ಸಿನಿಮಾ ಸುಲಭ, ರಾಜಕೀಯ ಕಷ್ಟವೆಂದ ಕಂಗನಾ ; ಎಂಪಿಯಾದ ನಟಿಯ ವೇತನ, ಭತ್ಯೆಗಳೆಷ್ಷು?

First Published | Jun 13, 2024, 4:34 PM IST

ಬಾಲಿವುಡ್‌ ನಟಿ ಕಂಗನಾ ರಣಾವತ್ ಇತ್ತೀಚೆಗೆ ನಡೆದ  2024 ರ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲದ ಮಂಡಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಹಿಮಾಚಾಲಿ ಪಾಡ್‌ಕ್ಯಾಸ್ಟ್‌ಗೆ ನೀಡಿದ ಸಂದರ್ಶನದಲ್ಲಿ, ನಟಿ ಹಾಗೂ ರಾಜಕಾರಣಿ ಚಲನಚಿತ್ರಗಳಲ್ಲಿ ಕೆಲಸ ಮಾಡುವುದು ರಾಜಕೀಯಕ್ಕಿಂತ ಸುಲಭವೆಂದು ಹೇಳಿಕೊಂಡಿದ್ದಾರೆ. ಅಲ್ಲದೇ ರಾಜಕೀಯಕ್ಕಾಗಿ ಬಾಲಿವುಡ್ ತೊರೆಯುವುದಾಗಿಯೂ ಹೇಳಿದ್ದರು. ಅಷ್ಟಕ್ಕೂ ಇವರ ಮಾಸಿಕ ವೇತನ, ಭತ್ಯೆ ಎಷ್ಟು?

2024ರ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲದ ಮಂಡಿ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಗೆದ್ದಿದ್ದಾರೆ.

'ರಾಜಕೀಯಕ್ಕೆ ಸೇರಲು ನನ್ನನ್ನು ಸಂಪರ್ಕಿಸಿದ್ದು ಇದೇ ಮೊದಲೇನೂ ಅಲ್ಲ. ಹಿಂದೆಯೂ ಹಲವು  ಸಲ ಆಫರ್ಸ್ ಇದ್ದವು. ನನ್ನ ಚೊಚ್ಚಲ ಸಿನಿಮಾ ಗ್ಯಾಂಗ್‌ಸ್ಟಾರ್‌ ನಂತರ, ಟಿಕೆಟ್ ಕೊಟ್ಟಿದ್ದರು. ನನ್ನ ಮುತ್ತಜ್ಜ ಮೂರು ಅವಧಿಗೆ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದರಿಂದ, ನನಗೆ ಇಂಥ ಆಫರ್ಸ್ ಸುಲಭವಾಗಿ ಒಲಿದು ಬಂದಿತ್ತು. ವಾಸ್ತವವಾಗಿ, ನನ್ನ ತಂದೆ ಸಹ ಈ ಪ್ರಸ್ತಾಪದಿಂದ ಖುಷಿಯಾಗಿದ್ದರು. ನನ್ನ ಸಹೋದರಿ ಮೇಲೆ ಆಸಿಡ್ ದಾಳಿಯಾಗಿ, ಬದುಕುಳಿದ ನಂತರವೂ ರಾಜಕೀಯಕ್ಕೆ ಸೇರಲು ಆಹ್ವಾನವಿತ್ತು. ಅದೇ ರೀತಿ ಈ ಸಾರಿ ಟಿಕೆಟ್ ಸಿಕ್ಕಿದ್ದು ಸಹ ಹೊಸತಲ್ಲ,' ಎಂದಿದ್ದಾರೆ.

