ಡಿವೋರ್ಸ್ ವದಂತಿ ನಡುವೆ ಅಭಿಷೇಕ್ -ಐಶ್ವರ್ಯ ಜೊತೆಯಾಗಿ ದೀಪಾವಳಿ ಆಚರಿಸುತ್ತಿರೋ ಫೋಟೊ ವೈರಲ್!

First Published Oct 30, 2024, 12:53 PM IST

ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಡಿವೋರ್ಸ್ ವದಂತಿಗಳ ನಡುವೆ ಈ ಜೋಡಿ ಜೊತೆಯಾಗಿ ದೀಪಾವಳಿ ಪಾರ್ಟಿ ಸೆಲೆಬ್ರೇಟ್ ಮಾಡಿದ ಫೋಟೊ ವೈರಲ್ ಆಗ್ತಿದೆ. 
 

ಇತ್ತೀಚಿನ ದಿನಗಳಲ್ಲಿ ಮನರಂಜನಾ ಜಗತ್ತಿನಲ್ಲಿ ದೀಪಾವಳಿ ಪಾರ್ಟಿಗಳು (Diwali party)  ಹೆಚ್ಚಾಗಿ ಎಲ್ಲಾ ಕಡೆಗಳಲ್ಲೂ ನಡೆಯುತ್ತಿದೆ. ಮನೀಶ್ ಮಲ್ಹೋತ್ರಾ ಅವರ ಪಾರ್ಟಿ ಪ್ರಾರಂಭವಾದಾಗಿನಿಂದ, ಈಗ ಕೆಲವು ತಾರೆಯರು ತಮ್ಮ ಮನೆಯಲ್ಲಿ ದೀಪಾವಳಿ ಪಾರ್ಟಿಯನ್ನು ಆಯೋಜಿಸುತ್ತಿದ್ದಾರೆ.  ಅದರಂತೆ ಪ್ರತಿವರ್ಷ ಅಮಿತಾಬ್ ಬಚ್ಚನ್ ಅವರ ಬಂಗಲೆಯಲ್ಲಿ ಸಹ ಪಾರ್ಟಿ ಆಯೋಜಿಸಲಾಗುತ್ತಿತ್ತು. ಇಡೀ ಬಚ್ಚನ್ ಕುಟುಂಬವು ದೇಸಿ ಬಣ್ಣಗಳಲ್ಲಿ  ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ.
 

ಸದ್ಯಕ್ಕಂತೂ ದೇಶದಲ್ಲಿ ಭಾರಿ ಸದ್ದು ಮಾಡುತ್ತಿರೋ ಸುದ್ದಿ ಅಂದ್ರೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ (Aishwarya Rai) ಡಿವೋರ್ಸ್ ಸುದ್ದಿ, ಇದರ ನಡುವೆಯೇ ಅಭಿಷೇಕ್ ಐಶ್ವರ್ಯ ಜೊತೆಯಾಗಿ ದೀಪಾವಳಿ ಪಾರ್ಟಿ ಸೆಲೆಬ್ರೇಟ್ ಮಾಡುತ್ತಿರುವ ಫೋಟೊ ವೈರಲ್ ಆಗಿದೆ. ಇದನ್ನ ನೋಡಿ ಜನ ನಿಜವಾಗ್ಲೂ ಇವರ ನಡುವೆ ಏನು ನಡೀತಿದೆ ಅಂತ ಕೇಳ್ತಿದ್ದಾರೆ. 
 

Latest Videos


ಕೆಂಪು ಸೂಟ್ ನಲ್ಲಿ ಐಶ್ವರ್ಯಾ, ಕಸೂತಿ ಕುರ್ತಾದಲ್ಲಿ ಅಭಿಷೇಕ್
ಬಚ್ಚನ್ ಕುಟುಂಬವು ತಮ್ಮ ಫಿಲಂ ಇಂಡಸ್ಟ್ರಿ ಸ್ನೇಹಿತರಿಗಾಗಿ ಪಾರ್ಟಿಗಳನ್ನು ನಡೆಸುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಐಶ್ ಮತ್ತು ಅಭಿಷೇಕ್ ಎಲ್ಲರೂ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ (Abhishek Bacchan) ಐವರಿ ಬಣ್ಣದ ಕಸೂತಿ ಕುರ್ತಾದಲ್ಲಿ ಕಂಡು ಬಂದರೆ,, ಐಶ್ ಕೆಂಪು ಬಣ್ಣದ ಸೂಟ್ ಧರಿಸಿದ್ದರು. ಸದ್ಯ ವೈರಲ್ ಆಗುತ್ತಿರುವ ಈ ಫೋಟೊಗಳು ಈ ವರ್ಷದ ಫೋಟೊಗಳು ಅಲ್ಲ. ಇವು 2019 ರ ಪಾರ್ಟಿಯ ಫೋಟೋಗಳು.

