ಹೀಗಿತ್ತು ನೋಡಿ Rashmika Mandanna 2025ನೇ ವರ್ಷ…. ತಂಗಿ ಜೊತೆಗಿನ ಸೆಲ್ಫಿ ಭಾರಿ ವೈರಲ್

Published : Jan 01, 2026, 01:21 PM IST

Rashmika Mandanna: ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣಗೆ 2025 ಅತ್ಯಂತ ಬ್ಯುಸಿಯಾದ ವರ್ಷವಾಗಿತ್ತು. ರಶ್ಮಿಕಾ ನಟಿಸಿರುವ ಐದು ಸಿನಿಮಾಗಳು ಬಿಡುಗಡೆಯಾಗಿದ್ದವು, ಇದೀಗ 2025ಕ್ಕೆ ಗುಡ್ ಬೈ ಹೇಳಿ, 2026ನ್ನು ಬರಮಾಡಿಕೊಳ್ಳುವ ಸಮಯದಲ್ಲಿ ಹಳೆಯ ನೆನಪುಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

PREV
110
ರಶ್ಮಿಕಾ ಮಂದಣ್ಣ

ದಕ್ಷಿಣ ಭಾರತ ಮತ್ತು ಬಾಲಿವುಡ್ ನಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ 2025ರ ಅತ್ಯಂತ ಬ್ಯುಸಿ ನಟಿ ಎಂದೇ ಹೇಳಬಹುದು. ಯಾಕಂದರೆ ಕಳೆದ ವರ್ಷ ಅವರು ನಟಿಸಿದ ಸಿನಿಮಾಗಳು ಒಂದೆರಡಲ್ಲ ಬರೋಬ್ಬರಿ ಐದು ಸಿನಿಮಾಗಳು.

210
2025 ರ ನೆನಪುಗಳು

ಇದೀಗ 2025ಕ್ಕೆ ಗುಡ್ ಬೈ ಹೇಳಿ, 2026ನ್ನು ಬರಮಾಡಿಕೊಳ್ಳುವ ಸಮಯದಲ್ಲಿ ರಶ್ಮಿಕಾ ಮಂದಣ್ಣ ಕಳೆದ ವರ್ಷ ನಡೆದ ಮಧುರ ನೆನಪುಗಳ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ, ಸ್ನೇಹಿತರು, ಅಮ್ಮ-ಅಪ್ಪ, ಮುದ್ದಿನ ತಂಗಿನ ಫೋಟೊ ಕೂಡ ಸೇರಿದೆ.

310
ಮುದ್ದಿನ ತಂಗಿ ಶಿಮನ್ ಮಂದಣ್ಣ

ರಶ್ಮಿಕಾ ಮತ್ತು ಅವರ ಸಹೋದರಿ ಶಿಮನ್ ಮಂದಣ್ಣ ನಡುವೆ ಸುಮಾರು 16 ವರ್ಷಗಳ ಗ್ಯಾಪ್ ಇದೆ. ಹಾಗಾಗಿ ತಂಗಿಗೆ ತನ್ನ ಜನಪ್ರಿಯತೆಯಿಂದ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ನಟಿ ತಂಗಿ ಜೊತೆಗಿನ ಫೋಟೊಗಳನ್ನು ಹೆಚ್ಚಾಗಿ ಪೋಸ್ಟ್ ಮಾಡುತ್ತಲೇ ಇರಲಿಲ್ಲ.

410
ತಂಗಿ ಜೊತೆಗಿನ ಸೆಲ್ಫಿ ವೈರಲ್

ಇದೀಗ ಹೊಸ ವರ್ಷದ ಶುರು ವಾಗಿರೋದರಿಂದ ತಮ್ಮ ಮುದ್ದಿನ ತಂಗಿ ಶಿಮನ್ ಜೊತೆಗಿನ ಮುದ್ದಾದ ಸೆಲ್ಫಿ ಫೋಟೊವನ್ನು ರಶ್ಮಿಕಾ ಶೇರ್ ಮಾಡಿದ್ದು, ಇದೀಗ ಫೋಟೊ ವೈರಲ್ ಆಗುತ್ತಿದೆ. ಅಕ್ಕನಂತೆ ತಂಗಿಯೂ ಮುದ್ದಾಗಿದ್ದು, ಈಗ ಶಿಮನ್ ಗೆ 14 ವರ್ಷ ವಯಸ್ಸು.

