ಅಕ್ಕಿನೇನಿ ನಾಗಾರ್ಜುನ ಮಕ್ಕಳು ಮಾತ್ರ ಸ್ಟಾರ್ಸ್ ಆಗೋಕೆ ಆಗಿಲ್ಲ. ನಾಗ ಚೈತನ್ಯ ಸಿನಿಮಾಗೆ ಬಂದು ದಶಕ ಆಯ್ತು. ಆತನ ಡೆಬ್ಯೂ ಮೂವಿ ಜೋಶ್ 2009ರಲ್ಲಿ ರಿಲೀಸ್ ಆಗಿತ್ತು. ಮಾಸ್ ಕಮರ್ಷಿಯಲ್ ಸಬ್ಜೆಕ್ಟ್ಸ್ ಆರಿಸಿಕೊಂಡಾಗೆಲ್ಲ ನಾಗ ಚೈತನ್ಯಗೆ ಪ್ಲಾಪ್‌ಗಳೇ ಸಿಕ್ಕಿವೆ. ರೊಮ್ಯಾಂಟಿಕ್, ಲವ್, ಎಮೋಷನಲ್ ಡ್ರಾಮಾಗಳೇ ಆತನಿಗೆ ಹಿಟ್ ಕೊಟ್ಟಿವೆ. ಟೈರ್ ಟು ಹೀರೋಗಳ ಲಿಸ್ಟ್‌ನಲ್ಲೂ ಆತ ಹಿಂದೆ ಬಿದ್ದಿದ್ದಾನೆ. ನಾನಿ, ವಿಜಯ್ ದೇವರಕೊಂಡ.. ನಾಗ ಚೈತನ್ಯನನ್ನ ಹಿಂದಕ್ಕೆ ತಳ್ಳಿದ್ದಾರೆ. ಲವ್ ಸ್ಟೋರಿ ನಂತರ ನಾಗ ಚೈತನ್ಯ ನಟಿಸಿದ ಥ್ಯಾಂಕ್ಯೂ, ಕಸ್ಟಡಿ ಸಿನಿಮಾಗಳು ಓಡಲಿಲ್ಲ.