Tap to resize

'ನಂಗೆ ಇಷ್ಟ ಬಂದಿದ್ದನ್ನು ನಾನು ಮಾಡೋಳು.. ಚಿತ್ರೋದ್ಯಮದಲ್ಲಿ ನಾನು ನಟಿ. ಬರಹಗಾತಿ, ನಿರ್ದೇಶಕಿ ಮತ್ತು ನಿರ್ಮಾಪಕಿ. ಇಲ್ಲಿ ನನ್ನ ರಾಜಕೀಯ ಜೀವನದಲ್ಲಿ, ನಾನು ಇಲ್ಲಿ ಜನರೊಂದಿಗೆ ನನ್ನನ್ನು ತೊಡಗಿಸಿಕೊಳ್ಳ ಬೇಕು. ಇಲ್ಲಿಯೇ ಮುಂದುವರೆಯುವ ಆಶಯವೂ ಇದೆ. ಹಾಗಂತ ನನ್ನ ಮೇಲೆ ಯಾವುದೇ ಒತ್ತಡವೂ ಇಲ್ಲ. ಆದರೂ ನಂಗೆ ಅನಿಸಿದ ಹಾಗೆ ಚಿತ್ರಗಳಲ್ಲಿ ನಟಿಯಾಗಿ ದುಡಿಯೋದು ರಾಜಕೀಯಕ್ಕಿಂತಲೂ ಸುಲಭ. ರಾಜಕಾರಣ ವೈದ್ಯಕೀಯ ವೃತ್ತಿಯಂತೆ ಸ್ವಲ್ಪ ಕಷ್ಟ.  ಅಲ್ಲಿ ತೊಂದರೆಗೊಳಗಾದವರು ಮಾತ್ರ ನಿಮ್ಮನ್ನು ನೋಡಲು ಬರುತ್ತಾರೆ. ನೀವು ಚಲನಚಿತ್ರವನ್ನು ವೀಕ್ಷಿಸಲು ಹೋದರೆ  ನಿರಾಳವಾಗಿರಬಹುದು. ಆದರೆ, ರಾಜಕೀ ಹಾಗಲ್ಲ,' ಎಂಬುವುದು ಬಾಲಿವುಡ್ ಕ್ವೀನ್ ಅಭಿಪ್ರಾಯ.

ಮಾಸಿಕ ವೇತನ:
ಸಂಸದರು ತಿಂಗಳಿಗೆ 1 ಲಕ್ಷ ರೂಪಾಯಿ ಮೂಲ ಸಂಬಳವನ್ನು ಪಡೆಯುತ್ತಾರೆ. ಹಣದುಬ್ಬರ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚದ ಕಾರಣದಿಂದ  2018 ರಲ್ಲಿ ವೇತನ ಹೆಚ್ಚಳದ ನಂತರ ಈ ಮೊತ್ತವನ್ನು ನಿಗದಿಪಡಿಸಲಾಗಿದೆ.

ಕ್ಷೇತ್ರ ಭತ್ಯೆ:
ಕಚೇರಿಗಳನ್ನು ನಿರ್ವಹಿಸಲು ಮತ್ತು ತನ್ನ ಪ್ರದೇಶದಲ್ಲಿ ತನ್ನ ಮತದಾರರೊಂದಿಗೆ ತೊಡಗಿಸಿಕೊಳ್ಳಲು ಖರ್ಚುಗಳನ್ನು ಸರಿದೂಗಿಸಲು ಸ್ಥಿರ ಭತ್ಯೆಯಾಗಿ ಕಂಗನಾ ತಿಂಗಳಿಗೆ 70,000 ಪಡೆಯಲಿದ್ದಾರೆ.
 

ಕಚೇರಿ ಭತ್ಯೆ:
ಕಚೇರಿ ವೆಚ್ಚಗಳಿಗಾಗಿ ಅವರು ತಿಂಗಳಿಗೆ 60, 000 ರೂ. ಸ್ವೀಕರಿಸುತ್ತಾರೆ, ಇದರಲ್ಲಿ ಸ್ಟೇಷನರಿ  ವೆಚ್ಚ, ದೂರಸಂಪರ್ಕ, ಸಿಬ್ಬಂದಿ ಸಂಬಳ ಮತ್ತು ಹೆಚ್ಚಿನವುಗಳು ಸೇರಿವೆ.

ದೈನಂದಿನ ಭತ್ಯೆ:
ರಾಷ್ಟ್ರೀಯ ರಾಜಧಾನಿಯಲ್ಲಿದ್ದಾಗ ವಸತಿ, ಆಹಾರ ಮತ್ತು ಇತರ ಖರ್ಚುಗಳಿಗಾಗಿ ಸಂಸದರಿಗೆ 2000 ರೂಪಾಯಿ ದೈನಂದಿನ ಭತ್ಯೆ ನೀಡಲಾಗುತ್ತದೆ.

