ತಾತನ ಜೊತೆ ಆರಾಧ್ಯ ಇರೋ ಫೋಟೋ ಶೇರ್ ಮಾಡಿ ಮಾವ ಅಮಿತಾಭ್‌ಗೆ ಐಶ್ ಬರ್ತ್‌ಡೇ ವಿಶ್

First Published | Oct 12, 2024, 11:33 AM IST

ನಿನ್ನೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು 82ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್‌ನ ಹೆಮ್ಮೆಯ ನಟನಿಗೆ ಸೆಲೆಬ್ರಿಟಿಗಳು ಸೇರಿದಂತೆ ದೇಶದೆಲ್ಲೆಡೆಯಿಂದ ಅಭಿಮಾನಿಗಳು ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಹಾಗೆಯೇ ಸೊಸೆ  ಐಶ್ವರ್ಯಾ ರೈ ಅವರು ಕೂಡ ಅಮಿತಾಭ್ ಬಚ್ಚನ್ ಅವರ 82ನೇ ಹುಟ್ಟುಹಬ್ಬಕ್ಕೆ ಮುದ್ದಾಗಿ ವಿಶ್ ಮಾಡಿದ್ದಾರೆ. 

ನಿನ್ನೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು 82ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್‌ನ ಹೆಮ್ಮೆಯ ನಟನಿಗೆ ಸೆಲೆಬ್ರಿಟಿಗಳು ಸೇರಿದಂತೆ ದೇಶದೆಲ್ಲೆಡೆಯಿಂದ ಅಭಿಮಾನಿಗಳು ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಬಿಗ್ ಬಿ ಅವರ ಮುಂಬೈನಲ್ಲಿರುವ ನಿವಾಸ ಜಲ್ಸಾದ ಮುಂದೆ ಈ ಸೂಪರ್ ಸ್ಟಾರ್‌ಗೆ ವಿಶ್ ಮಾಡಲು ಮನೆಯ ಹೊರಗೆ ಅಭಿಮಾನಿಗಳು ಜಮಾಯಿಸಿದ್ದರು. ಹಾಗೆಯೇ ಅಮಿತಾಭ್ ಅವರು ಕೂಡ ಹೊರಗೆ ಬಂದು ತಮ್ಮ ಕೆಲ ಅಭಿಮಾನಿಗಳನ್ನು ಭೇಟಿ ಮಾಡಿದರು. 

ಹಾಗೆಯೇ ಸೊಸೆ  ಐಶ್ವರ್ಯಾ ರೈ ಅವರು ಕೂಡ ಅಮಿತಾಭ್ ಬಚ್ಚನ್ ಅವರ 82ನೇ ಹುಟ್ಟುಹಬ್ಬಕ್ಕೆ ಮುದ್ದಾಗಿ ವಿಶ್ ಮಾಡಿದ್ದಾರೆ. ಮಗಳು ಆರಾಧ್ಯ ಜೊತೆ ಅಮಿತಾಭ್ ಇವರುವ ಫೋಟೋವೊಂದನ್ನು ಶೇರ್ ಮಾಡಿರುವ ಐಶ್ವರ್ಯಾ ರೈಯವರು ಹ್ಯಾಪಿ ಬರ್ತ್‌ಡೇ ಪಪ ಜೀ ದಾದಾಜಿ, ದೇವರು ನಿಮಗೆ ಸದಾ ಆಶೀರ್ವಾದ ಮಾಡಲಿ ಎಂದು ಬರೆದಿದ್ದಾರೆ.  ಈ ಪೋಟೋ ಸ್ವಲ್ಪ ಹೊತ್ತಿನಲ್ಲೇ ವೈರಲ್ ಆಗಿದ್ದು, ಡಿವೋರ್ಸ್ ರೂಮರ್ಸ್‌ ನಡುವೆಯೂ ಸೊಸೆ  ಐಶ್ವರ್ಯಾ ರೈ ಬಿಗ್ ಬಿ ಅವರಿಗೆ ವಿಶ್ ಮಾಡಿರುವುದಕ್ಕೆ ಖುಷಿಯಾಗಿದ್ದಾರೆ.  ಆದರೆ ಪುತ್ರ ಅಭಿಷೇಕ್ ಮಾತ್ರ ತಂದೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಮಾಡಿಲ್ಲ.

