ಅಣ್ಣನ ಮದ್ವೆಲ್ಲಿ ಪೂಜಾ ಹೆಗ್ಡೆ ಫುಲ್ ಮಿಂಚಿಂಗ್: ಭಾವುಕ ಬರಹದ ಮೂಲಕ ಅತ್ತಿಗೆಗೆ ಸ್ವಾಗತ

First Published | Jan 30, 2023, 1:31 PM IST

ಟಾಲಿವುಡ್‌ , ಬಾಲಿವುಡ್ ಸೇರಿ ಹಲವು ಭಾಷೆಗಳ ಸಿನಿಮಾದಲ್ಲಿ ನಟಿಸಿರುವ ನಟಿ ಪೂಜಾ ಹೆಗ್ಡೆ ಮನೆಯಲ್ಲಿ ಮದುವೆ ಸಂಭ್ರಮ ವೇರ್ಪಟ್ಟಿದೆ. ಪೂಜಾ ಹೆಗ್ಡೆ ಸಹೋದರ ರಿಷಭ್ ಹೆಗ್ಡೆ ಮದುವೆ ಇತ್ತೀಚೆಗೆ ನಡೆದಿದ್ದು, ಮದುವೆಯ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ನಟಿ ಭಾವುಕವಾಗಿ ಬರೆದುಕೊಂಡಿದ್ದಾರೆ. 

ಪೂಜಾ ಹೆಗ್ಡೆ ಸಹೋದರ ರಿಷಭ್ ಹೆಗ್ಡೆ  ತಮ್ಮ ಬಹುಕಾಲದ ಗೆಳತಿ ಶಿವನಿ ಶೆಟ್ಟಿ ಅವರನ್ನು ವಿವಾಹವಾಗಿದ್ದಾರೆ. ಈ ವಿವಾಹದ ಮೇಲುಸ್ತುವಾರಿಯನ್ನು ಸ್ವತಃ ಪೂಜಾ ಹೆಗ್ಡೆ ನೋಡಿಕೊಂಡಿದ್ದರು. 

ಅಣ್ಣನ ಮದುವೆಯಲ್ಲಿ ರೇಷ್ಮೆ ಶಲ್ಯ, ಪಂಚೆಯಲ್ಲಿ ಮಿಂಚಿದ ಸಂಬಂಧಿಗಳ ಜೊತೆ ಪೂಜಾ ಹೆಗ್ಡೆ ಸಖತ್ ಫೋಸ್. ಆರೆಂಜ್ ಸೇಡ್‌ನ ರೇಷ್ಮೆ ಸೀರೆಯಲ್ಲಿ ಮಿಂಚಿದ ಪೂಜಾ

Tap to resize

ಅಣ್ಣನ ಮದುವೆ ಹಿನ್ನೆಲೆಯಲ್ಲಿ ವಾರಗಳ ಕಾಲ ತಮ್ಮ ಕೆಲಸವನ್ನು ಬದಿಗಿಟ್ಟು ಮನೆಯಲ್ಲೇ ಇದ್ದ ಪೂಜಾ ಅಣ್ಣನ ಮದುವೆಗೆ ಎಲ್ಲ ವ್ಯವಸ್ಥೆ ಮಾಡಿದ್ದರು. 

ಮದುವೆಯ ಹಲವು ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡ ಅವರು ಭಾವುಕ ಬರಹವೊಂದನ್ನು ಇನಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 

ನನ್ನ ಸಹೋದರ ಆತನ ಜೀವನದ ಪ್ರೀತಿಯನ್ನು ಮದುವೆಯಾಗಿದ್ದಾನೆ. ಎಂಥಹಾ ಏರಿಳಿತದ ವಾರ ಅದಾಗಿತ್ತು. ನಾ ಸಂತೋಷದಿಂದ ಕಣ್ಣೀರಿಟ್ಟೆ , ಜೊತೆ ಜೊತೆಗೆ ಮಗುವಿನಂತೆ ನಕ್ಕೆ,  ಅಣ್ಣ  ನೀನು ನಿನ್ನ ಜೀವನದ ಮತ್ತೊಂದು ಹಂತಕ್ಕೆ ಕಾಲಿರಿಸಿದ್ದು,  ನಿನ್ನ ಜೀವನದಲ್ಲಿ ಪ್ರೀತಿ ಶಾಂತಿ ಎಲ್ಲವೂ ತುಂಬಿರಲಿ. 

ಇಬ್ಬರೂ ಪರಸ್ಪರರನ್ನು ಅರ್ಥ ಮಾಡಿಕೊಂಡು ಸುಂದರ ಜೀವನ ನಿಮ್ಮದಾಗಲಿ, ಸುಂದರವಾದ ಬೆರಗುಗೊಳಿಸುವ ವಧು ಶಿವಾನಿಗೆ ನಮ್ಮ ಕುಟುಂಬಕ್ಕೆ ಸ್ವಾಗತ ಎಂದು ಪೂಜಾ ಹೆಗ್ಡೆ ಬರೆದುಕೊಂಡಿದ್ದು, ಅಣ್ಣನ ದಾಂಪತ್ಯ ಜೀವನಕ್ಕೆ ಶುಭ ಹಾರೈಸಿ ಅತ್ತಿಗೆಯನ್ನು ಮನೆಗೆ ಸ್ವಾಗತಿಸಿದ್ದಾರೆ. 

ಇದೇ ವೇಳೆ ಪೂಜಾ ಹೆಗ್ಡೆ ನವ ದಂಪತಿ ಜೊತೆ ಅಪ್ಪ ಅಮ್ಮ ಹಾಗೂ ತಾವಿರುವ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

Latest Videos

click me!