ಸದಾ ಮಾಧುರಿ ಹಿಂದಿನಿಂದ ಐ ಲವ್ಯೂ ಎಂದು ಪಿಸುಗುಟ್ಟುತ್ತಿದ್ದ ಸಂಜಯ್ ದತ್; ಬಾಲಿವುಡ್‌ನ ಜನಪ್ರಿಯ ಜೋಡಿ ಬೇರಾಗಿದ್ದೇಕೆ?

First Published | May 15, 2024, 1:54 PM IST

ಇಂದು ಒಂದು ಕಾಲದಲ್ಲಿ ಕೋಟ್ಯಂತರ ಜನರ ಕನಸಿನ ರಾಣಿಯಾಗಿದ್ದ ಮಾಧುರಿ ದೀಕ್ಷಿತ್ ಹುಟ್ಟುಹಬ್ಬ. 90ರ ದಶಕದಲ್ಲಿ ಮಾಧುರಿ ಸಂಜಯ್ ದತ್ ಜೊತೆ ಪ್ರೀತಿಯಲ್ಲಿ ಬಿದ್ದಾಗ ಹಲವು ಅಭಿಮಾನಿಗಳ ಹೃದಯ ಚೂರಾಗಿತ್ತು. 

ಬಾಲಿವುಡ್‌ನಲ್ಲಿ ಆಗಾಗ್ಗೆ ಆನ್-ಸ್ಕ್ರೀನ್ ಕೆಮಿಸ್ಟ್ರಿ ಆಫ್‌ಲೈನ್ ಲವ್ ಸ್ಟೋರಿಗಳಾಗಿ ಬದಲಾಗುತ್ತವೆ. ಸೆಲೆಬ್ರಿಟಿಗಳ ವ್ಯವಹಾರಗಳು ಮತ್ತು ಅವರ ಸಂಬಂಧಗಳು ಸುದ್ದಿಮನೆಯ ಗಾಸಿಪ್ ಅಂಗಣಕ್ಕೆ ಮೇವಾಗುತ್ತಿರುತ್ತವೆ. ಹಾಗೆ, ಹಲವಾರು ವರ್ಷಗಳ ಕಾಲ ಹಾಟ್ ಸುದ್ದಿಯಾಗಿದ್ದು ಮಾಧುರಿ ದೀಕ್ಷಿತ್ ಮತ್ತು ಸಂಜಯ್ ದತ್ ಲವ್ ಸ್ಟೋರಿ. 

ಬಾಲಿವುಡ್‌ನ ಬ್ಯಾಡ್‌ಬಾಯ್ ಎನಿಸಿಕೊಂಡ ಸಂಜಯ್ ದತ್ ಕನಸಿನ ರಾಣಿ ಮಾಧುರಿ ದೀಕ್ಷಿತ್ ಜೊತೆ ಪ್ರೀತಿ, ಪ್ರೇಮ ಪ್ರಣಯದಲ್ಲಿದ್ದರು ಎಂಬುದು ಬಾಲಿವುಡ್ಡೇ ಒಪ್ಪಿಕೊಳ್ಳುವ ಆದರೆ ಅವರಿಬ್ಬರು ಒಪ್ಪದ ವಿಷಯ. 

Tap to resize

ಸಂಜಯ್ ಮತ್ತು ಮಾಧುರಿ ಸಾಜನ್, ತಾನೇದಾರ್, ಖಲ್ನಾಯಕ್ ಮುಂತಾದ ಹಲವಾರು ಚಲನಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ ನಂತರ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. 1991ರಲ್ಲಿ, ಸಾಜನ್ ಬಿಡುಗಡೆಯ ಬಳಿಕ, ಮಾಧುರಿ ಮತ್ತು ಸಂಜಯ್ ಪ್ರೇಮ ಪ್ರಕರಣವು  ಹಾಟ್ ಟಾಪಿಕ್ ಆಗಿತ್ತು. 

ಬಾಲಿವುಡ್‌ನ ಜನಪ್ರಿಯ ನಿರ್ದೇಶಕರೊಬ್ಬರು ಹೇಳುವಂತೆ, 'ಸಂಜಯ್ ದತ್ ಯಾವಾಗಲೂ ಮಾಧುರಿಯನ್ನು ಹಿಂಬಾಲಿಸುತ್ತಿದ್ದರು ಮತ್ತು ಐ ಲವ್ ಯೂ ಎಂದು ಪಿಸುಗುಟ್ಟುತ್ತಿದ್ದರು'. ಮಾಧುರಿ ಕೂಡಾ ಒಮ್ಮೆ ಸಂದರ್ಶನದಲ್ಲಿ 'ಸಂಜಯ್ ನನ್ನನ್ನು ಸಾರ್ವಕಾಲಿಕವಾಗಿ ನಗಿಸುವ ಏಕೈಕ ವ್ಯಕ್ತಿ' ಎಂದಿದ್ದರು. 

