Bollywood News: ಈ ಸೂಪರ್‌ಸ್ಟಾರ್ಸ್ ಮುಖ ನೋಡಲು ಸಹ ಇಷ್ಟಪಡದ ಐಶ್ವರ್ಯಾ ರೈ
First Published | Sep 29, 2022, 4:32 PM ISTನಿರ್ದೇಶಕ ಮಣಿರತ್ನಂ ಅವರ ಬಹುನಿರೀಕ್ಷಿತ ಚಿತ್ರ ಪೊನ್ನಿಯಿನ್ ಸೆಲ್ವನ್ 1(Ponniyin Selvan 1) 500 ಕೋಟಿ ಬಜೆಟ್‌ನಲ್ಲಿ ಸೆಪ್ಟೆಂಬರ್ 30 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ, ತಮಿಳು ಜೊತೆಗೆ ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ದಕ್ಷಿಣದ ಸೂಪರ್‌ಸ್ಟಾರ್‌ಗಳ ದೊಡ್ಡ ತಂಡ ಕಾಣಿಸುತ್ತದೆಯಾದರೂ, ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಕೂಡ ಇದರಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಐಶ್ವರ್ಯಾ ರೈ (Aishwarya Rai Bachchan).ಅಂದಹಾಗೆ, ನಿಜ ಜೀವನದಲ್ಲೂ ಐಶ್ವರ್ಯಾ ರೈಗೆ ಬಾಲಿವುಡ್ ಇಂಡಸ್ಟ್ರಿಯಲ್ಲಿ ಅಂತಹ ಅನೇಕ ಶತ್ರುಗಳಿದ್ದಾರೆ, ಅವರ ಮುಖ ನೋಡಲು ಸಹ ನಟಿ ಇಷ್ಟಪಡುವುದಿಲ್ಲ. ಐಶ್ವರ್ಯಾ ರೈ ಬಚ್ಚನ್ ಶತ್ರುಗಳ ಪಟ್ಟಿಯಲ್ಲಿ ಯಾರೆಲ್ಲಾ ಸೇರಿದ್ದಾರೆ ನೋಡಿ ಇಲ್ಲಿದೆ ವಿವರ.