'ನಾನು ದಕ್ಷಿಣದವಳು, ಭಾರತೀಯಳಂತೆ ಕಾಣುತ್ತೇನೆ' ಕಾಂಗ್ರೆಸ್ ನಾಯಕನಿಗೆ ತಿರುಗೇಟು ಕೊಟ್ಟ ಪ್ರಣಿತಾ ಸುಭಾಷ್

First Published | May 9, 2024, 2:26 PM IST

ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ವರ್ಣಬೇಧ ನೀತಿಯ ಮಾತುಗಳು ದೊಡ್ಡ ವಿವಾದ ಹುಟ್ಟು ಹಾಕಿದೆ. ಇದೀಗ ನಟಿ ಪ್ರಣೀತಾ ಸುಭಾಷ್, ಅಣ್ಣಾಮಲೈ, ನಿರ್ಮಲಾ ಸೀತಾರಾಮನ್ ಸೇರಿದಂತೆ ಅನೇಕರು ಈ ಮಾತಿಗೆ ತಿರುಗೇಟು ನೀಡುತ್ತಿದ್ದಾರೆ. 

ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್‌ನ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ದಿ ಸ್ಟೇಟ್ಸ್‌ಮನ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಇತ್ತೀಚಿನ ಕಾಮೆಂಟ್‌ಗಳಿಂದ ವಿವಾದವನ್ನು ಹುಟ್ಟುಹಾಕಿದ್ದಾರೆ.

ಭಾರತದ ವೈವಿಧ್ಯಮಯ ಸ್ವಭಾವದ ಕುರಿತು ಮಾತನಾಡಿದ ಅವರು, 'ಪೂರ್ವದಲ್ಲಿ ಚೀನಿಯರಂತೆ ಕಾಣುತ್ತಾರೆ, ಪಶ್ಚಿಮದಲ್ಲಿ ಜನರು ಅರಬ್ಬರಂತೆ ಕಾಣುತ್ತಾರೆ, ಉತ್ತರದ ಜನರು ಬಹುಶಃ ಬಿಳಿಯರಂತೆ ಮತ್ತು ದಕ್ಷಿಣದ ಜನರು ಆಫ್ರಿಕನ್ನರಂತೆ ಕಾಣುತ್ತಾರೆ' ಎಂದು ಹೇಳಿದ್ದಾರೆ. 

Tap to resize

ಅವರ ಈ ವರ್ಣಬೇಧ ನೀತಿಯ ಮಾತು ದೊಡ್ಡ ವಿವಾದವನ್ನೇ ಹುಟ್ಟುಹಾಕಿದೆ. ಅದರಲ್ಲೂ 'ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ ಕಾಣುತ್ತಾರೆ' ಎಂಬ ಮಾತು ದಕ್ಷಿಣ ಭಾರತೀಯರನ್ನು ಕೆಣಕಿದೆ. 

ಇದಕ್ಕೆ ನಟಿ ಪ್ರಣೀತಾ ಸುಭಾಷ್ ಕೂಡಾ ಖಡಕ್ ಮರುತ್ತರ ಕೊಟ್ಟಿದ್ದು, 'ನಾನು ದಕ್ಷಿಣದವಳು, ಭಾರತೀಯಳಂತೆ ಕಾಣುತ್ತೇನೆ' ಎಂದಿದ್ದಾರೆ. 

ಈ  ಮೂಲಕ ಕಾಂಗ್ರೆಸ್ ನಾಯಕ ಭಾರತೀಯರನ್ನೇ ಚರ್ಮದ ಬಣ್ಣಕ್ಕನುಗುಣವಾಗಿ ವಿಭಾಗಿಸಿ ನೋಡುತ್ತಿದ್ದಾರೆ.. ಆದರೆ ನಾವೆಲ್ಲರೂ ಭಾರತೀಯರಷ್ಟೇ ಎಂಬ ಸಂದೇಶ ಕೊಟ್ಟಿದ್ದಾರೆ. 

ಪೊರ್ಕಿ ನಟಿಯ ಈ ಹೇಳಿಕೆಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಸಹಮತ ವ್ಯಕ್ತಪಡಿಸಿದ್ದು, ಎಲ್ಲರೂ ತಾವೂ ಕೂಡಾ ಭಾರತೀಯರು ಎಂದು ಒತ್ತಿ ಹೇಳಿದ್ದಾರೆ. 

ಪಿತ್ರೋಡಾ ಅವರ ಟೀಕೆಗಳನ್ನು ಉದ್ದೇಶಿಸಿ ಹಣಕಾಸು ಸಚಿವೆ, ತಮಿಳುನಾಡು ಮೂಲದ ನಿರ್ಮಲಾ ಸೀತಾರಾಮನ್ ಕೂಡಾ 'ನಾನು ದಕ್ಷಿಣ ಭಾರತೀಯ! ಮತ್ತು ನಾನು ಭಾರತೀಯಳಂತೆ ಕಾಣುತ್ತೇನೆ' ಎಂದು ಎಕ್ಸ್‌ನಲ್ಲಿ ಕಿಡಿ ಹಚ್ಚಿದ್ದಾರೆ. 

ಇನ್ನು ತಮಿಳುನಾಡಿನ ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಕೂಡಾ ಎಕ್ಸ್ ಖಾತೆಯಲ್ಲಿ ಪಿತ್ರೋಡಾ ಮಾತಿಗೆ ಪ್ರತಿಕ್ರಿಯೆ ನೀಡಿದ್ದು, 'ಡಿಯರ್ ಸ್ಯಾಮ್ ಪಿತ್ರೋಡಾ, ನಾನು ಕಪ್ಪು ಚರ್ಮದ ಭಾರತೀಯ' #ಹೆಮ್ಮೆಯ ಭಾರತೀಯ ಎಂದು ಹ್ಯಾಷ್‌ಟ್ಯಾಗ್ ಸೇರಿಸಿ ಬರೆದಿದ್ದಾರೆ. 

Latest Videos

click me!