ಹೃತಿಕ್ ರೋಷನ್, ಗರ್ಲ್‌ಫ್ರೆಂಡ್‌ ಸಾಬಾ ಆಜಾದ್ ಅವರ ಕೆಮಿಸ್ಟ್ರಿಗೆ ಫ್ಯಾನ್ಸ್‌ ಫುಲ್‌ ಫಿದಾ!

Published : Jun 12, 2023, 05:32 PM IST

ಖ್ಯಾತ ಬಾಲಿವುಡ್ ಚಲನಚಿತ್ರ ನಿರ್ಮಾಪಕ ಮಧು ಮಂಟೇನಾ, ಇರಾ ತ್ರಿವೇದಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ ಮಧು ಮಂಟೇನಾ ಅವರ ಮದುವೆಯ ಆರತಕ್ಷತೆಯಲ್ಲಿ ಪಾಲ್ಗೊಂಡ ಹೃತಿಕ್ ರೋಷನ್ (Hrithik Roshan ) ಮತ್ತು ಅವರ ಗರ್ಲ್‌ಫ್ರೆಂಡ್‌  ಸಾಬಾ ಆಜಾದ್ (Saba Azad) ಅವರ ವೀಡಿಯೊಗಳು ಮತ್ತು ಫೋಟೋಗಳು ಸಖತ್‌ ವೈರಲ್‌ ಆಗಿದೆ. 

PREV
18
ಹೃತಿಕ್ ರೋಷನ್, ಗರ್ಲ್‌ಫ್ರೆಂಡ್‌ ಸಾಬಾ ಆಜಾದ್ ಅವರ ಕೆಮಿಸ್ಟ್ರಿಗೆ ಫ್ಯಾನ್ಸ್‌ ಫುಲ್‌ ಫಿದಾ!

ಹೃತಿಕ್ ರೋಷನ್ ಮತ್ತು ಅವರ ಗರ್ಲ್‌ಫ್ರೆಂಡ್‌  ಸಾಬಾ ಆಜಾದ್  ಭಾನುವಾರ ನಡೆದ ಮಧು ಮತ್ತು ಇರಾ ಅವರು  ಮದುವೆಯ  ಪಾರ್ಟಿಗೆ ಒಟ್ಟಿಗೆ ಆಗಮಿಸಿದರು.

28

ಈ ಸಮಯದ ಹೃತಿಕ್‌ ಮತ್ತು ಸಬಾ ಅವರ ವೀಡಿಯೋ ಹಾಗೂ ಫೋಟೋಗಳು ವೈರಲ್‌ ಆಗಿವೆ. ತಮ್ಮ ಕ್ಯೂಟ್‌ ಕೆಮಿಸ್ಟ್ರಿಯ ಮೂಲಕ  ಈ ಜೋಡಿ ಆನ್‌ಲೈನ್‌ನಲ್ಲಿ ಫ್ಯಾನ್ಸ್ ಹೃದಯ ಗೆದ್ದರು.


 

38

ಹೃತಿಕ್ ಅವರು ಆಯ್ಕೆ ಮಾಡಿದ ಬಿಳಿ ಶರ್ಟ್‌ನೊಂದಿಗೆ ಕಪ್ಪು ಸೂಟ್‌ನಲ್ಲಿ ಹ್ಯಾಂಡಸಮ್‌ ಆಗಿ ಕಾಣುತ್ತಿದ್ದರು. ಗೋಲ್ಡನ್ ವರ್ಕ್‌ನೊಂದಿಗೆ ಬ್ಲಶ್ ಪೀಚ್ ಸಿಲ್ಕ್ ಸೂಟ್‌ನಲ್ಲಿ ಸಬಾ ತುಂಬಾ ಸುಂದರವಾಗಿ ಕಾಣುತ್ತಿದ್ದಳು

48

 ದೊಡ್ಡ ಕಿವಿಯೋಲೆಗಳು ಮತ್ತು ಮಾಂಗ್ ಟಿಕಾವನ್ನು ಧರಿಸಿದ್ದರು.ಹೈ ಹೀಲ್ಡ್‌  ಸ್ಯಾಂಡಲ್‌ ಧರಿಸಿದ್ದ ಸಭಾ  ತನ್ನ ಕೂದಲನ್ನು  ಉದ್ದ ಜಡೆಯಾಗಿ  ಹೆಣೆದಿದ್ದರು.

58

ಕಾರ್ಯಕ್ರಮದ ಹೊರಗೆ ಜಮಾಯಿಸಿದ ಪಾಪರಾಜಿಗಳಿಗೆ ಈ ಜೋಡಿ ನಗುತ್ತಾ ಪೋಸ್ ನೀಡಿದರು. ಹೃತಿಕ್ ಮತ್ತು ಸಬಾ ಅವರ  ಈ ಲುಕ್‌ಗೆ ಅಭಿಮಾನಿಗಳು ಫುಲ್‌ ಫಿಧಾ ಆಗಿದ್ದಾರೆ.

68

ಹೃತಿಕ್‌ ಮತ್ತು ಸಬಾ ಅವರ ಜೋಡಿಯನ್ನು ಮೆಚ್ಚಿ ಸೋಶಿಯಲ್‌ ಮೀಡಿಯಾದಲ್ಲಿ  ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ. ಅಷ್ಟೇ ಅಲ್ಲ ಸಬಾ ಅವರ ಲುಕ್‌ ಅನ್ನು ಸಹ ಹೊಗಳಿದ್ದಾರೆ.

78

ನಿರ್ಮಾಪಕ ಮಧು ಮಂಟೇನಾ ಭಾನುವಾರ ಮುಂಬೈನಲ್ಲಿ ಲೇಖಕಿ ಮತ್ತು ಯೋಗ ಶಿಕ್ಷಕಿ ಇರಾ ತ್ರಿವೇದಿ ಅವರನ್ನು ವಿವಾಹವಾದರು. ಇರಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ವಿಶೇಷ ದಿನದ ಸುಂದರವಾದ  ಫೋಟೋಗಳನ್ನು ಹಂಚಿಕೊಂಡಿದ್ದಾರೆ.

88

ಮದುವೆಯಾದ ಕೆಲವೇ ಗಂಟೆಗಳ ನಂತರ, ಮಧು ಮತ್ತು ಇರಾ ತಮ್ಮ ಸ್ನೇಹಿತರು ಮತ್ತು ಚಿತ್ರರಂಗದ ಸದಸ್ಯರಿಗೆ ಮದುವೆಯ ಆರತಕ್ಷತೆಯನ್ನು ಆಯೋಜಿಸಿದರು. 

Read more Photos on
click me!

Recommended Stories