510
ವರ್ಕೌಟ್ ಮಿಸ್ ಮಾಡದ ರಶ್ಮಿಕಾ

ರಶ್ಮಿಕಾ ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಅವರು ಯಾವುದನ್ನೂ ಮಿಸ್ ಮಾಡಿದ್ರೂ ಜಿಮ್, ವರ್ಕೌಟ್ ಮಿಸ್ ಮಾಡೋದೆ ಇಲ್ಲ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲೂ ನಟಿ ತಮ್ಮ ವರ್ಕೌಟ್ ಫೋಟೊಗಳನ್ನು ಶೇರ್ ಮಾಡಿದ್ದಾರೆ.

610
ಫ್ರೆಂಡ್ಸ್ ಜೊತೆ ಟ್ರಾವೆಲ್

ಇನ್ನು ರಶ್ಮಿಕಾ ಕಳೆದ ವರ್ಷ ಅಷ್ಟೊಂದು ಬ್ಯುಸಿಯಾಗಿರುವುದರ ನಡುವೆ ಫ್ರೆಂಡ್ಸ್ ಜೊತೆ ಟ್ರಾವೆಲ್ ಮಾಡೋದನ್ನು ಮರೆಯಲಿಲ್ಲ. ಆದರೆ ವಿಜಯ್ ದೇವರಕೊಂಡ ಜೊತೆಗಿನ ಫೋಟೊಗಳನ್ನು ಮಾತ್ರ ನಟಿ ಮಿಸ್ ಮಾಡಿದ್ದಾರೆ.

710
ಪೂಜೆಗಳಲ್ಲೂ ಭಾಗಿ

ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಮನೆಯಲ್ಲಿ ಹಲವಾರು ಪೂಜೆಗಳಲ್ಲಿ ಭಾಗವಹಿಸಿರುವ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಟಿ ಹಂಚಿಕೊಂಡ ಫೋಟೊಗಳನ್ನು ಚೆಂದನೆಯ ಸೀರೆಯುಟ್ಟು, ಹಣೆಗೆ ತಿಲಕವನ್ನಿಟ್ಟು ಪೋಸ್ ಕೊಟ್ಟಿರೋದು ನೋಡಿದರೆ, ಪೂಜೆಯಲಿ ಭಾಗವಹಿಸಿದಂತೆ ಕಾಣಿಸುತ್ತೆ.

810
ಹಲವಾರು ಮ್ಯಾಗಜೀನ್ ಗಳ ಕವರ್ ಪೇಜ್

ಇನ್ನು 2025ರಲ್ಲಿ ರಶ್ಮಿಕಾ ಮಂದಣ್ಣ ಫೆಮಿನಾ, ದಿ ಹಾಲಿವುಡ್ ರಿಪೋರ್ಟ್, ಡಾರ್ಟಿ ಕಟ್ ಸೇರಿ ಹಲವಾರು ಮ್ಯಾಗಜೀನ ಗಳ ಕವರ್ ಪೇಜ್ ಗಳಲ್ಲೂ ಕಾಣಿಸಿಕೊಂಡಿದ್ದಾರೆ. ಜೊತೆಗೆ ಪರ್ಸನಲ್ ಟೈಮ್ ಕೂಡ ಎಂಜಾಯ್ ಮಾಡಿದ್ದಾರೆ ನಟಿ.

910
ನಟಿಸಿರುವ ಸಿನಿಮಾಗಳು

2025ರಲ್ಲಿ ರಶ್ಮಿಕಾ ಛವ್ವಾ, ಸಿಕಂದರ್, ಕುಬೇರಾ, ಥಾಮ, ದಿ ಗರ್ಲ್ ಫ್ರೆಂಡ್, ಸಿನಿಮಾಗಳಲ್ಲಿ ನಟಿಸಿದ್ದು, ಸಿಕಂದರ್ ಬಿಟ್ಟು ಮತ್ತೆಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಇದಲ್ಲದೇ ಮುಂದಿನ ವರ್ಷ ಮೈಸಾ ಮತ್ತು ಕಾಕ್ ಟೇಲ್ 2 ಸಿನಿಮಾಗಳಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ.

1010
ವಿಜಯ್ ದೇವರಕೊಂಡ ಜೊತೆ ಮದುವೆ

ಇನ್ನು 2025ರ ಅತಿ ಹೆಚ್ಚು ಚರ್ಚಿತ ವಿಷಯ ಏನೆಂದರೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಎಂಗೇಜ್’ಮೆಂಟ್ ಮಾಡಿಕೊಂಡಿದ್ದಾರೆ ಎನ್ನುವುದು. ಆದರೆ ಈ ವಿಷಯವನ್ನು ಯಾರೂ ಅಧಿಕೃತವಾಗಿ ಹೊರ ಹಾಕಿಲ್ಲ. ಅಲ್ಲದೇ ಈ ವರ್ಷ ಫೆಬ್ರುವರಿ 26ರಂದು ಉದಯಪುರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಕೂಡ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories