ಪುಷ್ಪ 2 ಚಿತ್ರದ ಐಟಂ ಸಾಂಗ್‌ಗೆ ಸೊಂಟ ಬಳುಕಿಸೋದು ಬಾಲಿವುಡ್‌ನ ಈ ಸ್ಟಾರ್‌ ನಟಿಯಂತೆ!

Published : Jan 09, 2024, 05:33 PM ISTUpdated : Jan 09, 2024, 05:43 PM IST

'ಪುಷ್ಪಾ-ದಿ ರೈಸ್‌' ಅಲ್ಲು ಅರ್ಜುನ್,‌ ರಶ್ಮಿಕಾ ಮಂದಣ್ಣ ಅಭಿನಯದ ಬ್ಲಾಕ್‌ಬಸ್ಟರ್ ಸಿನಿಮಾ. ಹಾಗೆಯೇ ಈ ಚಿತ್ರದಲ್ಲಿ ಸಮಂತಾ ಐಟಂ ಸಾಂಗ್ 'ಊ ಅಂಟಾವ' ಸಖತ್ ಹಿಟ್ ಆಗಿತ್ತು. ಹೀಗಾಗಿ ಪುಷ್ಪಾ-2 ಚಿತ್ರದಲ್ಲಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕಲಿರುವ ಟಾಪ್ ಹೀರೋಯಿನ್ ಯಾರು? ಅನ್ನೋದು ಕುತೂಹಲ ಮೂಡಿಸಿದೆ

PREV
18
ಪುಷ್ಪ 2 ಚಿತ್ರದ ಐಟಂ ಸಾಂಗ್‌ಗೆ ಸೊಂಟ ಬಳುಕಿಸೋದು ಬಾಲಿವುಡ್‌ನ ಈ ಸ್ಟಾರ್‌ ನಟಿಯಂತೆ!

ದೇಶದಲ್ಲಿಯೇ ಸಂಚಲನ ಮೂಡಿಸಿದ ಸಿನಿಮಾ 2021ರ ಕೊನೆಯಲ್ಲಿ ತೆರೆ ಕಂಡ ಸಿನಿಮಾ 'ಪುಷ್ಪಾ-ದಿ ರೈಸ್‌'. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರ ಎಲ್ಲಾ ಭಾಷೆಗಳಲ್ಲೂ ಸೂಪರ್‌ಹಿಟ್ ಆಗಿ ಕೋಟಿಗಟ್ಟಲೆ ಗಳಿಸಿತು. ಈ ವರ್ಷ ಪುಷ್ಪ 2 ಸಿನಿಮಾದ ಶೂಟಿಂಗ್ ಕೆಲಸಗಳು ನಡೆಯುತ್ತಿವೆ.

28
samantha

ಪ್ರಸ್ತುತ ಹೈದರಾಬಾದ್‌ನಲ್ಲಿ 'ಪುಷ್ಪಾ-2' ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಜೋಡಿಯಾಗಿ ನಟಿಸಿರುವ 'ಪುಷ್ಪಾ ದಿ ರೈಸ್'ನಲ್ಲಿ ಇವರಿಬ್ಬರ ಹೊರತಾಗಿ ಸಮಂತಾ 'ಊ ಅಂಟಾ ವಾ ಮಾವ' ಐಟಂ ಸಾಂಗ್ ಸಖತ್ ಸದ್ದು ಮಾಡಿತ್ತು.

38

ಸಮಂತಾ ಟಾಪ್ ಹೀರೋಯಿನ್ ಆಗಿದ್ದರೂ ಚಿತ್ರದಲ್ಲಿ ಐಟಂ ಸಾಂಗ್ ಮಾಡಲು ಒಪ್ಪಿದ್ದರು. ಅತ್ಯಂತ ಸಿಜ್ಲಿಂಗ್ ಆಗಿದ್ದ ಸ್ಯಾಮ್ ಡ್ಯಾನ್ಸ್‌ ಸಹ ಚಿತ್ರದ ಯಶಸ್ಸಿಗೆ ಕಾರಣವಾಯಿತು. ಇದೀಗ ಪುಷ್ಪ 2 ಚಿತ್ರದಲ್ಲೂ ಅದೇ ಸ್ಟೈಲ್ ನಲ್ಲಿ ಐಟಂ ಸಾಂಗ್ ಗೆ ನಿರ್ದೇಶಕ ಸುಕುಮಾರ್ ಪ್ಲಾನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. 
 

