ತಮ್ಮ ಶಿಕ್ಷಕರ ಮೇಲೆ ಕ್ರಶ್‌ ಹೊಂದಿದ್ದಾಗಿ ಒಪ್ಪಿಕೊಂಡ ಬಾಲಿವುಡ್ ಸೆಲೆಬ್ರಿಟಿಗಳು!

First Published | Nov 2, 2023, 5:28 PM IST

ಬಾಲಿವುಡ್  ತಾರೆಯರು ತಮ್ಮ ಮೋಡಿ ಮತ್ತು ವರ್ಚಸ್ಸಿನಿಂದ ಲಕ್ಷಾಂತರ ಜನರನ್ನು ಆಕರ್ಷಿಸುತ್ತಾರೆ. ಆದರೆ  ಕ್ಯಾಮೆರಾಗಳುಮತ್ತು ಖ್ಯಾತಿಯ ಮೊದಲು ಅವರ ಶಾಲಾ ಕಾಲೇಜುಗಳ ಸಮಯದಲ್ಲಿ ತಮ್ಮ ಶಿಕ್ಷಕರ ಮೇಲೆ ಕ್ರಶ್‌ ಹೊಂದಿದ್ದನ್ನು ಒಪ್ಪಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ ನೋಡೋಣ.
 

ಐಶ್ವರ್ಯಾ ರೈ: ಐಶ್ವರ್ಯಾ ರೈ ನಿಸ್ಸಂದೇಹವಾಗಿ ಚಿತ್ರರಂಗದಲ್ಲಿ ಅತ್ಯಂತ ಸುಂದರ, ಪ್ರತಿಭಾವಂತ ಮತ್ತು ಪ್ರೀತಿಪಾತ್ರ ನಟಿಯರಲ್ಲಿ ಒಬ್ಬರು. ಅವರು  ತನ್ನ ಶಾಲಾ ದಿನಗಳಲ್ಲಿ ತನ್ನ ಭೌತಶಾಸ್ತ್ರದ ಶಿಕ್ಷಕರಲ್ಲಿ ಒಬ್ಬರನ್ನು ಅಪಾರವಾಗಿ ಮೆಚ್ಚಿಕೊಂಡಿದ್ದಾಗಿ  ಒಮ್ಮೆ ಒಪ್ಪಿಕೊಂಡರು.  ನಟಿ ತನ್ನ ನೆಚ್ಚಿನ ಶಿಕ್ಷಕರನ್ನು ಮೆಚ್ಚಿಸಲು   ತರಗತಿಯ ಮೊದಲ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದರು ಎಂದೂ ಹೇಳಿಕೊಂಡಿದ್ದಾರೆ.
 

ರಣಬೀರ್ ಕಪೂರ್: ರಣಬೀರ್ ಕಪೂರ್, ಬಾಲಿವುಡ್‌ನ  ಅತ್ಯಂತ ಹ್ಯಾಂಡ್‌ಸಮ್‌ ನಟರಲ್ಲಿ ಒಬ್ಬರಾಗಿದ್ದಾರೆ. ಅವರ ಹೆಚ್ಚಿನ ಸಂಬಂಧಗಳು ಬಹಿರಂಗವಾಗಿದ್ದರೂ, ಅವರು ಎರಡನೇ ತರಗತಿಯಲ್ಲಿ ತನ್ನ ಶಿಕ್ಷಕಿಯೊಬ್ಬರ ಮೇಲೆ ಕ್ರಶ್‌ ಹೊಂದಿದ್ದರೆಂದು ಅನೇಕರಿಗೆ ತಿಳಿದಿಲ್ಲ.

Tap to resize

ಸಲ್ಮಾನ್ ಖಾನ್: ಸಲ್ಮಾನ್ ಖಾನ್ ತನ್ನ ಸಂಬಂಧಗಳ ಬಗ್ಗೆ ಎಂದಿಗೂ ಬಹಿರಂಗವಾಗಿ ಮಾತನಾಡದಿದ್ದರೂ, ಒಮ್ಮೆ ಅವರು ತಮ್ಮ ಕ್ರಶ್‌ಗೆ ಬಗ್ಗೆ ಒಪ್ಪಿಕೊಂಡಿದ್ದರು.  ತನ್ನ ರಿಯಾಲಿಟಿ ಗೇಮ್ ಶೋ, 'ದಸ್ ಕಾ ದಮ್' ನಲ್ಲಿ, ನಟ  ಶಾಲೆಯಲ್ಲಿ ತನ್ನ ಶಿಕ್ಷಕರೊಬ್ಬರ ಮೇಲೆ ಮೋಹವನ್ನು ಹೊಂದಿದ್ದನೆಂದು ಮತ್ತು ಅವರು ತನ್ನಟೀಚರ್‌ ಅನ್ನು ತನ್ನ ಬೈಸಿಕಲ್‌ನಲ್ಲಿ ಮನೆಗೆ ಬಿಡುತ್ತಿದ್ದರೆಂದು ಬಹಿರಂಗಪಡಿಸಿದರು.

ಕಂಗನಾ ರಣಾವತ್‌: ತನ್ನ ಪ್ರೇಮ ಜೀವನದ ಬಗ್ಗೆ ಸಾರ್ವಜನಿಕವಾಗಿ ವಿರಳವಾಗಿ ಚರ್ಚಿಸುವ ನಟಿ ಕಂಗನಾ ರಣಾವತ್‌ ಒಂಬತ್ತನೇ ತರಗತಿಯಲ್ಲಿ ಅವರ   ಟೀಚರ್‌ ಒಬ್ಬರ ಮೇಲೆ ಕ್ರಶ್‌  ಹೊಂದಿದ್ದರು ಮತ್ತು ನಟಿ ಸಲ್ಮಾನ್ ಖಾನ್ ಅವರ 'ಚಾಂದ್ ಚುಪಾ ಬಾದಲ್ ಮೇ' ಹಾಡನ್ನು ತನ್ನ ಶಿಕ್ಷಕರಿಗೆ ಅರ್ಪಿಸಿದರು.

Sidharth Malhotra

ಸಿದ್ಧಾರ್ಥ್ ಮಲ್ಹೋತ್ರಾ: ಹ್ಯಾಂಡ್‌ಸಮ್‌ ನಟಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿಯನ್ನು ತಮ್ಮ ಜೀವನದ ಪ್ರೀತಿಯನ್ನು ವಿವಾಹವಾದಾಗ  ಲಕ್ಷಾಂತರ ಹೃದಯಗಳನ್ನು ಮುರಿದರು. ಅವರು ಒಂಬತ್ತನೇ ತರಗತಿಯಲ್ಲಿದ್ದಾಗ ತನ್ನ ಜೀವಶಾಸ್ತ್ರದ ಶಿಕ್ಷಕಿಯ ಮೇಲೆ ಕ್ರಶ್‌ ಹೊಂದಿದ್ದರು ಎಂದು ಒಪ್ಪಿಕೊಂಡಿದ್ದಾರೆ.

Latest Videos

click me!