Allu Arjun ಗೋಲ್ಡನ್‌ ಟೆಂಪಲ್‌ನಲ್ಲಿ ಫ್ಯಾಮಿಲಿ ಜೊತೆ ಪತ್ನಿ ಹುಟ್ಟುಹಬ್ಬ ಆಚರಿಸಿದ ಅಲ್ಲು ಅರ್ಜುನ್!

First Published | Sep 29, 2022, 4:28 PM IST

ಐಷಾರಾಮಿ ಬರ್ತಡೇಗೆ ಗುಡ್‌ ಬೈ ಹೇಳಿ ಸರಳವಾಗಿ ಅಮೃತಸರದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸ್ನೇಹಾ ರೆಡ್ಡಿ

ಟಾಲಿವುಡ್‌ ಸ್ಟೈಲಿಶ್ ಐಕಾನ್ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಹುಟ್ಟುಹಬ್ಬವನ್ನು ಅಮೃತಸರದ ಗೋಲ್ಡನ್‌ ಟೆಂಪಲ್‌ನಲ್ಲಿ ಆಚರಿಸಿದ್ದಾರೆ. 

ಅಲ್ಲು ಅರ್ಜುನ್, ಸ್ನೇಹಾ, ಪುತ್ರ ಅಯಾನ್ ಮತ್ತು ಪುತ್ರಿ ಅರ್ಹಾ ಜೊತೆ ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

Tap to resize

 ಅರ್ಜುನ್ ಮತ್ತು ಸ್ನೇಹಾ ನೀಲಿ ಬಣ್ಣದ ಉಡುಪು ಧರಿಸಿದ್ದರೆ, ಮಕ್ಕಳಿಬ್ಬರೂ ಪಿಂಕ್ ಆಂಡ್ ಪರ್ಪಲ್‌ ಕಾಂಬಿನೇಷನ್‌ನಲ್ಲಿ ಇದ್ದಾರೆ. 

'ಹ್ಯಾಪಿ ಬರ್ತಡೇ ಕ್ಯೂಟಿ' ಎಂದು ಅರ್ಜುನ್ ಪತ್ನಿಗೆ ವಿಶ್ ಮಾಡಿದ್ದಾರೆ. ಕಾಮೆಂಟ್ಸ್‌ನಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಪತ್ನಿಗೆ ವಿಶ್ ಮಾಡಿದ್ದಾರೆ.

ಆರ್ಜುನ್ ಮತ್ತು ಸ್ನೇಹಾ ಮಾರ್ಚ್‌ 2011ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರು ಮುದ್ದಾದ ಮಕ್ಕಳಿದ್ದು ಸಮಂತಾ ಪ್ರಭು ಶೋನಲ್ಲಿ ಮೊದಲ ಬಾರಿಗೆ ಟಿವಿಯಲ್ಲಿ ಕಾಣಿಸಿಕೊಂಡರು.

'ನನ್ನ ಪತ್ನಿಯಲ್ಲಿ ನನಗೆ ಎರಡು ಕ್ವಾಲಿಟಿ ತುಂಬಾನೇ ಇಷ್ಟ ಆಕೆ ತುಂಬಾನೇ ಡಿಗ್ನಿಫೈಡ್‌. ರಾತ್ರಿ 2 ಗಂಟೆಗೆ ನೈಟ್‌ಕ್ಲಬ್‌ನಲ್ಲಿ ನೋಡಿದ್ದರೂ ಆಕೆ ಡೀಸೆಂಟ್ ಆಗಿರುತ್ತಾಳೆ. ಜೀವನದಲ್ಲಿ ತುಂಬಾನೇ ಬ್ಯಾಲೆನ್ಸ್‌ ಹೊಂದಿದ್ದಾಳೆ' ಎಂದು ಅರ್ಜುನ್‌ ಹೇಳಿದ್ದರು. 

Latest Videos

click me!