48

ತಮ್ಮ ಮೊದಲ ಚಿತ್ರದ ಆರಂಭದಿಂದಲೂ, ನಿರ್ದೇಶಕ ಸುಕುಮಾರ್ ಸೂಪರ್ ಹಿಟ್ ಐಟಂ ಹಾಡುಗಳನ್ನು ರಚಿಸುವಲ್ಲಿ ಹೆಸರುವಾಸಿಯಾಗಿದ್ದಾರೆ.
ಆದರೆ ಪುಷ್ಪಾ-2 ಚಿತ್ರದಲ್ಲಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕಲಿರುವ ಟಾಪ್ ಹೀರೋಯಿನ್ ಯಾರು? ಅನ್ನೋದು ಕುತೂಹಲ ಮೂಡಿಸಿದೆ

58

'ರಂಗಸ್ಥಳಂ' ಚಿತ್ರದಲ್ಲಿ ಪೂಜಾ ಹೆಗಡೆ ಐಟಂ ಸಾಂಗ್‌ ಮಾಡಿದ್ದರು.'ಪುಷ್ಪ' ಚಿತ್ರದ ಮೊದಲ ಭಾಗದಲ್ಲಿ ಸಮಂತಾ ನಟಿಸಿದ್ದರು. ಆದರೆ ಈ ಬಾರಿ
ಹಿಂದಿ ಆವೃತ್ತಿಗೆ ಕ್ರೇಜ್ ಪಡೆಯಲು ನಿರ್ಮಾಪಕರು ಈ ಐಟಂ ಸಾಂಗ್‌ಗಾಗಿ ಬಾಲಿವುಡ್‌ನ ಜನಪ್ರಿಯ ನಟಿಯನ್ನು ಆಯ್ಕೆ ಮಾಡಲು ಯೋಚಿಸುತ್ತಿದ್ದಾರೆ ಎಂದು ಮೂಲಗಳು ಹೇಳುತ್ತವೆ. 

68

ಚಿತ್ರಕ್ಕೆ ಬಾಲಿವುಡ್‌ ನಟಿಯನ್ನು ಐಟಂ ಸಾಂಗ್‌ಗೆ ಹಾಕಿಕೊಳ್ಳುವ ಮೂಲಕ ಅಲ್ಲು ಅರ್ಜುನ್ ತಮ್ಮ ಹಿಂದಿ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಐಟಂ ಸಾಂಗ್‌ಗೆ ಕೃತಿ ಸನೋನ್ ಮತ್ತು ದಿಶಾ ಪಟಾನಿ ಅವರಂತಹ ಹೆಸರುಗಳು ಕೇಳಿಬರುತ್ತಿವೆ.

78

ಪುಷ್ಪ 2 ಚಿತ್ರೀಕರಣ ಸದ್ಯ ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು, ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ನೀಡುತ್ತಿದ್ದಾರೆ.

88

ಫಹಾದ್ ಫಾಸಿಲ್, ಧನುಂಜಯ, ರಾವ್ ರಮೇಶ್, ಸುನಿಲ್, ಅನಸೂಯಾ ಭಾರದ್ವಾಜ್ ಮೊದಲಾದವರು ನಟಿಸುತ್ತಿದ್ದಾರೆ.  'ಪುಷ್ಪಾ 2' ಚಿತ್ರವನ್ನು 2024ರ ಆಗಷ್ಟ್ 15 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಚಿತ್ರತಂಡ ಹೇಳಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories