'ಭಜರಂಗಿ ಭಾಯಿಜಾನ್‌'ನ ಮುದ್ದು ಪುಟಾಣಿ ಎಂಥಾ ಸುಂದರಿ ನೋಡಿದೀರಾ? ರೀಲ್ಸ್ ಮಾಡ್ಬೇಡ ಅಂದೋರಿಗೆ ಮಾರ್ಕ್ಸ್ ತೋರಿಸಿದ ಬೆಡಗಿ

First Published | May 15, 2024, 12:31 PM IST

'ನನ್ನ ಹೇಟರ್ಸ್‌ಗೆ ಥ್ಯಾಂಕ್ಸ್' ರೀಲ್ಸ್ ಮಾಡೋದ್ ಬಿಟ್ಟು ಓದ್ಕೋ ಎಂದೋರಿಗೆ ಎಸ್ಸೆಸ್ಸೆಲ್ಸಿ ಮಾರ್ಕ್ಸ್ ತೋರಿಸಿದ ಹರ್ಷಾಲಿ ಮಲ್ಹೋತ್ರಾ. ರೀಲ್ಸ್, ಕಥಕ್, ಓದು ಎಲ್ಲದರಲ್ಲೂ ಮುಂದು ಈ ಹುಡುಗಿ..

2015ರ ಸೂಪರ್ ಹಿಟ್ ಬಾಲಿವುಡ್ ಚಲನಚಿತ್ರ ಭಜರಂಗಿ ಭಾಯಿಜಾನ್. ಇದರಲ್ಲಿ ಮುದ್ದು ಮುಖ, ಚೆಂದದ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದು ಪುಟ್ಟ ಹುಡುಗಿ ಹರ್ಷಾಲಿ ಮಲ್ಹೋತ್ರಾ. 

ಈಚಿನ ವರ್ಷಗಳಲ್ಲಿ ಹರ್ಷಾಲಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಹಳ ಆ್ಯಕ್ಟಿವ್ ಆಗಿದ್ದಾಳೆ. ಈಗಷ್ಟೇ 10ನೇ ತರಗತಿ ಪೂರೈಸಿರುವ ಹರ್ಷಾಲಿ ಸುಂದರಿಯಾಗಿದ್ದಾಳೆ. ಭವಿಷ್ಯದ ಬಾಲಿವುಡ್ ಹೀರೋಯಿನ್ ಆಗೋ ಲಕ್ಷಣಗಳನ್ನು ತೋರಿಸುತ್ತಿದ್ದಾಳೆ. 

Tap to resize

ಸದಾ ಇನ್ಸ್ಟಾ ಖಾತೆಯಲ್ಲಿ ತನ್ನ ಕಥಕ್ ನೃತ್ಯ ಮತ್ತಿತರೆ ರೀಲ್ಸ್‌ಗಳನ್ನು ಶೇರ್ ಮಾಡಿಕೊಳ್ಳುವ ಹರ್ಷಾಲಿಯ ವಿಡಿಯೋಗಳನ್ನು ಅನೇಕರು ಇಷ್ಟ ಪಟ್ಟರೂ, ಮತ್ತೆ ಕೆಲವರು ಓದಿನ ಕಡೆ ಗಮನ ಕೊಡು ಎಂದು ಕಾಮೆಂಟ್ ಮಾಡುತ್ತಿದ್ದರು. 

ಇನ್ನೂ ಚಿಕ್ಕವಳು, ರೀಲ್ಸ್ ಬಿಟ್ಟು ರಿಯಲ್ ಲೈಫಲ್ಲಿ ಬದುಕು, ಕುಣಿತ ಬಿಟ್ಟು ಓದು, ಬರೀ ಸೋಷ್ಯಲ್ ಮೀಡಿಯಾದಲ್ಲಿದ್ರೆ ಯಾವಾಗ ಓದ್ತೀಯಾ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದರು. 