Tap to resize

ಆದರೆ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಬೇರಾಗುತ್ತಿದ್ದಾರೆ ಎಂದು ಕೆಲ ವರ್ಷಗಳಿಂದಲೂ ಸುದ್ದಿ ಹಬ್ಬುತ್ತಲೇ ಇದೆ. ಆದರೆ ಈ ರೂಮರ್ಸ್‌ಗಳಿಗೆ ಇಬ್ಬರೂ ಯಾವುದೇ ಹೇಳಿಕೆ ಅಥವಾ ಸ್ಪಷ್ಟನೆ ನೀಡದೇ ಸುಮ್ಮನಾಗಿದ್ದಾರೆ. ಆದರೆ ಈಗ ಐಶ್ವರ್ಯಾ ರೈ ಅವರ ವಿಶ್ ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ಐಶ್ವರ್ಯಾ ರೈ  ಹಾಗೂ ಅಭಿಷೇಕ್ ಬಚ್ಚನ್ ಚಲನವಲನಗಳನ್ನು ಗಮನಿಸುತ್ತಲೇ ಇರುವ ಜನ ಸಣ್ಣ ಬದಲಾವಣೆಯಾದರೂ ಏನು ಆಗಿದೆ ಎಂದು ಊಹಿಸುತ್ತಾರೆ.

ಆದರೆ ಐಶ್ವರ್ಯಾ ರೈ ಮಾತ್ರ ಯಾವುದಕ್ಕೂ ಕ್ಯಾರೇ ಎನ್ನದೇ ತಮ್ಮ ಕೆಲಸವನ್ನು ತಾವು ಮಾಡುತ್ತಾ ಸಾಗಿದ್ದಾರೆ. ಕೆಲ ದಿನಗಳ ಹಿಂದೆ ಅವರು ಅಬುಧಾಬಿಯಲ್ಲಿ ನಡೆದ ಸೈಮಾ ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿ ತಮ್ಮ ಪುತ್ರಿಯೊಂದಿಗೆ ಭಾಗಿಯಾಗಿದ್ದರು. ಈ ಸಮಾರಂಭದಲ್ಲಿ ಅವರಿಗೆ ಪೊನ್ನಿಯಿಲ್ ಸೆಲ್ವನ್ ಸಿನೆಮಾದಲ್ಲಿನ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಲಭ್ಯವಾಗಿತ್ತು.
 

 ಇದಾದ ನಂತರ ದುಬೈನಲ್ಲಿ ನಡೆದ ಐಫಾ ಉತ್ಸವದಲ್ಲೂ ಐಶ್ವರ್ಯಾ ತಮ್ಮ ಪುತ್ರಿಯೊಂದಿಗೆ ಕಾಣಿಸಿಕೊಂಡಿದ್ದರು. ಈ ಎರಡೂ ಸಮಾರಂಭಗಳಲ್ಲೂ ಐಶ್ವರ್ಯಾ ರೈಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದ್ದರೂ, ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್‌ ಆಗಿರುವ ಅಮಿತಾಭ್ ಬಚ್ಚನ್ ಸೊಸೆಗೆ ವಿಶ್ ಮಾಡಿರಲಿಲ್ಲ, ಇತ್ತ ಅಭಿಷೇಕ್ ಬಚ್ಚನ್ ಕೂಡ ಪತ್ನಿಗೆ ವಿಶ್ ಮಾಡಿರಲಿಲ್ಲ.

ನಂತರ ಪ್ಯಾರಿಸ್ ಫ್ಯಾಷನ್ ಶೋದಲ್ಲೂ ಐಶ್ ತಮ್ಮ ಮಗಳೊಂದಿಗೆ ಮಾತ್ರ ಕಾಣಿಸಿಕೊಂಡಿದ್ದರು. ಈ ಮೂರು ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಎಲ್ಲೂ ಐಶ್‌ ಜೊತೆ ಅಭಿಷೇಕ್ ಕಾಣಿಸಿಕೊಂಡಿರಲಿಲ್ಲ, ಹೀಗಾಗಿ ಗಂಡ ಹೆಂಡತಿ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬ ರೂಮರ್ಸ್‌ಗಳು ಹೆಚ್ಚಾಗಿದ್ದವು ಹೀಗಾಗಿ ಈಗ ಐಶ್ವರ್ಯಾ ಮಾವ ಅಮಿತಾಭ್ ಬಚ್ಚನ್ ಅವರಿಗೆ ವಿಶ್ ಮಾಡಿರುವುದು ಅಭಿಮಾನಿಗಳಿಗೆ ಸಮಾಧಾನ ತಂದಿದೆ.
 

Latest Videos

click me!