ಮೃಣಾಲ್ ಠಾಕೂರ್ ಅವರ ಮೊದಲ ತೆಲುಗು ಚಿತ್ರ ಸೀತಾ ರಾಮಂ. ದುಲ್ಕರ್ ಸಲ್ಮಾನ್ ಜೊತೆ ನಟಿಸಿದ ಈ ಸಿನಿಮಾದಲ್ಲಿ ಮೃಣಾಲ್ ನಿರ್ವಹಿಸರುವ ಪ್ರೇಮಿಯ ಪಾತ್ರದ ಮೂಲಕ ಹಳೆಯ ರೋಮ್ಯಾನ್ಸ್‌ನ ತಾಜಾ ಗಾಳಿಯನ್ನು ಸೃಷ್ಟಿ ಮಾಡಿದ್ದರು.
ಈಗ ಮತ್ತೊಮ್ಮೆ ಮೃಣಾಲ್ ಅವರು ತನ್ನ ಎರಡನೇ ತೆಲುಗು ಚಿತ್ರ 'ಹಾಯ್ ನನ್ನ' ಮೂಲಕ ಟಾಲಿವುಡ್‌ನಲ್ಲಿ ಸಂಚಲನ ಮೂಡಿಸಿದ್ದಾರೆ.
ಡಿಸೆಂಬರ್ 7 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಮೃಣಾಲ್ ಅವರ ಹಾಯ್ ನನ್ನ ಸಿನಿಮಾವನ್ನು ಶೌರ್ಯುವ್ ನಿರ್ದೇಶಿಸಿದ್ದಾರೆ ಮತ್ತು ನಾನಿ ಸಹ-ನಟನಾಗಿ ನಟಿಸಿದ್ದಾರೆ.
ಹಾಯ್ ನನ್ನ ಮೃಣಾಲ್ ಛಾಯಾಗ್ರಾಹಕ ವಿರಾಜ್ (ನಾನಿ) ಅನ್ನು ಭೇಟಿಯಾಗುವ ಯಶನಾ ಪಾತ್ರವನ್ನು ನಿರ್ವಹಿಸಿದ್ದಾರೆ, ನಾನಿ ತನ್ನ ಮಗಳು ಮಹಿ (ಕಿಯಾರಾ ಖನ್ನಾ) ಜೊತೆ ವಾಸಿಸುವ ಒಂಟಿ ತಂದೆ ಪಾತ್ರದಲ್ಲಿದ್ದಾರೆ
ತೆಲಗು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೊದಲು ಮೃಣಾಲ್ ಠಾಕೂರ್ ಕಿರುತೆರೆಯಲ್ಲಿ ಹಾಗೂ ಹಿಂದಿ ಸಿನಿಮಾಗಳಲ್ಲಿ ತಮ್ಮ ಛಾಪು ಮೂಡಿಸಿದ್ದರು.
ಟಿವಿಯ ಧಾರಾವಾಹಿಗಳಾದ ಮುಜ್ಸೆ ಕುಚ್ ಕೆಹ್ತಿ...ಯೇ ಖಮೋಶಿಯಾನ್ ಮತ್ತು ಕುಂಕುಮ್ ಭಾಗ್ಯಗಳೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ ಠಾಕೂರ್ ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿಗಾಗಿ ಭಾರತೀಯ ದೂರದರ್ಶನ ಪ್ರಶಸ್ತಿಯನ್ನು ಗೆದ್ದರು.
ಅವರು ಲವ್ ಸೋನಿಯಾ (2018) ಮೂಲಕ ಹಿಂದಿ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು ಮತ್ತು ನಂತರ ಸೂಪರ್ 30 ಮತ್ತು ಬಾಟ್ಲಾ ಹೌಸ್‌ನೊಂದಿಗೆ ಗುರುತಿಸಿಕೊಂಡರು.
ಇದಲ್ಲದೆ, ಮೃಣಾಲ್ ಅವರು ತಮ್ಮ ಮೊದಲು ತೆಲಗು ಸಿನಿಮಾ ಸೀರಾ ರಾಮಂಗಾಗಿ ಎರಡು SIIMA ಆವಾರ್ಡ್‌ಗಳನ್ನು ಗೆದ್ದ ಕೀರ್ತಿ ಹೊಂದಿದ್ದಾರೆ,