ಮಂಗಳೂರು ಹುಡುಗನ ಪ್ರೀತಿಸಿ ಮದುವೆಯಾದ ಬಾಲಿವುಡ್‌ ಸ್ಟಾರ್‌ ಕೊರಿಯೋಗ್ರಾಫರ್, ಹಾಡೊಂದಕ್ಕೆ 50 ಲಕ್ಷ ರೂ. ಸಂಭಾವನೆ

First Published | Jan 9, 2024, 5:24 PM IST

ಹಾಡುಗಳು ಇಂದು ಚಲನಚಿತ್ರಗಳ ಅವಿಭಾಜ್ಯ ಅಂಗವಾಗಿದೆ. ದೊಡ್ಡ-ಬಜೆಟ್ ಚಿತ್ರದ ಪ್ರಚಾರದ ಬೆನ್ನೆಲುಬಾಗಿ ಉತ್ತಮ ನೃತ್ಯ ಸಂಯೋಜನೆ ಕೂಡ ಇರುತ್ತದೆ. ಹಾಗಾಗಿ ಚಿತ್ರಗಳಲ್ಲಿ ನೃತ್ಯ ನಿರ್ದೇಶಕರ ಪ್ರಾಮುಖ್ಯತೆ ಹೆಚ್ಚಾಗಿದೆ. ಬಾಲಿವುಡ್‌ನ ಮಹಿಳಾ ನೃತ್ಯ ನಿರ್ದೇಶಕಿ ಒಬ್ಬರು ಮಂಗಳೂರಿನ ಯುವಕನ ಕೈ ಹಿಡಿದಿದ್ದಾರೆ

ಬಾಲಿವುಡ್‌ನಲ್ಲಿ ಅನೇಕ ಮಹಿಳಾ ನೃತ್ಯ ಸಂಯೋಜಕಿಯರಿದ್ದಾರೆ. ಇಂದು,  ಪ್ರಸಿದ್ಧ ನೃತ್ಯ ಸಂಯೋಜಕರು ಪ್ರತಿ ಹಾಡಿಗೆ ಕೋಟಿಗಟ್ಟಲೆ ಸಂಭಾವನೆ ಕೂಡ  ವಿಧಿಸುತ್ತಾರೆ, ಕೆಲವೊಮ್ಮೆ ಶುಲ್ಕದಲ್ಲಿ ನಟರನ್ನೂ ಮೀರಿಸುತ್ತಾರೆ.  ಎರಡು ದಶಕಗಳಿಂದ ಭಾರತದ ಟಾಪ್ ಕೊರಿಯೋಗ್ರಾಫರ್ ಆಗಿರುವ ಫರಾ ಖಾನ್, ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನೃತ್ಯ ಸಂಯೋಜಕಿಯರಿದ್ದಾರೆ. 
 

ವರದಿಗಳ ಪ್ರಕಾರ, ಫರಾ ನೃತ್ಯ ಸಂಯೋಜಕರಾಗಿ ಪ್ರತಿ ಹಾಡಿಗೆ 50 ಲಕ್ಷ ರೂ ಕ್ಕಿಂತ ಹೆಚ್ಚು ವಿಧಿಸುತ್ತಾರೆ.  ಮಾತ್ರವಲ್ಲ ರೆಮೋ ಡಿಸೋಜಾ, ಗಣೇಶ್ ಹೆಗ್ಡೆ ಮತ್ತು ವೈಭವಿ ಮರ್ಚೆಂಟ್‌ರಂತಹವರನ್ನು ಫರಾ ಹಿಂದಿಕ್ಕಿದ್ದಾರೆ, ಅವರೆಲ್ಲರೂ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ, ಇವರೆಲ್ಲ ಒಂದು ಒಂದು ಹಾಡಿಗೆ 25-50 ಲಕ್ಷ ರೂ. ವಿಧಿಸುತ್ತಾರೆ.

Tap to resize

ಫರಾ ಖಾನ್ ನರ್ತಕಿ ಮತ್ತು ನೃತ್ಯ ಸಂಯೋಜಕಿಯಾಗಿ ವೃತ್ತಿ ಜೀವನ ಆರಂಭಿಸಿದರು ಆದರೆ ನಂತರ ಚಲನಚಿತ್ರ ನಿರ್ಮಾಪಕರಾಗಿ ಮಾರ್ಪಟ್ಟರು, ಮೈ ಹೂ ನಾ, ತೀಸ್ ಮಾರ್ ಖಾನ್ ಮತ್ತು ಹ್ಯಾಪಿ ನ್ಯೂ ಇಯರ್‌ನಂತಹ ಹಿಟ್‌ಗಳನ್ನು ನಿರ್ದೇಶಿಸಿದರು. ಚಲನಚಿತ್ರ ನಿರ್ದೇಶನ ಮತ್ತು ನಿರ್ಮಾಣದಲ್ಲಿ ತೊಡಗಿಸಿಕೊಂಡ ಫರಾ ತನ್ನ ಬಂಡವಾಳವನ್ನು ವಿಸ್ತರಿಸಲು ಮತ್ತು ಅವರ ಸಂಪತ್ತನ್ನು ಹೆಚ್ಚಿಸಲು ಇದು ಸಹಾಯ ಮಾಡಿತು. 