'ಸಂಜು ಒಬ್ಬ ಅದ್ಭುತ ವ್ಯಕ್ತಿ. ಅವರು ಪ್ರೀತಿಯ ಹೃದಯವನ್ನು ಹೊಂದಿದ್ದಾನೆ ಮತ್ತು ವ್ಯಾಪಕವಾದ ದೃಷ್ಟಿಕೋನದ ಜೊತೆ ಉತ್ತಮ ಹಾಸ್ಯ ಪ್ರಜ್ಞೆಯನ್ನು ಹೊಂದಿದ್ದಾನೆ. ನನ್ನನ್ನು ಸದಾ ನಗಿಸುವ ಏಕೈಕ ವ್ಯಕ್ತಿ ಅವನು' ಎಂದು ಮಾಧುರಿ ಹೇಳಿದ್ದರು. 

ಸಂಜಯ್ ದತ್ ಬಗ್ಗೆ ಮಾಧುರಿ ನೀಡಿದ ಸಂದರ್ಶನಗಳು ಪ್ರೀತಿಯ ಬೆಂಕಿಗೆ ತುಪ್ಪ ಸುರಿದವು. ಅದಾಗಲೇ ರಿಚಾ ಶರ್ಮಾ ಜೊತೆ ಸಂಜಯ್‌ಗೆ ವಿವಾಹವಾಗಿತ್ತು. ಈ ವದಂತಿ ಜೋರಾದ ಸಮಯದಲ್ಲಿ ರಿಚಾ ಬ್ರೇನ್ ಟ್ಯೂಮರ್‌ಗಾಗಿ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 

ಆದರೆ, 1993ರಲ್ಲಿ ಮುಂಬೈ ಸರಣಿ ಸ್ಫೋಟಗಳಿಗೆ ಸಂಬಂಧಿಸಿದಂತೆ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಭಯೋತ್ಪಾದಕ ಮತ್ತು ವಿಚ್ಛಿದ್ರಕಾರಕ ಚಟುವಟಿಕೆಗಳ (ತಡೆ) ಕಾಯಿದೆಯ (ಟಾಡಾ) ನಿಬಂಧನೆಗಳ ಅಡಿಯಲ್ಲಿ ಸಂಜಯ್ ದತ್ ಬಂಧನವನ್ನು ಎದುರಿಸಿದಾಗ 'ದಯವಿಟ್ಟು ನನಗೆ ಎಂದಿಗೂ ಕರೆ ಮಾಡಬೇಡ ಎಂದು ಸಂಜುಗೆ ಹೇಳು. ಎಲ್ಲವೂ ಮುಗಿದಿದೆ ಎಂದು ಅವನಿಗೆ ಹೇಳು' ಎಂದು ಸಹೋದರಿಯ ಬಳಿ ಹೇಳಿದ್ದರಂತೆ ಮಾಧುರಿ. 

ಅಷ್ಟಾದರೂ ಅವರಿಬ್ಬರ ಸಂಬಂಧದ ವದಂತಿ ಕೊನೆ ಕಂಡಿರಲಿಲ್ಲ. ಆದರೆ  1996ರಲ್ಲಿ ಸಂಜಯ್ ದತ್ ಅವರ ಮೊದಲ ಪತ್ನಿ ರಿಚಾ ಶರ್ಮಾ ಅವರ ಪ್ರತ್ಯೇಕತೆಗೆ  ಕಾರಣವಾಗಿದ್ದ ಮಾಧುರಿಯನ್ನು ರಿಚಾ, 'ಮಾಧುರಿ ತುಂಬಾ ಅಮಾನವೀಯ. ನನ್ನ ಪ್ರಕಾರ ಮಾಧುರಿ ತನಗೆ ಬೇಕಾದ ಯಾವುದೇ ಪುರುಷನನ್ನು ಪಡೆಯಬಹುದು, ಆಕೆ ಮನೆ ಮುರುಕಿ' ಎಂದಿದ್ದರು. ಮತ್ತು 1997ರಲ್ಲಿ ಬ್ರೇನ್ ಟ್ಯೂಮರ್‌ನಿಂದ ನಿಧನವಾದರು. 

ಈ ಸಮಯದಲ್ಲಿ ಜನರು ರಿಚಾ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದರು ಮತ್ತು ಮಾಧುರಿಯನ್ನು  ಜನರು ಮನೆ ಒಡೆಯುವವಳು ಎಂದು ಕರೆಯಲಾರಂಭಿಸಿದರು. ಆಗ ಎಲ್ಲವೂ ಅಂತ್ಯ ಕಂಡಿತು. 

ಅದಾದ ಬಳಿಕ ಧಕ್-ಧಕ್ ಹುಡುಗಿ ಮಾಧುರಿ ದೀಕ್ಷಿತ್ ಸುಮಾರು 25 ವರ್ಷಗಳ ಕಾಲ ಸಂಜಯೇ ಜೊತೆ ಕೆಲಸ ಮಾಡಲಿಲ್ಲ. ಇತ್ತೀಚಿಗೆ ಕಳಂಕ್ ಚಿತ್ರದಲ್ಲಿ ಮತ್ತೆ ಇವರಿಬ್ಬರು ಒಟ್ಟಾಗಿ ಕಾಣಿಸಿಕೊಂಡರು. 

Latest Videos

click me!