ಕೆಂಪು ಸೂಟ್ ನಲ್ಲಿ, ಐಶ್ ಸೌಂದರ್ಯದ ಖನಿಯಂತೆ ಕಾಣಿಸ್ತಿದ್ದಾರೆ, ಅದರ ಜೊತೆಗೆ ವಜ್ರ ಮತ್ತು ಮಾಣಿಕ್ಯ ಹಾರದೊಂದಿಗೆ ಮ್ಯಾಚ್ ಆಗುವ ಇಯರಿಂಗ್ಸ್ ಧರಿಸಿದ್ದು, ಅದರಲ್ಲಿ ಮುತ್ತುಗಳು ನೇತಾಡುತ್ತಿವೆ. ಇದರ ಜೊತೆಗೆ ವಜ್ರದ ಬಳೆಗಳು ಹಾಗೂ ಉಂಗುರ ಕೂಡ ಧರಿಸಿದ್ದಾರೆ. ಒಟ್ಟಲ್ಲಿ ಐಶ್ವರ್ಯ ರೈ ತುಂಬಾನೆ ಸುಂದರವಾಗಿ ಕಾಣಿಸ್ತಿದ್ದಾರೆ. ಇದನ್ನ ನೋಡಿ ಅಭಿಮಾನಿಗಳು ಖುಷಿಯಾಗಿದ್ದು, ಇವತ್ತು ಕೂಡ ಅವರಿಬ್ಬರೂ ಹೀಗೆ ಜೊತೆಯಾಗಿ ಸೆಲೆಬ್ರೇಟ್ ಮಾಡಬೇಕಿತ್ತು ಎಂದು ಆಶಿಸಿದ್ದಾರೆ. 
 

ಈ ವರ್ಷ ಬಚ್ಚನ್ ಪರಿವಾರದವರು ಯಾವುದೇ ರೀತಿಯ ದೀಪಾವಳಿ ಪಾರ್ಟಿ ಆಯೋಜಿಸಿಲ್ಲ. ಸದ್ಯ ಎಲ್ಲಡೆ ಅಭೀಷೇಕ್ ಮತ್ತು ಐಶ್ವರ್ಯ ಡಿವೋರ್ಸ್ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಓಡಾಡುತ್ತಿದೆ. ಅಷ್ಟೇ ಅಲ್ಲ, ಅಭಿಷೇಕ್ ಬಚ್ಚನ್ ನಟಿ ನಿಮ್ರಿತ್ ಕೌರ್ ಜೊತೆ ಡೇಟಿಂಗ್ ಮಾಡ್ತಿರೋದಾಗಿ ಸಹ ಸುದ್ದಿ ಬರ್ತಾ ಇದೆ. 
 

ಇಬ್ಬರ ವಿಚ್ಚೇದನ ಸುದ್ದಿಯ ನಡುವೆ ಅಂಬಾನಿ ಕುಟುಂಬದ ಮದುವೆ ಸಮಾರಂಭದಲ್ಲಿ ಐಶ್ವರ್ಯ ಮತ್ತು ಅಭಿಷೇಕ್ ಜೊತೆಯಾಗಿ ಮಾತನಾಡುತ್ತಾ, ನಗುತ್ತಿರುವ ಫೋಟೊ ಕೂಡ ವೈರಲ್ ಆಗಿತ್ತು, ಅಷ್ಟೇ ಅಲ್ಲ, ಐಶ್ವರ್ಯ ಇತ್ತೀಚೆಗಷ್ಟೇ ತಮ್ಮ ಮಾವ ಅಮಿತಾಬ್ ಬಚ್ಚನ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದು, ಆಗಿದೆ. 
 

ಡಿವೋರ್ಸ್ ಬಗ್ಗೆ ಇಬ್ಬರು ಎಲ್ಲೂ ಪ್ರತಿಕ್ರಿಕೆ ನೀಡಿಲ್ಲ. ಆದರೂ ದಿನದಿಂದ ದಿನಕ್ಕೆ ಇಬ್ಬರ ಡಿವೋರ್ಸ್ ಸುದ್ದಿ ಮಾತ್ರ ದೇಶಾದ್ಯಂತ ಸಾಕಷ್ಟು ಸುದ್ದಿ ಮಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ, ಐಶ್ವರ್ಯ ಹೆಚ್ಚಾಗಿ ತಮ್ಮ ಮಗಳ ಜೊತೆ ಕಾಣಿಸಿಕೊಳ್ಳುತ್ತಿದ್ದು, ಬಚ್ಚನ್ ಪರಿವಾರದೊಂದಿಗೆ ಕಾಣಿಸಿಕೊಳ್ಳುತ್ತಿಲ್ಲ. ಹಾಗಾಗಿ ವಿಚ್ಚೇದನದ ವದಂತಿ ಕೇಳಿ ಬರುತ್ತಿದೆ. 

click me!