ವರದಿಗಳ ಪ್ರಕಾರ, ನೃತ್ಯ ಸಂಯೋಜಕ-ಚಲನಚಿತ್ರ ನಿರ್ಮಾಪಕಿಯಾಗಿ ಈಗ ರೂ. 350 ಕೋಟಿಗೂ ಅಧಿಕ ಮೌಲ್ಯವನ್ನು ಹೊಂದಿದ್ದಾರೆ. ಮಾತ್ರವಲ್ಲ ಬಾಲಿವುಡ್‌ನ ಅನೇಕ ಕಿರಿಯ ನಾಯಕ ನಟರಿಗಿಂತ ಹೆಚ್ಚು ಶ್ರೀಮಂತಳಾಗಿದ್ದಾರೆ. ಬ್ಯಾಕ್‌ಅಪ್ ಡ್ಯಾನ್ಸರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ಬಳಿಕ   ಚಲನಚಿತ್ರ ನಿರ್ಮಾಪಕಿಯಾದ ನಂತರ ತನ್ನ ನೃತ್ಯ ಸಂಯೋಜನೆಯ ಕೆಲಸವನ್ನು ಕಡಿಮೆ ಮಾಡಿಕೊಂಡಿದ್ದರೂ ಕೆಲವು  ಸಾಂದರ್ಭಿಕವಾಗಿ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡುತ್ತಾರೆ.

ಆಕೆಯ ಕೊನೆಯ  ನೃತ್ಯ ಸಂಯೋಜನೆ ಎಂದರೆ ಜವಾನ್‌ನ ಚಲೇಯಾ, ಅಲ್ಲಿ ಅವರು ಶಾರುಖ್ ಖಾನ್ ಮತ್ತು ನಯನತಾರಾ  ಜೋಡಿಗೆ  ನೃತ್ಯ ಹೇಳಿಕೊಟ್ಟರು. ಫರಾ ಇತ್ತೀಚೆಗೆ ಬಿಡುಗಡೆಯಾದ ಹಾಸ್ಯ ಚಲನಚಿತ್ರ ಖಿಚಡಿ 2: ಮಿಷನ್ ಪಾಂತುಕಿಸ್ತಾನ್‌ನಲ್ಲಿ ಅತಿಥಿ ಪಾತ್ರದಲ್ಲಿ ತೆರೆಯ ಮೇಲೆ ನಟಿಸಿದ್ದಾರೆ. ಚಿತ್ರದಲ್ಲಿ, ಅವರು ತನ್ನ ಕಾಲ್ಪನಿಕ ಆವೃತ್ತಿಯನ್ನು ನಿರ್ವಹಿಸಿದ್ದಾರೆ. ಫರಾ 2022 ರಲ್ಲಿ ದಿ ಖತ್ರಾ ಶೋನ ನಿರೂಪಕಿಯಾಗಿ ಕಾಣಿಸಿಕೊಂಡರು.

ಫರಾ ತನಗಿಂತ 9 ವರ್ಷ ದೊಡ್ಡ ವಯಸ್ಸಿನ  ಮಂಗಳೂರು ಮೂಲದ  ಶಿರೀಶ್ ಕುಂದರ್ ಅವರನ್ನು ಪ್ರೀತಿಸಿ 2004ರಲ್ಲಿ ಮದುವೆಯಾದರು. ಬಾಲಿವುಡ್‌ ನಲ್ಲಿ ಫಿಲ್ಮ್ ಮೇಕರ್‌, ಚಿತ್ರಕಥೆ ಮತ್ತು ಬರಹಗಾರರಾಗಿರುವ   ಶಿರೀಶ್ ಗೆ ಈಗ 50 ವರ್ಷ.  ಫರಾಗೆ ಈಗ 59 ವರ್ಷವಾಗಿದೆ. ದಂಪತಿಗಳಿಗೆ 1 ಗಂಡು, 2 ಹೆಣ್ಣು ತ್ರಿವಳಿ ಮಕ್ಕಳಿದ್ದು, 2008 ರಲ್ಲಿ ಈ ತ್ರಿವಳಿಗಳಾದ ದಿವಾ, ಅನ್ಯಾ ಮತ್ತು ಝಾರ್ ರನ್ನು  ಸರೋಗಸಿ ಮೂಲಕ  ಪಡೆದಿದ್ದಾರೆ.

ಫರಾ ಮತ್ತು ಶಿರಿಶ್ , ಮೇನ್ ಹೂ ನಾ ಚಿತ್ರದ ಶೂಟಿಂಗ್‌ ಸಮಯದಲ್ಲಿ ಪ್ರೀತಿಸುತ್ತಿದ್ದರು. ಚಿತ್ರದ ಶೂಟಿಂಗ್ ಸಮಯದಲ್ಲಿ ಶಿರಿಶ್ ಕಂಡರೆ ಫರಾಗೆ ಆಗುತ್ತಿರಲಿಲ್ಲ. ಪರಸ್ಪರ ಜಗಳಗಳೇ ಆಗುತ್ತಿತ್ತು. ಶಾರುಖ್ ಖಾನ್‌ ಆಗ ಡೇಟಿಂಗ್ ಮಾಡಬೇಡಿ ಎಂದೆಲ್ಲ ತಮಾಷೆ ಮಾಡುತ್ತಿದ್ದರು. ಆದರೆ ಶೂಟಿಂಗ್ ಮುಗಿದ ನಂತರ ಶಿರೀಶ್ ಅವರ ಕೆಲಸದಿಂದ ನಾನು ತುಂಬಾ ಪ್ರಭಾವಿತನಾಗಿದ್ದೆ ಮಿಸ್‌ ಮಾಡಿಕೊಳ್ಳುತ್ತಿದ್ದೆ ಎಂದು ಸಂದರ್ಶನದಲ್ಲಿ ಹೇಳಿದ್ದರು.
 

Latest Videos

click me!