ಇದೀಗ ಹರ್ಷಾಲಿ ಇವರೆಲ್ಲರಿಗೆ ತನ್ನ ಸಿಬಿಎಸ್ಸಿ 10ನೇ ತರಗತಿಯ ಫಲಿತಾಂಶದ ಮೂಲಕ ಉತ್ತರಿಸಿದ್ದಾಳೆ. ತನ್ನ ಮಾರ್ಕ್ಸ್ ಶೇರ್ ಮಾಡಿಕೊಂಡು, 'ಹೇಟರ್ಸ್‌ಗೆ ದೊಡ್ಡ ಥ್ಯಾಂಕ್ಸ್' ಎಂದಿದ್ದಾಳೆ.

ಅಂದ ಹಾಗೆ ಹರ್ಷಾಲಿ 10ನೇ ತರಗತಿಯಲ್ಲಿ ಪಡೆದ ಅಂಕ ಶೇ.83. ಈ ರಿಪೋರ್ಟ್ ಕಾರ್ಡನ್ನು ಹಂಚಿಕೊಂಡಿರುವ ಹರ್ಷಾಲಿ ನಾನು ರೀಲ್ಸ್‌ಗೂ ಸೈ, ರಿಯಲ್‌ ಲೈಫ್‌ಗೂ ಸೈ ಎಂದಿದ್ದಾಳೆ. 

ಕಥಕ್ ಕಲಿಕೆ, ರೀಲ್ಸ್, ಓದು ಎಲ್ಲವನ್ನೂ ನಿಭಾಯಿಸುವ ಶಕ್ತಿ ನನಗಿದೆ ಎಂದು ಹರ್ಷಾಲಿ ವಿಶಿಷ್ಠವಾದ ವಿಡಿಯೋ ಮೂಲಕ ಉತ್ತರ ನೀಡಿದ್ದಾಳೆ. 

ಇದಕ್ಕೆ ಬಳಕೆದಾರರೊಬ್ಬರು ಕಾಮೆಂಟ್ ಮಾಡಿ, 'ನೀನು ಬ್ಯೂಟಿ ವಿತ್ ಬ್ರೇನ್' ಎಂದಿದ್ದಾರೆ. ಮತ್ತೊಬ್ಬರು, 'ಕೆಲವರು ಕೇವಲ ರೀಲ್ಸ್ ನೋಡುತ್ತಾ ಕಾಲಹರಣ ಮಾಡುತ್ತಾರೆ, ಅಂಥವರಿಂದಷ್ಟೇ ನೆಗೆಟಿವ್ ಕಾಮೆಂಟ್ ಬರಲು ಸಾಧ್ಯ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡ' ಎಂದಿದ್ದಾರೆ. 

ಕಥಕ್ ನೃತ್ಯ ಕಲಿಯಲ್ಲಿ ತೊಡಗಿರುವ ಹರ್ಷಾಲಿ ಅತ್ಯುತ್ತಮ ಮುಖಭಾವವನ್ನು ಹೊಮ್ಮಿಸುತ್ತಾ ಅದ್ಭುತವಾಗಿ ನೃತ್ಯ ಮಾಡುತ್ತಾಳೆ.

ಇತ್ತೀಚೆಗೆ ಆಕೆ, 'ಹೀರಾಮಂಡಿ'ಯ ಆಲಮ್‌ಜೇಬ್‌ಳಂತೆ ಮೇಕಪ್ ಮಾಡಿಕೊಂಡು ಅಭಿನಯಿಸಿರುವ ರೀಲ್ಸ್ ಸಖತ್ ಲೈಕ್ಸ್ ಗಳಿಸಿದೆ. ನಿರ್ದೇಶಕರು ಈಕೆಯನ್ನೇ ಪಾತ್ರಕ್ಕೆ ಹಾಕಿಕೊಳ್ಳಬಹುದಿತ್ತು ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. 

Latest Videos

click me!