'ಸೇತು' ಚಿತ್ರ ಸಂಪೂರ್ಣ ಪ್ರಯೋಗಾತ್ಮಕ ಚಿತ್ರ. ಅದು ನನ್ನ ಮೊದಲ ಪ್ರಯೋಗ. ಆ ಚಿತ್ರಕ್ಕಾಗಿ ನಾನು 15 ಕೆಜಿ ತೂಕ ಇಳಿಸಿಕೊಂಡೆ. ಕೊನೆಯ ದೃಶ್ಯಗಳಿಗಾಗಿ ದೀರ್ಘಕಾಲ ಡಯಟ್‍ನಲ್ಲಿದ್ದೆ.ಎಗ್ ವೈಟ್, ಅಪಲ್, ಕ್ಯಾರೆಟ್ ಜ್ಯೂಸ್, ಬೀಟ್ರೂಟ್ ಜ್ಯೂಸ್‍ಗಳನ್ನು ದಿನವಿಡೀ ಸೇವಿಸುತ್ತಿದ್ದೆ. ಕಾರು ಇದ್ದರೂ ಲೊಕೇಶನ್‍ಗೆ ಎಂಟು ಕಿ.ಮೀ. ನಡೆದುಕೊಂಡು ಹೋಗುತ್ತಿದ್ದೆ. ವ್ಯಾಯಾಮ ಬಿಟ್ಟು 16 ಕಿ.ಮೀ. ನಡೆಯುತ್ತಿದ್ದೆ. ಆದರೆ, ಆ ಡಯಟ್ ವೈಜ್ಞಾನಿಕವಾಗಿರದ ಕಾರಣ ಆರೋಗ್ಯ ಸಮಸ್ಯೆಗಳು ಬಂದವು. ನಂತರ ಪ್ರಯೋಗಗಳನ್ನು ಎಚ್ಚರಿಕೆಯಿಂದ ಮಾಡುತ್ತಿದ್ದೇನೆ. 'ಐ' ಚಿತ್ರಕ್ಕಾಗಿ 25 ಕೆಜಿ ತೂಕ ಇಳಿಸಿಕೊಂಡೆ. ನಿರ್ದೇಶಕ ಶಂಕರ್ ವಿಎಫ್‍ಎಕ್ಸ್‌ನಲ್ಲಿ ಮ್ಯಾನೇಜ್ ಮಾಡೋಣ ಎಂದರು, ಆದರೆ ನನಗೆ ಇಷ್ಟವಿರಲಿಲ್ಲ. ಆಗ ವೈಜ್ಞಾನಿಕವಾಗಿ ಮಸಲ್ಸ್‌ಗಳನ್ನು ಬೆಳೆಸಿ, ತೂಕ ಇಳಿಸಿಕೊಂಡೆ. ಅದೇ ರೀತಿ 'ತಂಗಲಾನ್'ಗೂ ಕಷ್ಟಪಟ್ಟೆ.