ಚಿರು ಕುಟಂಬದ ಸೊಸೆಯಾಗ್ತಿರುವ ಲಾವಣ್ಯಾ ಜಾತಿಗಾಗಿ ಹುಡುಕಾಟ: ಇಂಟರ್‌ನೆಟ್‌ನಲ್ಲಿ ಹೆಚ್ಚಿದ ಸರ್ಚಿಂಗ್

First Published Jun 13, 2023, 1:02 PM IST

ಮೆಗಾ ಸ್ಟಾರ್ ಚಿರಂಜೀವಿ ಕುಟುಂಬಕ್ಕೆ ಸೊಸೆಯಾಗಿ ಬರ್ತಿರುವ ಲಾವಣ್ಯ ತ್ರಿಪಾಠಿ ಜಾತಿ ಯಾವುದು ಎನ್ನುವ ಕುತೂಹಲ ಹೆಚ್ಚಾಗಿದ್ದು ಇಂಟರ್‌ನೆಟ್‌ನಲ್ಲಿ ಹುಡುಕಾಟ ಹೆಚ್ಚಾಗಿದೆ. 

ಮೆಗಾ ಸ್ಟಾರ್ ಚಿರಂಜೀವಿ ಅವರ ಸಹೋದರ ನಗೇಂದ್ರ ಬಾಬು ಪುತ್ರ, ನಟ ವರುಣ್ ತೇಜ್ ಇತ್ತೀಚೆಗಷ್ಟೆ ನಟಿ, ಬಹುಕಾಲದ ಗೆಳತಿ ಲಾವಣ್ಯಾ ತ್ರಿಪಾಠಿ ಜೊತೆ  ನಿಶ್ಚಿತಾರ್ಥ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. 

ವರುಣ್ ತೇಜ್ ಮತ್ತು ಲಾವಣ್ಯಾ ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇಬ್ಬರೂ ಈಗ ದಾಂಪತ್ಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೆ ಹೈದರಾಬಾದ್‌ನಲ್ಲಿ ನಡೆದ ಅದ್ದೂರಿ ನಿಶ್ಚಿತಾರ್ಥ ಸಮಾರಂಭದಲ್ಲಿ ಇಡೀ ಮಗಾ ಕುಟುಂಬ ಭಾಗಿಯಾಗಿತ್ತು. 

Latest Videos


ನಿಶ್ಚಿತಾರ್ಥದ ಬೆನ್ನಲ್ಲೇ ಚಿರು ಕುಟಂಬಕ್ಕೆ ಸೊಸೆಯಾಗಿ ಬರುತ್ತಿರುವ ಲಾವಣ್ಯಾ ತ್ರಿಪಾಠಿ ಅವರ ಜಾತಿಗಾಗಿ ಹುಡುಕಾಟ ಪ್ರಾರಂಭವಾಗಿದೆ. ಇಂಟರ್‌ನೆಟ್‌ನಲ್ಲಿ ಲಾವಣ್ಯಾ ಜಾತಿಯ ಬಗ್ಗೆ ಹುಡುಕಾಟ ಹೆಚ್ಚಾಗಿದೆ. 

ಉತ್ತರ ಪ್ರದೇಶ ಮೂಲದ ನಟಿ ಲಾವಣ್ಯಾ ಚಿರು ಕುಟುಂಬದ ಸೊಸೆಯಾಗಿ ಬರ್ತಿದ್ದಾರೆ ಎಂದರೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಹಾಗಾಗಿ ಜಾತಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. 

ಅಂದಹಾಗೆ ಈ ಹಿಂದೆ ಸಂದರ್ಶನವೊಂದರಲ್ಲಿ ಲಾವಣ್ಯಾ ಜಾತಿ ಬಗ್ಗೆ ಮಾತನಾಡಿದ್ದರು. ತನಗೆ ಜಾತಿ ಮುಖ್ಯವಲ್ಲ ಎಂದು ಹೇಳಿದ್ದರು. 'ಒಬ್ಬ ವ್ಯಕ್ತಿ ತನ್ನ ಕಾರ್ಯಗಳಿಂದ ಶ್ರೇಷ್ಠನಾಗುತ್ತಾನೆ ಅವರ ಜಾತಿಯಿಂದ ಅಲ್ಲ ಎಂದು ನಾನು ನಂಬಿದ್ದೇನೆ' ಎಂದು ಹೇಳಿದ್ದರು. 

ಲಾವಣ್ಯ ಹಾಗೂ ವರುಣ್ ತೇಜ್ ಇಬ್ಬರೂ ‘ಮಿನಿಸ್ಟರ್​’, ‘ರಾಯಾಭಾರಿ’ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಸೆಟ್​ನಲ್ಲಿ ಇವರ ಮಧ್ಯೆ ಪ್ರೀತಿ ಮೂಡಿದ್ದು ಇದೀಗ ಪತಿ-ಪತ್ನಿಯರಾಗುತ್ತಿದ್ದಾರೆ. 

ಉತ್ತರ ಪ್ರದೇಶದ ಮೂಲದ ನಟಿ ಲಾವಣ್ಯ ತೆಲುಗು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಲಾವಣ್ಯ ನಟಿಸಿದ್ದಾರೆ. ಕೊನೆಯದಾಗಿ ಹ್ಯಾಪಿ ಬರ್ತಡೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

click me!