮಗಳು ಹಾಗಲ್ಲ ಆದರೂ ಆಕೆ ಪ್ರತಿಯೊಂದನ್ನು ಎಂಜಾಯ್ ಮಾಡುತ್ತಾಳೆ. ಜನರನ್ನು ಇಷ್ಟ ಪಡುತ್ತಾಳೆ..ಅಲ್ಲಿನ ವೈಬ್ಸ್‌ ಇಷ್ಟ ಪಡುತ್ತಾಳೆ..
 

77

ನನ್ನ ಮಗಳಿಗೆ Cannes ಅಂದ್ರೆ ಏನು ಹೇಗಿರುತ್ತೆ ನಿನಗೆ ಇಷ್ಟ ಆಗುತ್ತಾ ಅಂತ ನಾನು ಕೇಳಿಲ್ಲ ಆದರೆ ಖಂಡಿತಾ ಆಕೆ ಎಂಜಾಯ್ ಮಾಡುತ್ತಾರೆ. ಅವಾರ್ಡ್ ಕಾರ್ಯಕ್ರಮಗಳು ಚೆಂದ. ನಮ್ಮ ಕೆಲಸಗಳ ಬಗ್ಗೆ ನಮ್ಮ ಮಕ್ಕಳು ಅರ್ಥ ಮಾಡಿಕೊಳ್ಳುತ್ತಾರೆ ಅದನ್ನು ಗೌರವಿಸುತ್ತಾರೆ ಅದೇ ನಮಗೆ  ಖುಷಿ. 

Read more Photos on
click me!

Recommended Stories