ಪ್ರಯಾಣ ಭತ್ಯೆ:
ಅವರ ಮತ್ತು ಅವರ ಹತ್ತಿರದ ಕುಟುಂಬ ಸದಸ್ಯರಿಗೆ ವರ್ಷಕ್ಕೆ 34 ಉಚಿತ ದೇಶೀಯ ವಾಯು ಪ್ರಯಾಣಗಳಿಗೆ ಅರ್ಹತೆ ಇದೆ. ಅವರು ಅಧಿಕೃತ ಮತ್ತು ವೈಯಕ್ತಿಕ ಉದ್ದೇಶಗಳಿಗಾಗಿ ಉಚಿತ ಪ್ರಥಮ ದರ್ಜೆ ರೈಲು ಪ್ರಯಾಣವನ್ನೂ ಪಡೆಯುತ್ತಾರೆ.
 

ವಸತಿ ಭತ್ಯೆ:
ಸಿನಿಯಾರಿಟಿ ಆಧಾರದ ಮೇಲೆ ಪ್ರಧಾನ ಪ್ರದೇಶಗಳಲ್ಲಿ ಬಂಗಲೆ,  ಫ್ಲ್ಯಾಟ್‌ ಸೇರಿ  ಬಾಡಿಗೆ ಉಚಿತ ವಸತಿ ಸೌಕರ್ಯ ನೀಡಲಾಗಿದೆ. ಅಧಿಕೃತ ಸೌಕರ್ಯಗಳನ್ನು ಬಳಸದವರು ತಿಂಗಳಿಗೆ 25 ಲಕ್ಷ  ರೂ. ಭತ್ಯೆ ಪಡೆಯಬಹುದು.

ವೈದ್ಯಕೀಯ ಭತ್ಯೆ:
ಕಂಗನಾ ಮತ್ತು ಅವರ  ಕುಟುಂಬಗಳು ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಡಿಯಲ್ಲಿ ಉಚಿತ ವೈದ್ಯಕೀಯ ಆರೈಕೆಯನ್ನು ಪಡೆಯುತ್ತವೆ. ಇದರಲ್ಲಿ ಸರ್ಕಾರ ಮತ್ತು ಆಯ್ದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸೇರಿದೆ.

ಇತರ ಭತ್ಯೆ:
 ಉಚಿತ ಇಂಟರ್ನೆಟ್ ಸಂಪರ್ಕ  ಮತ್ತು 150000 ಉಚಿತ ದೂರವಾಣಿ ಕರೆಗಳನ್ನು .ಅವರಿಗೆ 50000 ಯುನಿಟ್ ಉಚಿತ ವಿದ್ಯುತ್ ಮತ್ತು 4K ಲೀಟರ್ ಉಚಿತ ನೀರನ್ನು  ವರ್ಷಕ್ಕೆ ನೀಡಲಾಗುತ್ತದೆ.

ಕೆಲವು ದಿನಗಳ ಹಿಂದೆ  ಕಂಗನಾ ರಣಾವತ್‌  ಅವರಿಗೆ ಸಿಐಎಸ್ಎಫ್ ಗಾರ್ಡ್ ಚಂಡೀಗಡ ವಿಮಾನ ನಿಲ್ದಾಣದಲ್ಲಿ ಕಪಾಳಮೋಕ್ಷ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ   ಕರಣ್ ಜೋಹರ್ ಎಲ್ಲಾ ರೀತಿಯ ಹಿಂಸಾಚಾರಗಳನ್ನು ಖಂಡಿಸಿದರು. ನಾನು ಯಾವುದೇ ರೀತಿಯ ಮೌಖಿಕ ಅಥವಾ ದೈಹಿಕವಾಗಿ  ಹಿಂಸಾಚಾರವನ್ನು ಬೆಂಬಲಿಸುವುದಿಲ್ಲ ಅಥವಾ ಕ್ಷಮಿಸುವುದಿಲ್ಲ ಎಂದು ಕರಣ್ ಜೋಹರ್‌ ಹೇಳಿದ್ದನ್ನೂ ಇಲ್ಲಿ ಸ್ಮರಿಸಬಹುದು.

Latest Videos

click me!